/newsfirstlive-kannada/media/post_attachments/wp-content/uploads/2024/12/BBK-11-Dhanaraj-Bhavya.jpg)
ಕನ್ನಡ ಕಿರುತೆರೆಯ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 11 ದಿನಕ್ಕೊಂದು ಟ್ವಿಸ್ಟ್ ಪಡೆದುಕೊಳ್ಳುತ್ತಾ ಇದೆ. ಮನೆಯಲ್ಲಿರೋ ಸ್ಪರ್ಧಿಗಳು ಭರ್ಜರಿ ಮನರಂಜನೆ ಕೊಡುತ್ತಾ ಇದ್ದು, ಜಿದ್ದಾಜಿದ್ದಿನ ಹೋರಾಟಕ್ಕೆ ಬಿಗ್ ಬಾಸ್ ಸಾಕ್ಷಿಯಾಗುತ್ತಿದೆ. ಈ ವಾರ ಬಿಗ್ ಬಾಸ್ ಮನೆ ರೆಸಾರ್ಟ್ ಆಗಿ ಪರಿವರ್ತನೆ ಆಗಿದ್ದು, ಆಟದ ಮಧ್ಯೆ ಧನರಾಜ್ ಅವರು ಯಡವಟ್ಟು ಮಾಡಿಕೊಂಡಿದ್ದಾರೆ.
ಈ ವಾರದ ಟಾಸ್ಕ್‌ನಲ್ಲಿ ಬಿಗ್ ಬಾಸ್ ಮನೆಯನ್ನ ರೆಸಾರ್ಟ್ ಆಗಿ ಚೇಂಜ್ ಮಾಡಲಾಗಿದೆ. 2 ತಂಡಗಳಲ್ಲಿ ಒಂದು ತಂಡ ರೆಸಾರ್ಟ್‌ಗೆ ಬಂದ ಅತಿಥಿಗಳಾಗಿ ರೆಸಾರ್ಟ್ ಸಿಬ್ಬಂದಿಯ ಸೇವೆ ಪಡೆಯುತ್ತಿದ್ದಾರೆ. ರೆಸಾರ್ಟ್‌ಗೆ ಬಂದ ಅತಿಥಿಗಳ ಉಪಚಾರದ ಮಧ್ಯೆ ಅಪಚಾರವೊಂದು ನಡೆದು ಹೋಗಿದೆ.
ಇದನ್ನೂ ಓದಿ: BBK11: ಬಿಗ್ಬಾಸ್ ಮನೆಯಲ್ಲಿ ಮತ್ತೊಮ್ಮೆ ಮಿತಿ ಮೀರಿದ ವರ್ತನೆ.. ಮೋಕ್ಷಿತಾ ಮೇಲೆ ಮಂಜು ಉಗ್ರಾವತಾರ!
ಬಿಗ್ ಬಾಸ್ ಮನೆಯ ಕಿಚನ್‌ನಲ್ಲಿ ಭವ್ಯ ಅವರು ಅಡುಗೆ ಮಾಡುವಾಗ ಮೋಕ್ಷಿತಾ ಹಾಗೂ ರಜತ್ ಅವರು ಚಿಕನ್ ಅನ್ನ ತೆಗೆದುಕೊಂಡು ತಿಂದಿದ್ದಾರೆ. ಈ ಮಧ್ಯೆ ಧನರಾಜ್ ಅವರು ಕೂಡ ಗೊತ್ತಿಲ್ಲದೇ ಚಿಕನ್ ಅನ್ನು ಬಾಯಿಯಲ್ಲಿ ಇಟ್ಟುಕೊಂಡಿದ್ದಾರೆ. ಸಸ್ಯಹಾರಿ ಆದ ಧನರಾಜ್ ಅವರಿಗೆ ಚಿಕನ್ ಅನ್ನೋ ಶಬ್ಧ ಕೇಳಿ ಬೆಚ್ಚಿ ಬಿದ್ದಿದ್ದಾರೆ.
ಗೊತ್ತಿಲ್ಲದೆ ಆದ ಅಪಚಾರಕ್ಕೆ ಧನರಾಜ್ ಆಚಾರ್ಯ ಅವರ ಪರದಾಡಿದ್ದಾರೆ. ಕೂಡಲೇ ಚಿಕನ್ ಅನ್ನ ಬಾಯಿಂದ ತೆಗೆದು ನೀರಿನಲ್ಲಿ ತೊಳೆದು ಪಶ್ಚಾತಾಪ ಪಟ್ಟಿದ್ದಾರೆ. ಧನರಾಜ್ ಆಚಾರ್ಯ ಅವರ ಪೀಕಲಾಟ ನೋಡಿದ ರಜತ್, ಮೋಕ್ಷಿತಾ ಅವರು ಫುಲ್ ಕಾಮಿಡಿ ಮಾಡಿದ್ದಾರೆ. ಭವ್ಯ ಅವರಂತೂ ಧನರಾಜ್ ಆಡಿದ ರೀತಿಗೆ ಬಿದ್ದು, ಬಿದ್ದು ನಕ್ಕಿದ್ದಾರೆ. ರಜತ್, ಧನರಾಜ್ ಅವರಿಗೆ ಈಗ ಹಸುವಿನ ಗಂಜಲ ಕುಡಿಸಬೇಕು ಎಂದು ಕಾಲೆಳೆದಿದ್ದಾರೆ.
ಕಣ್ತಪ್ಪಿನಿಂದ ಚಿಕನ್ ಟೇಸ್ಟ್ ಮಾಡಿದ ಧನರಾಜ್ ಅವರು ಕೊನೆಗೆ ಬಿಗ್ ಬಾಸ್ ಮನೆಯಲ್ಲಿರುವ ದೇವರ ಬಳಿ ಹೋಗಿ ಕ್ಷಮೆಯಾಚಿಸಿದ್ದಾರೆ. ಗೊತ್ತಿಲ್ಲದ ಮಾಡಿದ ಯಡವಟ್ಟಿಗೆ ದೇವರ ಬಳಿ ಕ್ಷಮೆ ಯಾಚಿಸಿ ಮರುಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ