ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್​ಬಾಸ್​ ಖ್ಯಾತಿಯ ಚೈತ್ರಾ ಕುಂದಾಪುರ.. ಫೋಟೋಸ್ ಇಲ್ಲಿವೆ

author-image
Bheemappa
Updated On
ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬಿಗ್​ಬಾಸ್​ ಖ್ಯಾತಿಯ ಚೈತ್ರಾ ಕುಂದಾಪುರ.. ಫೋಟೋಸ್ ಇಲ್ಲಿವೆ
Advertisment
  • ಪ್ರೀತಿಸಿದ ಹುಡುಗನ ಜೊತೆಗೆ ಹಸೆಮಣೆ ಏರಿದ ಚೈತ್ರಾ ಕುಂದಾಪುರ
  • ಸರಳ, ಸುಂದರವಾಗಿ ನಡೆದ ಚೈತ್ರಾ, ಶ್ರೀಕಾಂತ್ ಮದುವೆ ಸಂಭ್ರಮ
  • ನವದಂಪತಿಗೆ ಶುಭಹಾರೈಸಿದ ರಜತ್, ಗೋಲ್ಡ್​ ಸುರೇಶ್, ಧನರಾಜ್

ಉಡುಪಿ: ಕನ್ನಡದ ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕುಂದಾಪುರ ಅವರು ಕಮಲಶಿಲೆಯ ಬ್ರಾಹ್ಮೀ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಇಂದು ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಉಡುಪಿಯ ಹಿರಿಯಡ್ಕದ ಶ್ರೀಕಾಂತ್ ಕಶ್ಯಪ್ ಜೊತೆ ಹಸೆಮಣೆ ಏರಿದ್ದಾರೆ. 12 ವರ್ಷಗಳಿಂದ ಪ್ರೀತಿ ಮಾಡುತ್ತಿದ್ದ ಜೋಡಿ ಇಂದು ಖುಷಿ ಖುಷಿಯಾಗಿ ದಾಂಪತ್ಯ ಜೀವನಕ್ಕೆ ವೆಲ್​ಕಮ್ ಹೇಳಿದ್ದಾರೆ.

publive-image

ಚೈತ್ರಾ ಕುಂದಾಪುರ ಹಾಗೂ ಶ್ರೀಕಾಂತ್ ಕಶ್ಯಪ್ ಅವರು ಗುರು ಹಿರಿಯರ ಸಮ್ಮುಖದಲ್ಲಿ ವೈದಿಕ ಶಾಸ್ತ್ರದಂತೆ ಮದುವೆ ಆಗಿದ್ದಾರೆ. ವಿವಾಹ ಸಮಾರಂಭ ಸರಳ, ಸುಂದರವಾಗಿ ನೆರವೇರಿದೆ. ತಮ್ಮ ಕುಟುಂಬಕ್ಕೆ ಆಪ್ತರಾದ, ಬಂಧು ಬಳಗ ಸೇರಿ 100 ಜನರಿಗೆ ಮಾತ್ರ ವಿವಾಹಕ್ಕೆ ಆಹ್ವಾನ ನೀಡಲಾಗಿತ್ತು. ಇದರ ಜೊತೆಗೆ ನವದಂಪತಿಗೆ ಬಿಗ್​ಬಾಸ್ ಖ್ಯಾತಿಯ ಧನರಾಜ್, ರಜತ್ ಕಿಶನ್, ಗೋಲ್ಡ್​ ಸುರೇಶ್ ಭಾಗಿಯಾಗಿ ನವದಂಪತಿಗೆ ಶುಭಹಾರೈಸಿದರು.

publive-image

ಕಾಲೇಜಿನಲ್ಲಿ ಓದುವಾಗಲೇ ಚೈತ್ರಾ ಕುಂದಾಪುರ ಹಾಗೂ ಶ್ರೀಕಾಂತ್ ಕಶ್ಯಪ್ ನಡುವೆ ಮೊದಲು ಜಗಳ ನಡೆದಿತ್ತು. ಬಳಿಕ ಈ ಜಗಳ ಸ್ನೇಹವಾಗಿ ಮಾರ್ಪಟ್ಟು ನಂತರದ ದಿನಗಳಲ್ಲಿ ಪ್ರೀತಿಯ ಬಲೆಗೆ ಸಿಕ್ಕಿಕೊಂಡಿದ್ದರು. ಹೀಗೆ 12 ವರ್ಷಗಳ ಕಾಲ ಇಬ್ಬರು ಪ್ರೀತಿ ಮಾಡಿ ಒಬ್ಬರಿಗೊಬ್ಬರು ಅರ್ಥ ಮಾಡಿಕೊಂಡು ಇದೀಗ ಮದುವೆ ಆಗಿದ್ದಾರೆ.

publive-image

ಶ್ರೀಕಾಂತ್ ಕಶ್ಯಪ್ ಅವರು ಆ್ಯನಿಮೇಶನ್ ಕೋರ್ಸ್​ ಮಾಡಿದ್ದು ಸುದ್ದಿ ವಾಹಿನಿಯಲ್ಲಿ ಕೆಲಸ ಮಾಡಿದ್ದಾರೆ. ಇವರು ಕೆಲಸ ಮಾಡುವ ಸುದ್ದಿ ವಾಹಿನಿಯಲ್ಲೇ ಚೈತ್ರಾ ಕೂಡ ಕೆಲಸ ಮಾಡಿದ್ದಾರೆ. ಇತ್ತೀಚೆಗಷ್ಟೇ ಚೈತ್ರಾ ಅವರು ಮಜಾ ಟಾಕೀಸ್​ ಶೋಗೆ ಎಂಟ್ರಿ ಕೊಟ್ಟಿದ್ದರು.

ಇದನ್ನೂ ಓದಿ:IPL ಮ್ಯಾಚ್ ರದ್ದು.. ವಂದೇ ಭಾರತ್ ರೈಲಿನಲ್ಲಿ ಪಂಜಾಬ್, ಡೆಲ್ಲಿ ಆಟಗಾರರ ಸ್ಥಳಾಂತರ

publive-image

ಈ ವೇಳೆ ಸೃಜನ್ ಲೋಕೋಶ್ ಅವರು ಮದುವೆ ಬಗ್ಗೆ ಕೇಳಿದ ಪ್ರಶ್ನೆಗೆ, ಲವ್ ಕಮ್ ಆರೇಂಜ್ ಮ್ಯಾರೇಜ್ ಆಗುತ್ತೇನೆ ಎಂದು ಚೈತ್ರಾ ಕುಂದಾಪುರ ಹೇಳಿದ್ದರು. ಅದರಂತೆ ಪ್ರೀತಿಸಿದ ಹುಡುಗನ ಜೊತೆ ಇಂದು ಹಸೆಮಣೆ ಏರಿದ್ದಾರೆ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment