BBK11: ಬಿಗ್ ಬಾಸ್ ಮನೆಯಲ್ಲಿ ಐಶ್ವರ್ಯಗೆ ಬಿಗ್ ಶಾಕ್‌.. ಗಂಟು ಮೂಟೆ ಕಟ್ಟಿದ್ದು ಯಾರು?

author-image
admin
Updated On
BBK11: 90 ದಿನಕ್ಕೆ ಬಿಗ್​ಬಾಸ್​ ಮನೆಯ ಆಟ ಮುಗಿಸಿದ ಐಶ್ವರ್ಯಾ ಸಿಂಧೋಗಿ; ಸೋಲಿಗೆ 5 ಕಾರಣವೇನು?
Advertisment
  • ಸೂಪರ್ ಸಂಡೇ ಎಪಿಸೋಡ್‌ನಲ್ಲಿ ಒಬ್ಬರಿಗಷ್ಟೇ ಗೇಟ್ ಪಾಸ್‌!
  • ಕ್ಯಾಪ್ಟನ್​ ಭವ್ಯಾ ಅವರಿಂದ ನಾಮಿನೇಟ್ ಆದವರಿಗೆ ಬಿಗ್ ಶಾಕ್
  • ಚೈತ್ರಾ, ಗೌತಮಿ​, ಮೋಕ್ಷಿತಾ, ತ್ರಿವಿಕ್ರಮ್​, ಮಂಜು ಹಾಗೂ ಐಶ್ವರ್ಯ

ಬಿಗ್ ಬಾಸ್ ಸೀಸನ್ 11 ಭರ್ತಿ 90 ದಿನಗಳನ್ನ ಯಶಸ್ವಿಯಾಗಿ ಪೂರೈಸಿದೆ. ಉಳಿದ 10 ಸ್ಪರ್ಧಿಗಳಲ್ಲಿ ಈಗ ಮತ್ತೊಬ್ಬರು ಬಿಗ್ ಬಾಸ್ ಮನೆಯಿಂದ ಆಚೆ ಬಂದಿದ್ದಾರೆ. ಇವತ್ತಿನ ಸೂಪರ್ ಸಂಡೇ ವಿತ್ ಬಾದ್​ಷಾ ಸುದೀಪ ಎಪಿಸೋಡ್‌ನಲ್ಲಿ ಎಲಿಮಿನೇಷನ್‌ಗೆ ಹೊಸ ಟ್ವಿಸ್ಟ್ ಸಿಕ್ಕಿದೆ. ಕಳೆದ 12 ವಾರಗಳಿಂದ ಉತ್ತಮ ಪ್ರದರ್ಶನ ತೋರಿದ್ದ ಸ್ಪರ್ಧಿಯೊಬ್ಬರು ಇವತ್ತು ಬಿಗ್ ಬಾಸ್ ಮನೆಯಿಂದ ಹೊರ ಬರಲಿದ್ದಾರೆ.

ಬಿಗ್ ಬಾಸ್ ಸೀಸನ್ 11ರ 10ನೇ ವಾರದಲ್ಲಿ ಶಿಶಿರ್ ಅವರು ಎಲಿಮಿನೇಟ್ ಆದರು. ಅದೇ ವಾರದಲ್ಲಿ ವೈಯಕ್ತಿಕ ಕಾರಣಗಳಿಂದ ಗೋಲ್ಡ್ ಸುರೇಶ್ ಅವರು ದಿಢೀರ್ ಮನೆಯಿಂದ ಹೊರ ಬಂದು ಎಲ್ಲರಿಗೂ ಶಾಕ್ ಕೊಟ್ಟಿದ್ದರು. ಇದಾದ ಮೇಲೆ 11ನೇ ವಾರದಲ್ಲಿ ಎಲಿಮಿನೇಷನ್ ಬಿಗ್ ಬಾಸ್ ಟ್ವಿಸ್ಟ್ ಕೊಟ್ಟಿದ್ದರು.

publive-image

ಕಳೆದ ವಾರ ಅಚ್ಚರಿ ಎಂಬಂತೆ ತ್ರಿವಿಕ್ರಮ್ ಅವರು ಎಲಿಮಿನೇಟ್ ಆಗಿದ್ದರು. ಆದರೆ ಎಲ್ಲರ ನಿರೀಕ್ಷೆಯಂತೆ ಎಷ್ಟು ಬೇಗ ಮನೆಯಿಂದ ಕಾಣೆಯಾದರೋ ಅಷ್ಟೇ ಬೇಗ ತ್ರಿವಿಕ್ರಮ್ ರಿಟರ್ನ್ ಆಗಿದ್ದರು. ಬಿಗ್‌ ಬಾಸ್ ಸೀಸನ್ 11ರಲ್ಲಿ ಚೈತ್ರಾ, ಐಶ್ವರ್ಯ, ತ್ರಿವಿಕ್ರಮ್, ಮೋಕ್ಷಿತಾ ಅವರಿಗೆ ಈಗಾಗಲೇ ಒಂದೊಂದು ಬೋನಸ್ ಚಾನ್ಸ್ ಸಿಕ್ಕಾಗಿದೆ.

publive-image

ಈ ವಾರ ಔಟ್ ಆಗೋದು ಫಿಕ್ಸ್‌!
ಬಿಗ್ ಬಾಸ್ ಮನೆಯಲ್ಲಿ ಈ ವಾರ ಒಬ್ಬರು ಎಲಿಮಿನೇಷನ್ ಆಗೋದು ಫಿಕ್ಸ್ ಆಗಿದೆ. ಪ್ರೇಕ್ಷಕರ ವೋಟಿಂಗ್ ಹಾಗೂ ಬಿಗ್ ಬಾಸ್ ಸದಸ್ಯರ ಗೇಮ್‌ ಪ್ಲಾನ್‌ಗೆ ಈಗಾಗಲೇ ಒಬ್ಬರು ತನ್ನ ಆಟ ಮುಗಿಸಿ ಹೊರ ನಡೆದಿದ್ದಾರೆ.

ಇದನ್ನೂ ಓದಿ: BBK11: ಈ ವಾರ 6ರಲ್ಲಿ ಉಳಿಯೋರು ಯಾರು.. ಬಿಗ್​ಬಾಸ್ ಮನೆಯಿಂದ ಔಟ್‌ ಆಗೋದು ಇವರೇನಾ? 

ಈ ವಾರ ಬಿಗ್ ಬಾಸ್ ಮನೆಯಲ್ಲಿ ಒಟ್ಟು 8 ಸದಸ್ಯರು ನಾಮಿನೇಟ್ ಆಗಿದ್ದರು. ಕ್ಯಾಪ್ಟನ್ ಭವ್ಯ ಹಾಗೂ ರಜತ್ ಅವರು ಮಾತ್ರ ಸೇಫ್ ಆಗಿದ್ದರು. ಅದರಲ್ಲಿ ಚೈತ್ರಾ ಕುಂದಾಪುರ, ಗೌತಮಿ ಜಾಧವ್​, ಧನರಾಜ್​ ಆಚಾರ್ಯ, ಮೋಕ್ಷಿತಾ ಪೈ, ತ್ರಿವಿಕ್ರಮ್​, ಹನುಮಂತ ಲಂಬಾಣಿ, ಉಗ್ರಂ ಮಂಜು ನಾಮಿನೇಟ್ ಆಗಿದ್ದರು. ಶನಿವಾರದ ಸಂಚಿಕೆಯಲ್ಲಿ ಧನರಾಜ್​ ಹಾಗೂ ಹನುಮಂತ ಸೇಫ್​ ಆಗಿದ್ದಾರೆ.

ಇನ್ನುಳಿದ 6 ಸ್ಪರ್ಧಿಗಳಲ್ಲಿ ಇವತ್ತು ಒಬ್ಬರು ಬಿಗ್ ಬಾಸ್ ಮನೆಯಿಂದ ಔಟ್ ಆಗುತ್ತಿದ್ದಾರೆ. ಸದ್ಯ ನಾಮಿನೇಷನ್​ ಸೀಟ್​ನಲ್ಲಿ ಚೈತ್ರಾ ಕುಂದಾಪುರ, ಗೌತಮಿ ಜಾಧವ್​, ಮೋಕ್ಷಿತಾ ಪೈ, ತ್ರಿವಿಕ್ರಮ್​, ಉಗ್ರಂ ಮಂಜು ಹಾಗೂ ಐಶ್ವರ್ಯಾ ಉಳಿದುಕೊಂಡಿದ್ದಾರೆ. ಈ ಆರು ಜನರಲ್ಲಿ ಭಾನುವಾರದ ಸಂಚಿಕೆಯಲ್ಲಿ ಓರ್ವ ಸ್ಪರ್ಧಿ ಬಿಗ್​ಬಾಸ್​ ಮನೆಯಿಂದ ಆಚೆ ಬರಲಿದ್ದಾರೆ. ಕ್ಯಾಪ್ಟನ್​ ಭವ್ಯಾ ಗೌಡ ಅವರಿಂದ ಐಶ್ವರ್ಯಾ ಅವರು ನೇರವಾಗಿ ನಾಮಿನೇಟ್ ಆಗಿದ್ದು ಹಾಟ್ ಸೀಟ್‌ನಲ್ಲಿ ಕುಳಿತಿದ್ದಾರೆ. ಸೂಪರ್ ಸಂಡೇ ವಿತ್ ಬಾದ್​ಷಾ ಸುದೀಪ ಎಪಿಸೋಡ್‌ನಲ್ಲಿ ಎಲಿಮಿನೇಷನ್‌ ಯಾರು ಆಗುತ್ತಾರೆ ಅನ್ನೋ ಕುತೂಹಲ ವೀಕ್ಷಕರಲ್ಲಿ ಮನೆ ಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment