BBK11: ಯಾವನಾದ್ರು ಅಪ್ಪನಿಗೆ ಹುಟ್ಟಿದ್ರೆ.. ಚೈತ್ರಾ ಖಡಕ್ ಲುಕ್ಕು, ಘರ್ಜನೆಗೆ ಜಗದೀಶ್‌ ಸ್ಟನ್ ಆದ್ರಾ?

author-image
admin
Updated On
BBK11: ಯಾವನಾದ್ರು ಅಪ್ಪನಿಗೆ ಹುಟ್ಟಿದ್ರೆ.. ಚೈತ್ರಾ ಖಡಕ್ ಲುಕ್ಕು, ಘರ್ಜನೆಗೆ ಜಗದೀಶ್‌ ಸ್ಟನ್ ಆದ್ರಾ?
Advertisment
  • ಚೈತ್ರಾ ಮೇಲೆ 28 ಕೇಸ್‌ಗಳಿವೆ ಎಂದು ಗುಡುಗಿದ ಜಗದೀಶ್!
  • ಬಿಗ್ ಬಾಸ್ ಮನೆಯಲ್ಲಿ ಜಗದೀಶ್ ಮಾತಿಗೆ ಚೈತ್ರಾ ರೌದ್ರಾವತಾರ
  • ಇವರಪ್ಪನಿಗೆ ಹೊಡೆದು ನಾನು ಕೇಸ್ ಹಾಕಿಸಿಕೊಂಡಿಲ್ಲ - ಚೈತ್ರಾ ಸವಾಲು

ಬಿಗ್ ಬಾಸ್ ಸೀಸನ್ 11ರ ಮನೆಯಲ್ಲಿ ಬೆಂಕಿ, ಬಿರುಗಾಳಿಯೇ ಸೃಷ್ಟಿಯಾಗಿದೆ. ಇಷ್ಟು ದಿನ ಕೋಪ, ತಾಪದಲ್ಲಿದ್ದ ಸ್ಪರ್ಧಿಗಳು ಈಗ ನೀನಾ? ನಾನಾ? ಅನ್ನೋ ಸಮರಕ್ಕೆ ಇಳಿದಿದ್ದಾರೆ. ಜಗದೀಶ್‌ ಹಾಗೂ ಚೈತ್ರಾ ಮಧ್ಯೆ ಬಹಳ ದೊಡ್ಡ ವಾಗ್ಯುದ್ಧ ನಡೆದಿದ್ದು ಬಿಗ್ ಬಾಸ್ ಮನೆಯ ಫೈಟ್‌ಗೆ ಹೊಸ ತಿರುವು ಸಿಕ್ಕಿದೆ.

ಇದನ್ನೂ ಓದಿ: ಮೌನ ಮುರಿದ ಕಿಚ್ಚ ಸುದೀಪ್‌.. ಬಿಗ್​ಬಾಸ್​ನಲ್ಲಿ ಅವಮಾನ ಆಗಿದ್ದು ನಿಜನಾ? ಡೈರೆಕ್ಟರ್ ಪ್ರಕಾಶ್ ಬಗ್ಗೆ ಹೇಳಿದ್ದೇನು? 

ಬಿಗ್ ಬಾಸ್ ಮನೆಯಲ್ಲಿ ಯಾರು, ಯಾರನ್ನೂ ನಂಬುವಂತಿಲ್ಲ. ಇಲ್ಲಿ ಸ್ನೇಹ, ವಿಶ್ವಾಸ, ನಂಬಿಕೆಗಳಿಗೆ ಜಾಗವೇ ಇಲ್ಲ. ಸೀಸನ್ 11 ಈಗಾಗಲೇ 2 ವಾರಗಳನ್ನು ಮುಗಿಸಿದ್ದು 3ನೇ ವಾರಕ್ಕೆ ಕಾಲಿಟ್ಟಿದೆ. ಈ ವಾರ ಟಾಸ್ಕ್‌ಗಳಲ್ಲಿ ಗೆಲ್ಲೋದಕ್ಕಿಂತ ಸೀಸನ್ 11ರ ಸ್ಪರ್ಧಿಗಳು ಮಾತಿನ ಯುದ್ಧದಲ್ಲಿ ಗೆಲ್ಲೋ ಪಣತೊಟ್ಟಿದ್ದಾರೆ.

publive-image

ಬಿಗ್ ಬಾಸ್ ಮನೆಯಲ್ಲಿ ಎಲ್ಲರನ್ನು ಎದುರಾಕಿಕೊಂಡಿರುವ ಸ್ಪರ್ಧಿ ಅಂದ್ರೆ ಅದು ಜಗದೀಶ್. ಈ ಜಗದೀಶ್ ಅವರಿಗೂ ಚೈತ್ರಾಗೂ ವಾಗ್ಯುದ್ಧ ನಡೆದಿದೆ. ಆಕೆ ಏನ್ ಮಾತಾಡುತ್ತಾಳೆ. ಆಕೆಗೆ ಏನು ಫಾಲೋವರ್ಸ್‌ ಇದ್ದಾರೆ. ನನಗೂ ಫಾಲೋವರ್ಸ್ ಇದ್ದಾರೆ. ಆಕೆ ಮೇಲೆ 28 ಕೇಸ್‌ಗಳಿವೆ ಎಂದು ಜಗದೀಶ್ ಅವರು ಗುಡುಗಿದ್ದಾರೆ.

publive-image

ಲಾಯರ್ ಜಗದೀಶ್ ಅವರ ಬಾಯಲ್ಲಿ ಕೇಸ್‌ಗಳ ವಿಚಾರ ಹೊರ ಬಂದಿದ್ದಕ್ಕೆ ಚೈತ್ರಾ ಅವರು ಕೆಂಡಾಮಂಡಲರಾಗಿದ್ದಾರೆ. ನನ್ನ ಎದುರು ನಿಲ್ಲೋ ತಾಕತ್ತು ಇಲ್ಲ ಥೂ.. ಎಂದಿರುವ ಚೈತ್ರಾ ಕೊಚ್ಚೆ ಮೇಲೆ ಕಲ್ಲು ಹಾಕಬಾರ್ದು ಅಷ್ಟೇ. ತಾಕತ್ತು ಇದ್ದವನು ಬಂದು ಎದುರುಗಡೆ ನಿಂತು ಮಾತಾಡಲಿ ಎಂದು ಖಡಕ್ ಸವಾಲು ಹಾಕಿದ್ದಾರೆ.

publive-image

ಚೈತ್ರಾ ಅವರ ರೌದ್ರಾವತಾರ ಇಷ್ಟಕ್ಕೆ ನಿಂತಿಲ್ಲ. ನನ್ನ ಕೇಸ್‌ ಬಗ್ಗೆ ಯಾವನಿಗೂ ಮಾತನಾಡುವ ಯೋಗ್ಯತೆನೂ ಇಲ್ಲ. 50 ಅಲ್ಲ 100 ಕೇಸ್ ಹಾಕಿಸಿಕೊಳ್ಳುತ್ತೀನಿ. ಇವರಪ್ಪನಿಗೆ ಹೊಡೆದು ನಾನು ಕೇಸ್ ಹಾಕಿಸಿಕೊಂಡಿಲ್ಲ. ಯಾವನಾದ್ರೂ ಅಪ್ಪನಿಗೆ ಹುಟ್ಟಿದ್ರೆ ನನ್ನ ಕಣ್ಣೆದುರಿಗೆ ಬಂದು ನನ್ನ ಕೇಸ್ ಬಗ್ಗೆ ಮಾತನಾಡಲಿ ಎಂದು ಜಗದೀಶ್‌ಗೆ ಸವಾಲು ಹಾಕಿದ್ದಾರೆ.

publive-image

ಸ್ವರ್ಗ, ನರಕ ಒಂದಾಗಿ ಬಿಗ್ ಬಾಸ್ ಮನೆಯೂ ಒಂದಾಗಿತ್ತು. ಆದ್ರೀಗ ಸ್ವರ್ಗದಲ್ಲೇ ನರಕದ ವಾತಾವರಣ ಸೃಷ್ಟಿಯಾಗಿದೆ. ಚೈತ್ರಾ ಅವರು ಜಗದೀಶ್‌ಗೆ ನೀನಾ, ನಾನಾ ನೋಡೇ ಬಿಡೋಣ ಅಂತ ಎದುರು ನಿಂತಿದ್ದಾರೆ. ಜಗದೀಶ್ ಅವರು ಚೈತ್ರಾ ಅವರ ಕಣ್ಣಿನ ನೋಟಕ್ಕೆ ದೃಷ್ಟಿಯ ಯುದ್ಧ ಘೋಷಿಸಿದ್ದಾರೆ. ಇವರಿಬ್ಬರ ಜಗಳದಲ್ಲಿ ಮನೆಯ ಉಳಿದ ಸದಸ್ಯರು ತಮ್ಮ ಪಾಡಿಗೆ ತಾವು ತೆರಳಿದ್ದಾರೆ. ಇಂದಿನ ಎಪಿಸೋಡ್‌ನಲ್ಲಿ ಚೈತ್ರಾ, ಜಗದೀಶ್ ಅವರ ಮಾತಿನ ಯುದ್ಧದ ಏನಾಗುತ್ತೆ ಅನ್ನೋ ಕ್ಲೈಮ್ಯಾಕ್ಸ್ ಗೊತ್ತಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment