BBK11: ಬಿಗ್ ಬಾಸ್ ಮನೆಯ ವಿಲನ್ ಮಂಜು ಡೈಲಾಗ್‌; ತ್ರಿವಿಕ್ರಮ್‌ಗೆ ಗುರಾಯಿಸಿದ ಧನರಾಜ್‌!

author-image
admin
Updated On
BBK11: ಬಿಗ್ ಬಾಸ್ ಮನೆಯ ವಿಲನ್ ಮಂಜು ಡೈಲಾಗ್‌; ತ್ರಿವಿಕ್ರಮ್‌ಗೆ ಗುರಾಯಿಸಿದ ಧನರಾಜ್‌!
Advertisment
  • ಬಿಗ್ ಬಾಸ್ ಸಾಮ್ರಾಜ್ಯದಲ್ಲಿ ಮಿಂಚುತ್ತಿರುವ ಉಗ್ರಂ ಮಂಜು
  • ನಾವು ವಿಲನ್‌ಗಳು ಹಂಗೆ ರಾ ಲುಕ್‌ನಲ್ಲಿ ಕಾಣಿಸಬೇಕು
  • ಖಳನಾಯಕ ಮಂಜುಗೆ ಸೆಡ್ಡು ಹೊಡೆಯೋರು ಯಾರು?

ಬಿಗ್ ಬಾಸ್ ಮನೆಯಲ್ಲಿ ಹೀರೋಗಳು ವಿಲನ್ ಆಗ್ತಾರೆ. ವಿಲನ್‌ಗಳು ಸಡನ್ ಆಗಿ ಹೀರೋ ಆಗ್ತಾರೆ. ಯಾರಿಗೆ ಯಾರು ವಿಲನ್ ಅಂತ ಗೊತ್ತಾಗೋಕೆ ಸ್ವಲ್ಪ ಸಮಯ ಬೇಕಾಗಬಹುದು. ಬಿಗ್ ಬಾಸ್ ಸೀಸನ್ 11ರಲ್ಲಿ ಸದ್ಯ ವಿಲನ್ ಆಗಿ ಉಗ್ರಂ ಮಂಜು ಅವರು ಮಿಂಚುತ್ತಿದ್ದಾರೆ. ಖಳನಾಯಕ ಮಂಜುಗೆ ಸೆಡ್ಡು ಹೊಡೆಯೋರು ಯಾರು ಅನ್ನೋದು ಕುತೂಹಲ ಕೆರಳಿಸಿದೆ.

ಮಂಜು ಅವರು ಮಹಾರಾಜನಾಗಿದ್ದ ಟಾಸ್ಕ್‌ನಲ್ಲಿ ತಮ್ಮ ರೌದ್ರಾವತಾರವನ್ನು ಚೆನ್ನಾಗಿ ಪ್ರದರ್ಶನ ಮಾಡಿದ್ದರು. ಬಿಗ್ ಬಾಸ್ ಸಾಮ್ರಾಜ್ಯದಲ್ಲಿ ಸಿಕ್ಕ ಅವಕಾಶವನ್ನ ಅಚ್ಚುಕಟ್ಟಾಗಿ ನಿಭಾಯಿಸಿದ್ದರು. ಮಹಾರಾಜನ ಪಾತ್ರದಿಂದ ಹೊರ ಬಂದ್ರೂ ಮಂಜು ಅವರ ಗೇಮ್ ಪ್ಲಾನ್ ಅಷ್ಟೇ ಜೋಶ್‌ನಲ್ಲಿದೆ.

publive-image

ಬಿಗ್ ಬಾಸ್ ಮನೆಯಲ್ಲಿ ಈ ವಾರ ನಾಮಿನೇಟ್ ಆಗಿರೋದು ಯಾರ್ ಯಾರು ಅನ್ನೋ ಕುತೂಹಲ ಹಾಗೇ ಇದೆ. ನಾಮಿನೇಟ್ ಜಿದ್ದಾಜಿದ್ದಿ ರೋಚಕವಾಗಿದ್ದು, 2 ತಂಡದ ಸದಸ್ಯರು ಹಾವು-ಮುಂಗುಸಿಯಂತೆ ಕಚ್ಚಾಡುತ್ತಿದ್ದಾರೆ. ಸದ್ಯ ಮಂಜು ಅವರು ವಿಲನ್ ಆಗಿ ತ್ರಿವಿಕ್ರಮ್‌ ಅವರನ್ನೇ ಟಾರ್ಗೆಟ್ ಮಾಡಿದ್ದಾರೆ.

ಗೌತಮಿ, ಹನುಮಂತ, ಧನರಾಜ್ ಜೊತೆ ಮಾತನಾಡುವಾಗ ಮಂಜು ಹನುಮ ನೀನು ಬಲಗಡೆಗೆ ತಿರುಗಿ ತ್ರಿವಿಕ್ರಮ್‌ನ ಗುರಾಯಿಸು ಎಂದು ಹೇಳುತ್ತಾರೆ. ನಾವು ವಿಲನ್‌ಗಳು ಹಂಗೆ ರಾ ಲುಕ್‌ನಲ್ಲಿ ಕಾಣಿಸಬೇಕು. ವಿಲನ್‌ಗಳು ಅಂದ್ರೆ ಹಾಗೇ ಇರಬೇಕು ಎನ್ನುತ್ತಾರೆ. ಪಕ್ಕದಲ್ಲಿದ್ದ ಗೌತಮಿ ಕೂಡ ಹನುಮಂತನಿಗೆ ಕಮಾನ್ ಹನುಮ ಸುಮ್ನೆ ಗುರಾಯಿಸು ಎಂದಿದ್ದಾರೆ.

ಮಂಜು ಅವರ ಮಾತಿಗೆ ಹನುಮಂತ ಸುಮ್ಮನಾಗಿದ್ದು, ಧನರಾಜ್‌ಗೆ ನೀನು ಆವಾಜ್ ಹಾಕು ಎಂದು ಕಿಚ್ಚಾಯಿಸಿದ್ದಾರೆ. ಆಗ ಧನರಾಜ್‌ ಏ ವಿಕ್ಕಿ.. ಲಾಲಿ ಪಪ್ ಬೇಕಾ? ಮತ್ತೆ ಸ್ಪೂನ್ ಯಾಕೆ ಹಂಗೆ ಬಾಯಿಗೆ ಚುಚ್ಚುತ್ತಾ ಇದ್ಯಾ. ಲಾಲಿ ಪಪ್ ಬೇಕಾ? ತಿಂದುಕೊಂಡು ಆರಾಮಾಗಿ ಇದ್ದು ಬಿಡು ಎನ್ನುತ್ತಾರೆ.

ಇದನ್ನೂ ಓದಿ: ‘ನಾನು ಯಾಕೆ ಬಿಗ್​ಬಾಸ್​ ಮನೆಯಿಂದ ಆಚೆ ಬಂದೆ..’ ಅಸಲಿ ಕಾರಣ ಬಿಚ್ಚಿಟ್ಟ ಗೋಲ್ಡ್​ ಸುರೇಶ್ 

ಕೊನೆಗೆ ಇಲ್ಲೆಲ್ಲಾ ಗುರಾಯಿಸಬೇಡ ಎಂದು ಮಂಜು ಹೇಳಿದ್ದಕ್ಕೆ ಧನರಾಜ್ ಮೆಲ್ಲಗೆ ಒಂದೆರಡು ಡೈಲಾಗ್ ಹನುಮಂತನಿಗೂ ಕೊಡಿ ಎಂದಿದ್ದಾರೆ. ಆಗ ಜೋರಾಗಿ ನಕ್ಕಿದ ಮಂಜು ಹೇಳಿ ಕೊಟ್ರು ಹೇಳೋಕೆ ಬರ್ತಾ ಇಲ್ಲ ಮಗಾ ಇವನಿಗೆ. ಒಂದೇ ಒಂದು ಡೈಲಾಗ್ ಹನುಮಂತಣ್ಣನಿಗೂ ಕೊಡು ನನಗೊಬ್ಬನಿಗೆ ಗುಮ್ಮಿದ್ರೆ ಅಂತಾವ್ನೆ ಎಂದಿದ್ದಾರೆ. ಧನರಾಜ್ ಮಾತಿಗೆ ಎಲ್ಲರೂ ಬಿದ್ದು, ಬಿದ್ದು ನಕ್ಕಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment