/newsfirstlive-kannada/media/post_attachments/wp-content/uploads/2024/09/dhanraj.jpg)
ಬಿಗ್​ ಬಾಸ್​​ ಸೀಸನ್​​ 11 ಸ್ಪರ್ಧಿ ಧನ್​​​ರಾಜ್​​ ಆಚಾರ್​ 2019ರಲ್ಲಿ ಬಿಗ್​ ಬಾಸ್​ ಮನೆಗೆ ಹೋಗುತ್ತಿದ್ದೇನೆ ಎಂದು ಹೇಳಿದ್ದರಂತೆ. ಮನೆಯವರನೆಲ್ಲಾ ನಂಬಿಸಿದ್ದರಂತೆ. ತಮಾಷೆಯ ಈ ಘಟನೆಯನ್ನು ಅವರೇ ಹೇಳಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
2019ರಲ್ಲಿ ನಟ ಹಾಗೂ ಕಾಮಿಡಿಯನ್​ ಧನ್​​ರಾಜ್​ ದೊಡ್ಮನೆಗೆ ಕಾಲಿಟ್ಟಿದ್ದರು. ಬಿಗ್​ ಬಾಸ್​ ಸೀಸನ್​ 6ನಲ್ಲಿ ಕಾಣಿಸಿಕೊಂಡಿದ್ದರು. ಕುಂದಾಪುರ ಮೂಲದ ಇವರು ಬಿಗ್​ ಬಾಸ್​ಗೆ ಬರುತ್ತಿದ್ದಾರೆ ಎಂಬ ಸಂಗತಿ ಪುತ್ತೂರು ಮೂಲದ ಧನ್​ರಾಜ್​ ಆಚಾರ್​​ಗೆ ತಿಳಿದಂತೆ. ಆ ವಿಚಾರವನ್ನು ವಾಟ್ಸ್​ಆ್ಯಪ್​ ಸ್ಟೇಟಸ್​ ಹಾಕಿಕೊಂಡಿದ್ದರಂತೆ. ಇದನ್ನು ಕಂಡು ಧನ್​ರಾಜ್ ಆಚಾರ್​​ಗೆ ಕರೆ ಬರಲು ಶುರುವಾಯಿತಂತೆ.
[caption id="attachment_89355" align="alignnone" width="800"] ನಟ ಹಾಗೂ ಕಾಮಿಡಿಯನ್​ ಧನ್​​ರಾಜ್[/caption]
ಹೌದು. ನಟ ಧನ್​ರಾಜ್​ ಹೋಗುವ ಸಂಗತಿಯನ್ನು ಧನ್​ರಾಜ್​ ಆಚಾರ್​​​ ಸ್ಟೇಟಸ್​​ ಹಾಕಿಕೊಂಡಿದ್ದು ನೋಡಿ ಎಲ್ಲರೂ ಕನ್ಫ್ಯೂಸ್​​ ಆಗಿದ್ದರು. ಮನೆಯವರು, ಸ್ನೇಹಿತರು ಸೇರಿ ಎಲ್ಲರೂ ಕರೆ ಮಾಡಲು ಶುರು ಮಾಡಿದ್ದರಂತೆ. ಮನೆಯವರೆಲ್ಲ ಕರೆ ಬಂದಂತೆ ಧನ್​ರಾಜ್​ ಆಚಾರ್​ ನಾನು ಬಿಗ್​ ಬಾಸ್​ ಕಾರ್ಯಕ್ರಮದಲ್ಲಿ ಇದ್ದೇನೆ, ಮತ್ತೆ ಕರೆ ಮಾಡುತ್ತಿದ್ದೇನೆ ಎಂದು ಸುಳ್ಳು ಹೇಳಿ ತಮಾಷೆ ಮಾಡಿದ್ದರಂತೆ. ಬಳಿಕ ಬಿಗ್​ ಬಾಸ್​​ ಮನೆಯೊಳಕ್ಕೆ ಧನ್​ರಾಜ್​ ಒಳಹೋದಂತೆ ಧನ್​ರಾಜ್​ ಆಚಾರ್​ ತಮಾಷೆ ಮಾಡಿರೋದು ಎಂದು ಎಲ್ಲರಿಗೂ ಗೊತ್ತಾಗಿದೆ.
[caption id="attachment_89354" align="alignnone" width="800"] ಧನ್​​ರಾಜ್ ಆಚಾರ್​[/caption]
ಅಂದಿನ ಘಟನೆಯನ್ನು ಧನ್​ರಾಜ್​ ಪಾಡ್​ಕಾಸ್ಟ್​​ವೊಂದರಲ್ಲಿ ಹೇಳಿಕೊಂಡಿದ್ದಾರೆ. ಆ ಧನ್​ರಾಜ್​ ಹೆಸರಿನಿಂದ ನಾನು ಬಿಲ್ಡಪ್​ ತೆಗೆದುಕೊಂಡಿದ್ದೆ ಎಂದು ಹಳೆಯ ಘಟನೆಯನ್ನು ನೆನೆಸಿಕೊಂಡಿದ್ದಾರೆ. ಆದರೀಗ ಬಿಗ್​ ಬಾಸ್​ ಸೀಸನ್​ 11ನಲ್ಲಿ ಭಾಗವಹಿಸುವ ಮೂಲಕ ಧನ್​ರಾಜ್​ ಆಚಾರ್​ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ