/newsfirstlive-kannada/media/post_attachments/wp-content/uploads/2025/01/BBK-11-Grand-Finale.jpg)
ಕನ್ನಡ ಕಿರುತೆರೆಯ ಬಿಗ್ ಬಾಸ್ ಸೀಸನ್ 11 ಗ್ರ್ಯಾಂಡ್ ಫಿನಾಲೆಗೆ ಸಜ್ಜಾಗಿದೆ. ಬಿಗ್ ಬಾಸ್ ಕಪ್ ಯಾರ್ ಗೆಲ್ತಾರೆ? ಯಾರ್ ಸೋಲ್ತಾರೆ? ಅನ್ನೋ ಕುತೂಹಲಕ್ಕೆ ಇನ್ನು ಕೆಲವೇ ದಿನಗಳಲ್ಲಿ ತೆರೆ ಬೀಳಲಿದೆ. ಬಿಗ್ ಬಾಸ್ ತಂಡ ಈ ಬಾರಿ ಹೊಸ ಅಧ್ಯಾಯ ಆರಂಭಿಸಿದ್ದು, ಫಿನಾಲೆ ಕೂಡ ಹೊಸತನಕ್ಕೆ ನಾಂದಿ ಆಡಲಿದೆ.
ನ್ಯೂಸ್ ಫಸ್ಟ್ ಚಾನೆಲ್‌ಗೆ ಸಿಕ್ಕಿರೋ ಖಚಿತ ಮಾಹಿತಿ ಪ್ರಕಾರ ಬಿಗ್ ಬಾಸ್ ಸೀಸನ್ 11 ಫಿನಾಲೆಗೆ ಭರ್ಜರಿ ಪ್ಲಾನ್ ಮಾಡಲಾಗಿದೆ. ಜನವರಿ 25 ಹಾಗೂ 26ರಂದು ಬಿಗ್ ಬಾಸ್ ಸೀಸನ್ 11 ಗ್ರ್ಯಾಂಡ್ ಫಿನಾಲೆ ನಡೆಯುತ್ತಿದೆ. ಜನವರಿ 25ರ ಶನಿವಾರ ಎಲಿಮಿನೇಷನ್‌ಗೆ ಹೊಸ ಟ್ವಿಸ್ಟ್ ಕೊಟ್ರೆ ಜನವರಿ 26ರ ಭಾನುವಾರ ಬಿಗ್‌ಬಾಸ್ ಸೀಸನ್ ಕಪ್ ಗೆದ್ದವರು ಯಾರು ಅನ್ನೋದು ಗೊತ್ತಾಗಲಿದೆ.
ಟಾಪ್ 6 ಸ್ಪರ್ಧಿಗಳು ಯಾರು?
ಬಿಗ್ ಬಾಸ್ ಸೀಸನ್ 11ರ ಮನೆಯಲ್ಲಿ ಸದ್ಯ 8 ಪ್ರಬಲ ಸ್ಪರ್ಧಿಗಳು ಇದ್ದಾರೆ. ಫಿನಾಲೆ ಟಾಸ್ಕ್‌ನಲ್ಲಿ ಪ್ರತಿಯೊಬ್ಬರ ಆಟ ರೋಚಕವಾಗಿದೆ. ವೀಕ್ಷಕರಿಗೆ ತಿಳಿದಿರುವಂತೆ ಈಗಾಗಲೇ ಹನುಮಂತ ಟಿಕೆಟ್ ಟು ಫಿನಾಲೆ ಟಾಸ್ಕ್‌ನಲ್ಲಿ ಗೆದ್ದು ಫಿನಾಲೆ ತಲುಪಿದ್ದಾನೆ. ಹನುಮಂತನ ದೋಸ್ತ್ ಧನರಾಜ್ ಕೂಡ ಈ ವಾರದ ಮಧ್ಯದ ಎಲಿಮಿನೇಟ್‌ನಿಂದ ಬಚಾವ್ ಆಗಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಸದ್ಯ ಹನುಮಂತ, ಧನರಾಜ್ ಸೇಫ್ ಆಗಿದ್ದರೆ ಉಳಿದ 6 ಸ್ಪರ್ಧಿಗಳ ಎದೆಯಲ್ಲಿ ಡವ, ಡವ ಅಂತಿದೆ. ಇಂದು ಅಥವಾ ನಾಳೆಯೊಳಗೆ ಬಿಗ್ ಬಾಸ್ ಮನೆಯಲ್ಲಿ ಮಿಡ್ ವೀಕ್ ಎಲಿಮಿನೇಷನ್ ನಡೆಯೋದು ಪಕ್ಕಾ ಆಗಿದೆ. ಗೌತಮಿ, ಮೋಕ್ಷಿತಾ, ಮಂಜು, ತ್ರಿವಿಕ್ರಮ್, ರಜತ್, ಭವ್ಯಾ ಈ 6 ಮಂದಿಯಲ್ಲಿ ಒಬ್ಬರು ವಾರದ ಮಧ್ಯೆ ಬಿಗ್ ಬಾಸ್ ಮನೆಯಿಂದ ಹೊರಬರುತ್ತಿದ್ದಾರೆ.
ನಡು ವಾರದಲ್ಲಿ ಒಬ್ಬರು ಬಿಗ್ ಬಾಸ್ ಮನೆಯಿಂದ ಔಟ್ ಆದ್ರೆ ಈ ವಾರದ ಅಂತ್ಯಕ್ಕೆ ಮತ್ತೊಬ್ಬರು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗುತ್ತಿದ್ದಾರೆ. ಬಿಗ್ ಬಾಸ್ ಫಿನಾಲೆ ಹತ್ತಿರವಾಗುತ್ತಿದ್ದಂತೆ ಗೌತಮಿ, ಮೋಕ್ಷಿತಾ, ಮಂಜು, ತ್ರಿವಿಕ್ರಮ್, ರಜತ್, ಭವ್ಯಾ ಮಧ್ಯೆ ಟಫ್ ಫೈಟ್ ಶುರುವಾಗಿದೆ. ಆಟದ ಜೊತೆ ಕೆಲವರು ಗಂಟು, ಮೂಟೆ ಕಟ್ಟಿಕೊಂಡು ರೆಡಿಯಾಗಿದ್ದು, ಯಾವಾಗ ಯಾರು ಬೇಕಾದರೂ ಹೊರ ಬರುವ ಸಾಧ್ಯತೆ ಇದೆ.
ಇದನ್ನೂ ಓದಿ: BBK11 ತಾರಮ್ಮನ ಮುಂದೆ ಮೋಕ್ಷಿತಾಗೆ ಕ್ಷಮೆ ಕೇಳಿ ಮಂಜು ಕಣ್ಣೀರು.. ಆಗಿದ್ದೇನು..?
ಅಂತಿಮವಾಗಿ ಈ ಶನಿವಾರ ಕಿಚ್ಚ ಸುದೀಪ್ ಅವರು ಕೊನೇ ವಾರದ ಪಂಚಾಯ್ತಿಯಲ್ಲಿ ಒಬ್ಬರಿಗೆ ಬಿಗ್ ಶಾಕ್ ಕೊಡಲಿದ್ದಾರೆ. ಭಾನುವಾರ ಮತ್ತೊಬ್ಬರ ಎಲಿಮಿನೇಷನ್ ಪಕ್ಕಾ ನಡೆಯಲಿದೆ. ಉಳಿದ 6 ಸ್ಪರ್ಧಿಗಳಲ್ಲಿ ಬಿಗ್ ಬಾಸ್ ಫಿನಾಲೆ ವಾರದ ಆಟ ನಡೆಯಲಿದೆ. ಜನವರಿ 26ರ ಭಾನುವಾರ ಬಿಗ್‌ಬಾಸ್ ಸೀಸನ್ ಕಪ್ ಗೆದ್ದವರು ಯಾರು ಅನ್ನೋದು ತೀರ್ಪು ಪ್ರಕಟಿಸಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ