BBK11: ‘ಹೌದು.. ನಾನು ಕರಾಬು..’ ರಜತ್​​ನ ರೊಚ್ಚಿಗೆಬ್ಬಿಸಿದ ತ್ರಿವಿಕ್ರಮ್..!

author-image
Ganesh
Updated On
BBK11: ತ್ರಿವಿಕ್ರಮ್​ನನ್ನು ನಿಜಕ್ಕೂ ಕಂಟ್ರೋಲ್ ಮಾಡ್ತಿರೋದು ಯಾರು? ಗೋಲ್ಡ್​ ಸುರೇಶ್​ ಬಿಚ್ಚಿಟ್ರು ಅಸಲಿ ಸತ್ಯ!
Advertisment
  • ಬಿಗ್​ಬಾಸ್​ ಮನೆಯಲ್ಲಿ ನಾಮಿನೇಷನ್ ಬೆಂಕಿ
  • ಎರಡು ತಂಡಗಳ ಮಧ್ಯೆ ಭಾರೀ ಜಟಾಪಟಿ
  • ಗೆದ್ದವರಿಗೆ ವಿಶೇಷ ಅಧಿಕಾರು, ಕ್ಯಾಪ್ಟನ್ಸಿ ಆಗುವ ಭಾಗ್ಯ

ಬಿಗ್​​ಬಾಸ್​ ಮನೆಯಲ್ಲಿ ಗೇಮ್​​ಗಳ ಮೂಲಕ ನಾಮಿನೇಷನ್ ಟಾಸ್ಕ್​ ನಡೆಯುತ್ತಿದೆ. ರಜತ್ ಮತ್ತು ತ್ರಿವಿಕ್ರಮ್ ನೇತೃತ್ವದಲ್ಲಿ ಎರಡು ತಂಡಗಳನ್ನಾಗಿ ಮಾಡಿದ್ದು, ಅಂತೆಯೇ ಟಾಸ್ಕ್​ಗಳು ನಡೆಯುತ್ತಿವೆ.

ಇಂದು ರಾತ್ರಿ ಪ್ರಸಾರವಾಗಲಿರುವ ಎಪಿಸೋಡ್​​ಗೆ ಸಂಬಂಧಿಸಿದಂತೆ ಪ್ರೊಮೋವನ್ನು ಕಲರ್ಸ್ ಕನ್ನಡ ರಿಲೀಸ್ ಮಾಡಿದೆ. ಅದರಲ್ಲಿ ನಾಮಿನೇಷನ್ ವಿಚಾರಕ್ಕೆ ರಜತ್ ಗರಂ ಆಗಿದ್ದಾರೆ. ಟಾಸ್ಕ್​​ನಲ್ಲಿ ರಜತ್​ ಅವರಿದ್ದ ತಂಡ ಸೋತಿದೆ. ಪರಿಣಾಮ ಗೆದ್ದ ತಂಡವು, ಎದುರಾಳಿ ತಂಡದ ಓರ್ವ ಸದಸ್ಯರನ್ನು ಮನೆಯಿಂದ ಆಚೆ ಕಳುಹಿಸಲು ನಾಮಿನೇಟ್ ಮಾಡುವ ಅರ್ಹತೆ ಪಡೆಯುತ್ತಾರೆ. ಅದರಲ್ಲಿ ರಜತ್ ಹೆಸರನ್ನು ಬಹುತೇಕ ಸ್ಪರ್ಧಿಗಳು ತೆಗೆದುಕೊಂಡಿದ್ದು, ಇದಕ್ಕೆ ರಜತ್ ಸಿಡಿಮಿಡಿಗೊಂಡಿದ್ದಾರೆ.

ಇದನ್ನೂ ಓದಿ:BBK11 ಮೋಕ್ಷಿತಾ, ಮಂಜು ಆಯ್ತು.. ಈಗ ರಜತ್ ಮೇಲೆ ರೊಚ್ಚಿಗೆದ್ದ ಗೌತಮಿ..! ಆಗಿದ್ದೇನು?

ನಾಮಿನೇಷನ್​​ಗೆ ಕೊಟ್ಟಿರುವ ಕಾರಣಗಳನ್ನು ಕೇಳಿಸಿಕೊಂಡರು ರಜತ್ ಗರಂ ಆಗಿದ್ದಾರೆ. ಕೋಪಿಸಿಕೊಂಡು ರಜತ್ ಖಡಕ್ ಡೈಲಾಗ್ ಹೊಡೆದಿದ್ದಾರೆ. ‘ಇಂಡಿವಿಶುವಲ್.. ಆಡಿ.. ನಿಮ್ಗೆ ತಾಖತ್ತು ಇಲ್ವಾ? ನಾನಿಲ್ಲ ಸುಪಿರಿಯರೇ, ನಾನು ಕರಾಬೇ, ನಾನು ಮಸ್ತೇ, ಹೌದು ನಾಮಿನೇಷನ್​ ಮಾಡಿದ್ರೆ ಚೇಂಜ್ ಆಗಿಬಿಡ್ತೀನಾ? ನಾಳೆಯಿಂದ ನಾನು ಬೇರೆಯವ್ರ ಹೀರೋ ಅಂತೀನಾ? ನಾನೇ ಹೀರೋ..’ ಎಂದು ಡೈಲಾಗ್ ಹೊಡೆದಿದ್ದಾರೆ..

ಇದನ್ನೂ ಓದಿ:IND vs AUS; ಅರ್ಧಶತಕ ಸಿಡಿಸಿ ಟೀಮ್ ಇಂಡಿಯಾಗೆ ನೆರವಾದ ಕನ್ನಡಿಗ KL ರಾಹುಲ್​, ಜಡೇಜಾ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment