/newsfirstlive-kannada/media/post_attachments/wp-content/uploads/2025/01/BBK-11-Elimination-7.jpg)
ಬಿಗ್ ಬಾಸ್ ಸೀಸನ್ 11 ರಿಯಾಲಿಟಿ ಶೋನಲ್ಲಿ ಮಧ್ಯರಾತ್ರಿ ಬಿಗ್ ಬಾಸ್ ಸ್ಪರ್ಧಿಗಳು ಬೆಚ್ಚಿ ಬಿದ್ದಿದ್ದಾರೆ. ಮಧ್ಯರಾತ್ರಿ ನಡುವಾರದ ಎಲಿಮಿನೇಟ್ ಪ್ರಕ್ರಿಯೆ ಈಗಾಗಲೇ ಆರಂಭವಾಗಿದ್ದು, ರೋಚಕವಾಗಿದೆ.
ಬಿಗ್ ಬಾಸ್ ಮನೆಯಲ್ಲಿ ಒಬ್ಬರಿಗೆ ಮುಖ್ಯದ್ವಾರದ ಬಾಗಿಲು ತೆರೆಯಲಾಗಿದೆ. ಗೌತಮಿ, ಮಂಜು, ತ್ರಿವಿಕ್ರಮ್, ಭವ್ಯಾ, ಮೋಕ್ಷಿತಾ ಹಾಗೂ ರಜತ್ ಈ 6 ಮಂದಿಯಲ್ಲಿ ಒಬ್ಬರಿಗೆ ಬಿಗ್ ಬಾಸ್ ಮನೆಯಲ್ಲಿ ಕಟ್ಟ ಕಡೆಯ ರಾತ್ರಿಯಾಗುತ್ತಿದೆ.
ಬಿಗ್ ಬಾಸ್ ಸೀಸನ್ 11 ಫಿನಾಲೆಗೆ ಇನ್ನು 10 ದಿನಗಳು ಮಾತ್ರ ಬಾಕಿ ಉಳಿದಿದೆ. ಉಳಿದ 8 ಸ್ಪರ್ಧಿಗಳಲ್ಲಿ ಗೌತಮಿ, ಮಂಜು, ತ್ರಿವಿಕ್ರಮ್, ಭವ್ಯಾ, ಮೋಕ್ಷಿತಾ ಹಾಗೂ ರಜತ್ ಈಗಾಗಲೇ ಗಂಟು ಮೂಟೆ ಕಟ್ಟಿಕೊಂಡು ರೆಡಿಯಾಗಿದ್ದಾರೆ.
ಬಿಗ್ ಬಾಸ್ ಈ ವಾರದ ಟಾಸ್ಕ್‌ನಲ್ಲಿ ಮಿಡ್ ವೀಕ್ ಎಲಿಮಿನೇಷನ್ ಖಚಿತ ಅನ್ನೋದನ್ನ ಘೋಷಿಸಲಾಗಿತ್ತು. ಮೊದಲೇ ಸುಳಿವು ಕೊಟ್ಟಂತೆ ಬಿಗ್ ಬಾಸ್ ಮನೆಯಲ್ಲಿ ಮಧ್ಯರಾತ್ರಿಯೇ ಸೈರನ್ ಸದ್ದು ಮಾರ್ದನಿಸಿದೆ.
ಸೈರನ್ ಸದ್ದಿಗೆ ಬೆಚ್ಚಿ ಬಿದ್ದು ಎದ್ದಿರುವ ಸ್ಪರ್ಧಿಗಳಿಗೆ ಬಿಗ್ ಬಾಸ್ ಮುಖ್ಯದ್ವಾರ ತೆರೆದು ಬಿಗ್ ಶಾಕ್ ಕೊಟ್ಟಿದ್ದಾರೆ. ಈ ಮುಖ್ಯದ್ವಾರ ಇಂದು ರಾತ್ರಿ ಯಾರಿಗಾಗಿ ತೆರೆದಿದೆ ಎಂದು ತಿಳಿದುಕೊಳ್ಳುವ ಸಮಯ ಶುರುವಾಗಿದ್ದು, ಈ ರಾತ್ರಿ ಈ ಮನೆಯಲ್ಲಿ ನಿಮ್ಮ ಕಡೆಯ ರಾತ್ರಿ ಆಗಿರಬಹುದು ಎಂದು ಬಿಗ್ ಬಾಸ್ ಅನೌನ್ಸ್ ಮಾಡಿದ್ದಾರೆ.
ಮಿಡ್ ವೀಕ್ ಎಲಿಮಿನೇಷನ್‌ನಲ್ಲಿ 6 ಸ್ಪರ್ಧಿಗಳು ಡೇಂಜರ್ ಝೋನ್ ತಲುಪಿದ್ದು ಒಬ್ಬೊಬ್ಬರು ಎಲಿಮಿನೇಟ್ ಆಗಬೇಕಾದವರ ಹೆಸರು ಹೇಳಿ ಅವರ ಫೋಟೋವನ್ನು ಸ್ವಿಮ್ಮಿಂಗ್‌ಪೂಲ್ ನೀರಿಗೆ ಎಸೆದಿದ್ದಾರೆ. ಮೋಕ್ಷಿತಾ ಅವರು ಗೌತಮಿ ಹೆಸರು ಹೇಳಿದ್ರೆ, ತ್ರಿವಿಕ್ರಮ್ - ಮಂಜು ಹಾಗೂ ಭವ್ಯಾ ಅವರು ಮಂಜು ಹೆಸರನ್ನ ಹೇಳಿದ್ದಾರೆ.
ಇದನ್ನೂ ಓದಿ: BBK11: ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆಗೆ ಮುಹೂರ್ತ ಫಿಕ್ಸ್; ಯಾವಾಗ? ಟಾಪ್ 6 ಸ್ಪರ್ಧಿಗಳು ಯಾರು?
ಮಂಜು ಅವರು ಭವ್ಯಾ ಅವರ ನಡವಳಿಕೆ ಬಿಗ್ ಬಾಸ್ ಮನೆಯಲ್ಲಿ ಕೆಲವರಿಗೆ ಇಷ್ಟ ಆಗಿಲ್ಲ ಎಂದಿದ್ದಕ್ಕೆ ಭವ್ಯಾ ಕಣ್ಣೀರು ಹಾಕಿದ್ದಾರೆ. ಗೌತಮಿ ಅವರು ತ್ರಿವಿಕ್ರಮ್ ಟಾಸ್ಕ್ ಬಿಟ್ಟು ಬೇರೆ ಎಲ್ಲೂ ಕಾಣಿಸಿಕೊಳ್ಳಲಿಲ್ಲ. ಅವರನ್ನ ಅವರು ಪ್ರೂ ಮಾಡಿಕೊಳ್ಳಲು ಆಗಲಿಲ್ಲ ಅನ್ನೋ ಕಾರಣ ಕೊಟ್ಟಿದ್ದಾರೆ.
ಮಂಜು ಅವರಂತೆ ಭವ್ಯಾ ಕೂಡ ಮಂಜು ಅವರು ಮನೆಯವರು ಬಂದು ಹೇಳಿ ಹೋದ ಮೇಲೆ ಬದಲಾವಣೆ ನೋಡಬಹುದು ಅಂದುಕೊಂಡ್ರೆ ಬದಲಾವಣೆ ಆಗಲಿಲ್ಲ ಅದು ಉಲ್ಟಾಪಲ್ಟಾ ಆಗಿ ಹೋಯಿತು ಎಂದಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಉಳಿಯೋದಕ್ಕೆ ಇಂದು ರಾತ್ರಿ ಕೊನೆಯ ಅವಕಾಶ ಆಗಿದ್ದು, ಗೌತಮಿ, ಮಂಜು, ತ್ರಿವಿಕ್ರಮ್, ಭವ್ಯಾ, ಮೋಕ್ಷಿತಾ ಹಾಗೂ ರಜತ್ ಗಂಟು ಮೂಟೆ ಕಟ್ಟಿಕೊಂಡು ರೆಡಿಯಾಗಿದ್ದಾರೆ. ಬಿಗ್ ಬಾಸ್ ಮುಖ್ಯದ್ವಾರ ತೆರೆಯಲಾಗಿದ್ದು, ಯಾರಿಗೆ ಬ್ಯಾಡ್ ಲಕ್ ಅನ್ನೋದು ಕೆಲವೇ ಗಂಟೆಯಲ್ಲಿ ಗೊತ್ತಾಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ