/newsfirstlive-kannada/media/post_attachments/wp-content/uploads/2024/12/Gold-Suresh-Eliminated.jpg)
ಬಿಗ್ ಬಾಸ್ ಸೀಸನ್ 11 ದಿನದಿಂದ ದಿನಕ್ಕೆ ರೋಚಕ ತಿರುವುಗಳನ್ನ ಪಡೆದುಕೊಳ್ಳುತ್ತಿದೆ. ಮನೆಯಲ್ಲಿರುವ ಸ್ಪರ್ಧಿಗಳು ಗೆಲ್ಲುವ ಟಾರ್ಗೆಟ್‌ನಲ್ಲಿ ವಿನ್ನರ್ ಕಪ್ ಮೇಲೆ ಕಣ್ಣು ಇಟ್ಟಿದ್ದಾರೆ. ಉಳಿದ 11 ಮಂದಿ ಸದಸ್ಯರಲ್ಲಿ ಒಬ್ಬೊಬ್ಬರಾಗಿ ಎಲಿಮಿನೇಟ್ ಆಗಿ ಬಿಗ್ ಬಾಸ್ ಮನೆಯಿಂದ ಹೊರ ಬರುತ್ತಿದ್ದಾರೆ. ಈ ವಾರದ ಎಲಿಮಿನೇಷನ್ ಕೂಡ ಟ್ವಿಸ್ಟ್ ಮೇಲೆ ಟ್ವಿಸ್ಟ್ ಪಡೆದುಕೊಂಡಿದೆ.
11ನೇ ವಾರದ ಎಲಿಮಿನೇಷನ್‌ನಲ್ಲಿ ಬಿಗ್ ಬಾಸ್ ಹೊಸ ಟ್ವಿಸ್ಟ್ ಕೊಟ್ಟಿದ್ದಾರೆ. ಈ ವಾರ ಮನೆಯಿಂದ ಹೊರ ಬರೋದು ಯಾರು ಅನ್ನೋದು ಇನ್ನೂ ಸಸ್ಪೆನ್ಸ್ ಆಗಿದೆ. ಆದರೆ ಡೇಂಜರ್ ಝೋನ್‌ನಲ್ಲಿ ಉಳಿದಿರುವ ಸ್ಪರ್ಧಿಗಳಲ್ಲಿ ಯಾರು ಆಚೆ ಬರ್ತಾರೆ ಅನ್ನೋದು ಇಂದಿನ ಎಪಿಸೋಡ್‌ನಲ್ಲಿ ರಿವೀಲ್ ಆಗಲಿದೆ.
ಎಲಿಮಿನೇಟ್ ಯಾರಾಗ್ತಾರೆ?
ಈ ವಾರ ಬಿಗ್‌ಬಾಸ್ ಮನೆಯಿಂದ ಆಚೆ ಹೋಗಲು ಒಟ್ಟು 8 ಮಂದಿ ನಾಮಿನೇಟ್ ಆಗಿದ್ದಾರೆ. ಭವ್ಯಾ ಗೌಡ, ಶಿಶಿರ್, ತ್ರಿವಿಕ್ರಮ್, ರಜತ್, ಧನರಾಜ್ ಆಚಾರ್ಯ, ಹನುಮಂತ ಹಾಗೂ ಚೈತ್ರಾ ಕುಂದಾಪುರ ನಾಮಿನೇಟ್ ಆಗಿದ್ದಾರೆ. ಕ್ಯಾಪ್ಟನ್ ಗೌತಮಿ ಜಾಧವ್ ನೇರವಾಗಿ ಮೋಕ್ಷಿತಾ ಪೈ ನಾಮಿನೇಟ್ ಆಗಿದ್ದಾರೆ.
ಇದನ್ನೂ ಓದಿ: BBK11: ರಜತ್, ಧನರಾಜ್ ಫೈಟ್‌ಗೆ 5 ನಿಮಿಷ ಟೈಮ್.. ಇವತ್ತು ಬಿಗ್ ಬಾಸ್ ಮನೆಯಿಂದ ಔಟ್ ಯಾರು?
ಈ 8 ಜನರಲ್ಲಿ ನಿನ್ನೆಯ ಎಪಿಸೋಡ್‌ನಲ್ಲಿ ತ್ರಿವಿಕ್ರಮ್ ಹಾಗೂ ಹನುಮಂತ ಮೊದಲಿಗೆ ಸೇಫ್ ಆಗಿದ್ದಾರೆ. ಇನ್ನುಳಿದ 6 ಮಂದಿಯಲ್ಲಿ ಯಾರು ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಬರ್ತಾರೆ ಅನ್ನೋದು ಕುತೂಹಲ ಕೆರಳಿಸಿದೆ.
ಗೋಲ್ಡ್ ಸುರೇಶ್ ದಿಢೀರ್ ನಿರ್ಧಾರ
ಮೂಲಗಳ ಪ್ರಕಾರ ಈ ವಾರ ಬಿಗ್‌ಬಾಸ್ ಮನೆಯ ಎಲಿಮಿನೇಟ್ ಡಿಫರೆಂಟ್ ಆಗಿದೆ. ಎಲಿಮಿನೇಷನ್ ಜೊತೆಗೆ ಕ್ಯಾಪ್ಟನ್ ಆಗಿ ಆಯ್ಕೆ ಆಗಿದ್ದ ಗೋಲ್ಡ್ ಸುರೇಶ್ ಅವರು ಅಚ್ಚರಿಯ ನಿರ್ಧಾರ ತೆಗೆದುಕೊಂಡಿದ್ದಾರೆ. ಗೋಲ್ಡ್ ಸುರೇಶ್ ವೈಯಕ್ತಿಕ ಕಾರಣಗಳಿಂದ ಮನೆಯಿಂದ ಆಚೆ ಬಂದಿದ್ದಾರೆ. ಫ್ಯಾಮಿಲಿ ಪ್ರಾಬ್ಲಂ ಇರೋದ್ರಿಂದ ಬಿಗ್ ಬಾಸ್ ಮನೆಯಿಂದ ಹೋಗಲೇಬೇಕಾದ ಪರಿಸ್ಥಿತಿ ಇದೆ ಎಂದು ಗೋಲ್ಡ್ ಸುರೇಶ್ ಅವರು ಬಿಗ್ ಬಾಸ್ ಶೋ ಅನ್ನೇ ಕ್ವಿಟ್ ಮಾಡಿದ್ದಾರೆ. ಸದ್ಯ ಗೋಲ್ಡ್ ಸುರೇಶ್ ಅವರು ವೈಯಕ್ತಿಕ ಕಾರಣ ನೀಡಿ ಬಿಗ್ ಬಾಸ್ ಮನೆಯಿಂದ ಹೊರಗಡೆ ಬಂದಿದ್ದಾರೆ. ನಿಜವಾದ ಕಾರಣ ಏನು ಅನ್ನೋದನ್ನ ಇನ್ನೂ ರಿವೀಲ್ ಆಗಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ