Advertisment

BBK11: ಬಿಗ್ ಬಾಸ್ ಸೀಸನ್ 11 ಕಪ್ ಗೆಲ್ಲೋದು ಯಾರು? ಹೊಸ ಡೆಡ್‌ಲೈನ್ ಫಿಕ್ಸ್‌!

author-image
admin
Updated On
BBK11: ಬಿಗ್​ಬಾಸ್​ ಗ್ರ್ಯಾಂಡ್​ ಫಿನಾಲೆಗೆ ಎಂಟ್ರಿ ಕೊಟ್ಟ ಟಾಪ್​ 6 ಫೈನಲಿಸ್ಟ್​​ಗಳು; ಯಾರವರು?
Advertisment
  • ಬಿಗ್‌ ಬಾಸ್ ಸೀಸನ್ 11 ಟ್ರೋಫಿ ಯಾರ ಮನೆಗೆ ಹೋಗುತ್ತೆ?
  • 6 ಸ್ಪರ್ಧಿಗಳಲ್ಲಿ ಒಬ್ಬರಿಗೆ ಸೀಸನ್ 11ರ ಟ್ರೋಫಿ, 50 ಲಕ್ಷ ಬಹುಮಾನ
  • ಫಿನಾಲೆ ವಾರದಲ್ಲಿ ಯಾರನ್ನು ಬಿಗ್ ಬಾಸ್‌ ವೀಕ್ಷಕರು ಗೆಲ್ಲಿಸುತ್ತಾರೆ?

ಬಿಗ್ ಬಾಸ್ ಸೀಸನ್ 11 ಅಂತಿಮ ಘಟ್ಟ ತಲುಪಿದ್ದು, ಇನ್ನೆರಡು ದಿನಗಳು ಕಳೆದರೆ ಸಾಕು ಯಾರ ಕೈಗೆ ಟ್ರೋಫಿ ಅನ್ನೋದು ಗೊತ್ತಾಗಲಿದೆ. ಒಂದೇ ಒಂದು ಟ್ರೋಫಿಗೆ 12 ಕೈಗಳು, 6 ಸ್ಪರ್ಧಿಗಳು ಕಾತರದಿಂದ ಕಾಯುತ್ತಿದ್ದಾರೆ. ಕೋಟ್ಯಾಂತರ ಕನ್ನಡಿಗರು ಬಿಗ್‌ ಬಾಸ್ ಸೀಸನ್ 11 ಟ್ರೋಫಿ ಯಾರ ಮನೆಗೆ ಹೋಗುತ್ತೆ ಅಂತ ಎದುರು ನೋಡುತ್ತಿದ್ದಾರೆ.

Advertisment

ಬಿಗ್ ಬಾಸ್ ಫಿನಾಲೆಗೆ ವೇದಿಕೆ ರೆಡಿಯಾಗಿದ್ದು ಇದೇ ಶನಿವಾರ ಹಾಗೂ ಭಾನುವಾರ ಸೀಸನ್ 11ರ ಫಿನಾಲೆ ನಡೆಯುತ್ತಿದೆ. ಬಿಗ್ ಬಾಸ್ ಮನೆಯಲ್ಲಿ ಉಳಿದ 6 ಸ್ಪರ್ಧಿಗಳಲ್ಲಿ ಒಬ್ಬರಿಗೆ ಸೀಸನ್ 11ರ ಟ್ರೋಫಿ ಹಾಗೂ 50 ಲಕ್ಷ ರೂಪಾಯಿ ಬಹುಮಾನ ಸಿಗುತ್ತಿದೆ.

publive-image

ಕೊನೆ ಹಂತದಲ್ಲಿ ಬಿಗ್ ಬಾಸ್ ಸ್ಪರ್ಧಿಗಳ ಕೋರಿಕೆಯನ್ನು ಬಿಗ್ ಬಾಸ್ ಈಡೇರಿಸಿದ್ದಾರೆ. ನಿನ್ನೆಯ ಎಪಿಸೋಡ್‌ನಲ್ಲಿ ಮೋಕ್ಷಿತಾ ಸಹೋದರ, ಸಹೋದರಿ ಹಾಗೂ ಭವ್ಯಾ ಅವರ ತಂದೆ ಬಿಗ್ ಬಾಸ್ ಮನೆಗೆ ಬಂದು ಖುಷಿ ಪಡಿಸಿದ್ದಾರೆ. ಈ ಮೂಲಕ ಸ್ಪರ್ಧಿಗಳ ಆಸೆಯನ್ನು ಬಿಗ್ ಬಾಸ್ ಈಡೇರಿಸುವ ಪ್ರಯತ್ನ ಮಾಡಿದ್ದಾರೆ.

publive-image

ಬಿಗ್ ಬಾಸ್ ಸ್ಪರ್ಧಿಗಳ ಆಸೆ ಈಡೇರಿದೆ. ಇನ್ನು ಈಗ ಕಪ್ ಗೆಲ್ಲೋದು ಯಾರು ಅನ್ನೋ ಫೈನಲ್ ರಿಸಲ್ಟ್ ಅಷ್ಟೇ ಬಾಕಿ ಉಳಿದಿದೆ. ಬಿಗ್‌ಬಾಸ್ ಸೀಸನ್ 11ರ ಫಿನಾಲೆಗೆ ತ್ರಿವಿಕ್ರಮ್, ಮಂಜು, ಮೋಕ್ಷಿತಾ, ರಜತ್, ಹನುಮಂತ, ಭವ್ಯಾ ತಲುಪಿದ್ದಾರೆ. ಫಿನಾಲೆ ವಾರದಲ್ಲಿ ಯಾರನ್ನು ವೀಕ್ಷಕರು ಗೆಲ್ಲಿಸುತ್ತಾರೆ ಅನ್ನೋದಕ್ಕೆ ಈಗ ಹೊಸ ಡೆಡ್‌ಲೈನ್ ಫಿಕ್ಸ್‌ ಆಗಿದೆ.

Advertisment

publive-image

ಬಿಗ್ ಬಾಸ್ ಶೋ ನೋಡುತ್ತಿರುವ ವೀಕ್ಷಕರು ಈ 6 ಸ್ಪರ್ಧಿಗಳಲ್ಲಿ ಯಾರು ಗೆಲ್ಲಬೇಕು ಅನ್ನೋದನ್ನ ವೋಟ್ ಮಾಡಬಹುದಾಗಿದೆ. ನಿಮ್ಮ ನೆಚ್ಚಿನ ಸ್ಪರ್ಧಿಯನ್ನು ಗೆಲ್ಲಿಸಲು ವೋಟಿಂಗ್ ಲೈನ್ಸ್ ಇದೇ ಶನಿವಾರ ಬೆಳಗ್ಗೆ 11ರವರೆಗೆ ಮಾತ್ರ ತೆರೆದಿರುತ್ತದೆ. ಶನಿವಾರ ಬೆಳಗ್ಗೆ 11ರ ಒಳಗೆ ಜಿಯೋ ಸಿನಿಮಾ ಆ್ಯಪ್ ಡೌನ್‌ಲೋಡ್ ಮಾಡಿ, ವೋಟ್ ಮಾಡಲು ಅವಕಾಶ ನೀಡಿದ್ದು, ಭಾನುವಾರ ಬಿಗ್ ಬಾಸ್ ಸೀಸನ್ 11ರ ವಿನ್ನರ್ ಯಾರು ಅನ್ನೋದನ್ನ ಘೋಷಣೆ ಮಾಡಲಾಗುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment