ಕಿಚ್ಚನ ಎದುರು ದೋಸ್ತ ಹನುಮಂತು ಬಗ್ಗೆ ಮಾತನಾಡುತ್ತ ಧನರಾಜ್ ಕಣ್ಣೀರು.. ಆಗಿದ್ದೇನು?

author-image
Bheemappa
Updated On
ಕಿಚ್ಚನ ಎದುರು ದೋಸ್ತ ಹನುಮಂತು ಬಗ್ಗೆ ಮಾತನಾಡುತ್ತ ಧನರಾಜ್ ಕಣ್ಣೀರು.. ಆಗಿದ್ದೇನು?
Advertisment
  • ಕಿಚ್ಚ ಸುದೀಪ್ ಮುಂದೆ ಹನುಮಂತಗಾಗಿ ಧನರಾಜ್ ಕಣ್ಣೀರು
  • ಧನರಾಜ್-ಹನುಮಂತು ಬಿಗ್​ಬಾಸ್​ ಮನೆಯ ಗೆಳೆಯರು
  • ಹನುಮಂತು ದೇವರೇ ಬಂದಾಗೆ ಬಂದು ಪಕ್ಕದಲ್ಲೇ ನಿಂತಿದ್ದ

ಇಬ್ಬರ ನಡುವಿನ ಗಾಡ ಗೆಳೆತನಕ್ಕೆ ಈ ಬಾರಿ ಬಿಗ್​ಬಾಸ್ ಸೀಸನ್- 11 ಸಾಕ್ಷಿ ಆಗಿದೆ. ಕೊನೆ ವಾರದಲ್ಲಿ ಎಲಿಮಿನೇಟ್ ಆಗಿರುವ ಧನರಾಜ್ ಅವರು ಹೊರಗಡೆ ಬರುತ್ತಿದ್ದಂತೆ ಹನುಮಂತು ಕಣ್ಣೀರು ಹಾಕಿದ್ದಾರೆ. ಇನ್ನು ಮನೆಯೊಳಗೆ ಹನುಮಂತು ಅಳುತ್ತಿದ್ದಂತೆ ಹೊರಗಡೆ ಧನರಾಜ್ ಕಣ್ಣೀರು ಹಾಕಿ ದುಃಖದಲ್ಲೇ ಬಿಗ್​ಬಾಸ್​ಗೆ ವಿದಾಯ ಹೇಳಿದ್ದಾರೆ. ಹನುಮಂತನ ಕುರಿತು ಮಾತಾಡುತ್ತ ಕಿಚ್ಚನ ಎದುರೇ ಧನರಾಜ್ ಕಣ್ಣೀರು ಹಾಕಿದ್ದಾರೆ.

publive-image

ಡೋರ್ ತೆಗೆಯುತ್ತಿದ್ದಂತೆ ಧನರಾಜ್ ಹೊರ ಬರುತ್ತಿದ್ದಂತೆ ಹನುಮಂತು ಹೋದ್ನಾ ಎಂದು ದುಃಖದಲ್ಲೇ ಕೇಳಿದ್ದಾರೆ. ಕದ ಯಾವಾಗ ತೆಗೆದರು ಎಂದು ಭವ್ಯನ ಕೇಳಿದರು. ಈ ಎಲ್ಲ ವಿಡಿಯೋ ನೋಡಿದ ಧನರಾಜ್ ಕಿಚ್ಚ ಸುದೀಪ್ ಮುಂದೆ ಭಾವುಕರಾಗಿ ವೇದಿಕೆ ಮೇಲೆ ಕಣ್ಣೀರು ಹಾಕಿದರು. ಇಲ್ಲಿಯವರೆಗೆ ಮನೆಯಲ್ಲಿದ್ದಿದ್ದು ಖುಷಿ ನೀಡಿದೆ. ಹನುಮಂತು ದೇವರು ಬಂದಾಗೆ ಬಂದು ನನ್ನ ಪಕ್ಕದಲ್ಲೇ ನಿಂತಿದ್ದ. ‘ದೋಸ್ತಾ.. ನನ್ನ ಪ್ರಾಣ ಕಣೋ ನೀನು’ ಎಂದು ಜೋರಾಗಿ ಕೂಗಿ ಧನು ಹೇಳಿದ್ದಾರೆ. ಹನುಮಂತ ನನ್ನ ಜೀವನ. ಅವನು ಶಕ್ತಿ ಎಂದು ಸುದೀಪ್ ಬಳಿ ಧನು ಹೇಳಿದ್ದಾರೆ.

publive-image

ಇದನ್ನೂ ಓದಿ:ದೋಸ್ತ ಮನೆಯಿಂದ ಹೋಗ್ತಿದ್ದಂತೆ ಹನುಮಂತು ಭಾವುಕ.. ಭವ್ಯ ಸಮಾಧಾನಪಡಿಸಿದ ಕ್ಷಣ ಹೇಗಿತ್ತು..?

ಇನ್ನು ಮುಂದುವರೆದು ಕಿಚ್ಚ ಸುದೀಪ್ ಅವರ ಮುಂದೆ ವೇದಿಕೆ ಮೇಲೆ ಮಾತನಾಡಿದ ಧನರಾಜ್, ನಿಮ್ಮ ಮುಂದೆ ಇಷ್ಟೊಂದು ಮಾತನಾಡುತ್ತಿರುವುದಕ್ಕೆ ಖುಷಿ ಆಗುತ್ತಿದೆ. ಫಿನಾಲೆವರೆಗೆ ಹೋಗಿದ್ದರೇ ಚೆನ್ನಾಗಿತ್ತು. ಆದರೆ ಅರ್ಧದಲ್ಲೇ ಬಂದಿದ್ದಕ್ಕೆ ಬೇಸರ ಇದೆ. ವೀಕೆಂಡ್​ನಲ್ಲಿ ನೀವು ಮಾತುಗಳನ್ನ ಹೇಳಿದ್ದರಲ್ಲ ಸರ್, ಅವುಗಳನ್ನ ಮರೆಯೋಕೆ ಸಾಧ್ಯ ಇಲ್ಲ. ನಮಗೆ ಲೈಫ್​ಲಾಂಗ್ ಸಲಹೆ ಕೊಡುತ್ತಿದ್ದರೇ ಸಾಕು. ಲವ್​ ಯೂ ಸರ್ ಎಂದು ಸುದೀಪ್ ಅವರಿಗೆ ಧನು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment