/newsfirstlive-kannada/media/post_attachments/wp-content/uploads/2024/10/BBK-11-Kiccha-Chappale.jpg)
ಬಿಗ್ ಬಾಸ್ ಸೀಸನ್ 11ರಲ್ಲಿ ಕಿಚ್ಚನ ಚಪ್ಪಾಳೆ ಯಾರಿಗೆ ಸಿಗುತ್ತೆ ಅನ್ನೋ ಕುತೂಹಲ ಎಲ್ಲರಲ್ಲೂ ಇತ್ತು. ಆದರೆ ಈ ಸೀಸನ್‌ನ ಮೊದಲ ಚಪ್ಪಾಳೆ ಯಾವ ಸ್ಪರ್ಧಿಗೂ ಸಿಕ್ಕಿಲ್ಲ. ವಾರದ ಕತೆಯಲ್ಲಿ ಕಿಚ್ಚ ಸುದೀಪ್ ಅವರು ಬಿಗ್ ಟ್ವಿಸ್ಟ್ ಕೊಟ್ಟಿದ್ದು, ಕಿಚ್ಚನ ಚಪ್ಪಾಳೆ ಈ ಬಾರಿ ನಿಜಕ್ಕೂ ವಿಶೇಷವಾಗಿತ್ತು.
ಬಿಗ್ ಬಾಸ್ ಸೀಸನ್ 11ರ ಮೊದಲನೇ ವಾರ ಯಾರಿಗೂ ಕಿಚ್ಚನ ಚಪ್ಪಾಳೆ ಸಿಕ್ಕಿರಲಿಲ್ಲ. 2ನೇ ವಾರ ಯಾರಿಗಾದ್ರೂ ಸಿಗುತ್ತೆ ಅನ್ನೋ ನಿರೀಕ್ಷೆ ಹೆಚ್ಚಾಗಿತ್ತು. ಆದರೆ ಸೀಸನ್ 11ರ ಸ್ಪರ್ಧಿಗಳು ಕಿಚ್ಚನ ಚಪ್ಪಾಳೆಯನ್ನ ಮಿಸ್ ಮಾಡಿಕೊಂಡಿದ್ದಾರೆ.
ಕನ್ನಡದ ಬಿಗ್ ಬಾಸ್ ಶೋನಲ್ಲಿ ಇಷ್ಟು ಸೀಸನ್‌ಗಳಲ್ಲಿ ಕಿಚ್ಚನ ಚಪ್ಪಾಳೆ ಬಹಳ ಪ್ರಮುಖವಾದ ಪಾತ್ರವಹಿಸಿದೆ. ಕಿಚ್ಚನ ಚಪ್ಪಾಳೆಯಿಂದಲೇ ಎಷ್ಟೋ ಸ್ಪರ್ಧಿಗಳಿಗೆ ಫುಲ್ ಜೋಶ್ ಸಿಕ್ಕಿದೆ. ಬಿಗ್ ಬಾಸ್ ವೀಕ್ಷಕರು ಸಹ ಕಿಚ್ಚನ ಚಪ್ಪಾಳೆ ಮೇಲೆ ಬಹಳಷ್ಟು ನಂಬಿಕೆಯನ್ನು ಇಟ್ಟುಕೊಂಡಿದ್ದಾರೆ.
ಇದನ್ನೂ ಓದಿ: BBK11: ಬಿಗ್ ಬಾಸ್ ಸ್ಪರ್ಧಿಗಳಿಗೆ ಸರ್‌ಪ್ರೈಸ್ ಗಿಫ್ಟ್ ಕೊಟ್ಟ ಕಿಚ್ಚ ಸುದೀಪ್; ಏನದು?
ಬಿಗ್ ಬಾಸ್ ಸೀಸನ್ 11ರಲ್ಲಿ ಮೊದಲ ಕಿಚ್ಚನ ಚಪ್ಪಾಳೆ ಬೇರೆ ಯಾರಿಗೂ ಸಿಕ್ಕಿಲ್ಲ. ಖುದ್ದು ಸುದೀಪ್ ಅವರೇ ತಮಗೆ ತಾವೇ ಚಪ್ಪಾಳೆಯನ್ನ ಕೊಟ್ಟಿದ್ದಾರೆ. ಅಂದರೆ ಸೀಸನ್ 11 ಮೊದಲನೆಯ ವಾರ ಮತ್ತು ಎರಡನೇ ವಾರ ಎಪಿಸೋಡ್ ನೋಡಿ ಒತ್ತಡ ತಾಳಲಾರದೆ ಒಂದು ಒತ್ತಡದ ಫೋಟೋವನ್ನು ಬಿಗ್ ಬಾಸ್ ಮನೆಗೆ ಕಳಿಸಲಾಗಿದೆ. ಆ ಫೋಟೋದಲ್ಲಿ ಸುದೀಪ್ ತಲೆ ಛಿದ್ರವಾಗಿದ್ದು, ಅವರಿಗೆ ಅವರೇ ಚಪ್ಪಾಳೆ ಬಡಿದುಕೊಂಡಿದ್ದಾರೆ.
ಬಿಗ್ ಬಾಸ್ ಸೀಸನ್ 11ರ ಮೊದಲ ಕ್ಯಾಪ್ಟನ್ ಆಗಿ ಹಂಸಾ ಅವರು ಆಯ್ಕೆಯಾಗಿದ್ದರು. ಆದರೆ ಇಡೀ ಮನೆಯಲ್ಲಿ ಹಂಸಾ ಅವರು ಬಹಳಷ್ಟು ಕನ್ಫ್ಯೂಸ್ ಆಗಿದ್ದರು. ಹೀಗಾಗಿ ಸ್ವರ್ಗ, ನರಕದ ಸ್ಪರ್ಧಿಗಳ ಮಧ್ಯೆ ಗೊಂದಲ ಹಾಗೂ ಗಲಾಟೆಗಳು ನಡೆದಿತ್ತು. ಈ ಎಲ್ಲಾ ಕನ್ಫೂಸ್‌ನಿಂದಾಗಿ ಕಿಚ್ಚನ ಚಪ್ಪಾಳೆಯನ್ನು ಸುದೀಪ್ ಅವರು ತಮಗೆ ತಾವೇ ಹೊಡೆದುಕೊಂಡಿದ್ದಾರೆ. ತನ್ನದೇ ಒಂದು ವ್ಯಂಗ್ಯವಾದ ಫೋಟೋವನ್ನು ಬಿಗ್ ಬಾಸ್ ಮನೆಯಲ್ಲಿ ಹಾಕಲು ಹಂಸಾಗೆ ಕೊಟ್ಟಿದ್ದಾರೆ.
ಇದೇ ವೇಳೆ ಈ ವಾರ ಉಗ್ರಂ ಮಂಜು ಅವರ ಬರ್ತ್ ಡೇ ಇತ್ತು. ಹೀಗಾಗಿ ಕಿಚ್ಚ ಸುದೀಪ್ ಅವರು ಸೀಸನ್ 11ರ ಗ್ರ್ಯಾಂಡ್ ಓಪನಿಂಗ್‌ನಲ್ಲಿ ಹಾಕೊಂಡಿದ್ದ ಜಾಕೆಟ್ ಅನ್ನೇ ಉಗ್ರಂ ಮಂಜು ಅವರಿಗೆ ಹುಟ್ಟುಹಬ್ಬದ ಗಿಫ್ಟ್ ಆಗಿ ನೀಡಿದ್ದಾರೆ. ಇದು ಉಗ್ರಂ ಮಂಜು ಅವರ ಖುಷಿಯನ್ನು ಹೆಚ್ಚಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ