BBK11 ಹಳಬರು, ಹೊಸಬರ ಮಹಾ ಮಿಲನ.. ಸಂತು-ಪಂತು​​ ಜೊತೆ ಬಿಗ್​ಬಾಸ್ ವಿಶೇಷ ಮನವಿ ..!

author-image
Bheemappa
Updated On
BBK11 ಹಳಬರು, ಹೊಸಬರ ಮಹಾ ಮಿಲನ.. ಸಂತು-ಪಂತು​​ ಜೊತೆ ಬಿಗ್​ಬಾಸ್ ವಿಶೇಷ ಮನವಿ ..!
Advertisment
  • ಗೆಳೆಯನ ನೋಡುತ್ತಿದ್ದಂತೆ ಓಡಿ ಹೋಗಿ ತಬ್ಬಿಕೊಂಡ ಸಂತು
  • ಬಿಗ್ ಮನೆಗೆ ಹಳೆ ಸ್ಪರ್ಧಿಗಳು ಯಾರು ಯಾರು ಬಂದಿದ್ದಾರೆ?
  • ಬೆಂಕಿ ತನಿಷಾ ಕುಪ್ಪಂಡಾ ಜತೆ ಡ್ಯಾನ್ಸ್ ಮಾಡಿದ ಹನುಮಂತು

ಭಾನುವಾರದ ಸಂಚಿಕೆಯಲ್ಲಿ ಚೈತ್ರಾ ಕುಂದಾಪುರ ಅಥವಾ ಐಶ್ವರ್ಯಾ ಈ ಇಬ್ಬರಲ್ಲಿ ಯಾರದರೂ ಒಬ್ಬರು ಬಿಗ್​ ಬಾಸ್​ನಿಂದ ಹೊರ ಬರುತ್ತಾರೆ ಎಂದುಕೊಳ್ಳಲಾಗಿತ್ತು. ಆದರೆ ಕೊನೆಗೆ ಇಬ್ಬರು ಸೇಫ್ ಆಗಿದ್ದಾರೆ. ಇದರ ಜೊತೆಗೆ ಬಿಗ್ ಬಾಸ್​ ಮನೆಗೆ ಇಂದು ಸೀಸನ್-​ 10ರ ಸ್ಪರ್ಧಿಗಳು ಆಗಮನವಾಗಿದ್ದು ಹಳಬರ-ಹೊಸಬರ ಮಹಾ ಮಿಲನವಾಗಿದೆ.

publive-image

ಹೊರಗಡೆಯಿಂದ ಯಾರು ಬರಬಹುದು ಎಂದು ಸ್ಪರ್ಧಿಗಳೆಲ್ಲಾ ಕುತೂಹಲದಿಂದ ಕಾಯುತ್ತಿರುವಾಗ ಬೆಂಕಿ ತನಿಷಾ ಕುಪ್ಪಂಡಾ ಬಿಗ್ ಎಂಟ್ರಿ ಕೊಟ್ಟರು ನೋಡಿ, ಮನೆಯ ಸದಸ್ಯರೆಲ್ಲಾರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಇವರ ಬಳಿಕ ಸೂಟ್​, ಬೂಟಿನಲ್ಲಿ ಡ್ರೋನ್ ಪ್ರತಾಪ್ ಬಂದಿದ್ದೇ ಬಂದಿದ್ದು ಹಂಗೆ ಚೈತ್ರಾ ಕುಂದಾಪುರಗೆ ಟಾಂಗ್ ಕೊಟ್ಟರು. ಚೈತ್ರಾಕ್ಕ ‘ಅಣ್ಣ’ ಅಂತೇನೂ ಕರೆಯಬೇಡಿ ಎಂದ್ರು. ಬಿಗ್​ ಬಾಸ್​ ಸ್ಪರ್ಧಿಗಳಿಗೆ ಸರ್​​ಪ್ರೈಸ್​ ಜೊತೆ ಮಜಾ ಕೂಡ ಕಾದಿತ್ತು. ಏಕೆಂದರೆ ಚುಟು ಚುಟು ಅಂತೈತೆ ಎನ್ನುವ ಸಾಂಗ್​​ಗೆ ಹನುಮಂತು, ತನಿಷಾ ಕುಪ್ಪಂಡಾ ಜೊತೆ ಸ್ಟೆಪ್ಸ್ ಹಾಕಿದರು.

ಇದನ್ನೂ ಓದಿ:BBK11; ಬ್ಯೂಟಿ ತನಿಷಾ ಕುಪ್ಪಂಡಾ ಜೊತೆ ಹನುಮಂತು ಮಸ್ತ್ ಸ್ಟೆಪ್ಸ್​.. ಕೆಂಗಣ್ಣಿನಿಂದ ಗುರಾಯಿಸಿದ ‘ಬೆಂಕಿ’

publive-image

ತುಕಾಲಿ ಸಂತೋಷ ಫುಲ್ ಜಾಲಿಯಾಗಿ ಇರುವಾಗ ಬಿಗ್ ಬಾಸ್ ವಿಶೇಷ ಮನವಿ ಮಾಡಿದ್ದಾರೆ. ಸಂತು-ಪಂತು ಜೋಡಿ ಎತ್ತುಗಳು. ಇಬ್ಬರು ಇರದೆ ಹೋದರೇ ಅಪೂರ್ಣತೆ ಭಾವ ಕಾಡುತ್ತದೆ ಎಂದು ಬಿಗ್​ ಬಾಸ್ ಹೇಳುತ್ತಿದ್ದಂತೆ ಮೇನ್ ಡೋರ್​ನಿಂದ ವರ್ತೂರು ಸಂತೋಷ ಎರಡು ಕೈಯಲ್ಲಿ ಬ್ಯಾಗ್​ ಹಿಡಿದು ಎಂಟ್ರಿ ಕೊಟ್ಟರು. ಇದನ್ನು ನೋಡಿದ ತುಕಾಲಿ ಸಂತು ಓಡಿ ಹೋಗಿ ಗೆಳೆಯನನ್ನ ಅಪ್ಪಿಕೊಂಡು ಸಂತಸ ಪಟ್ಟಿದ್ದಾರೆ.

publive-image

ಸದ್ಯ ಬಿಗ್ ಬಾಸ್ ಮನೆಯಲ್ಲಿ ಹೊಸ ಕಳೆ ಬಂದಿದ್ದು ಹಳಬರು ಹಾಗೂ ಹೊಸಬರು ಮಹಾ ಮಿಲನವಾಗಿದೆ. ಮೊದಲು ಬಿಗ್​ ಬಾಸ್​ ಮನೆಗೆ ಹಳೆ ಸ್ಪರ್ಧಿಗಳನ್ನ ಒಬ್ಬರು ಅಥವಾ ಇಬ್ಬರನ್ನು ಮಾತ್ರ ಕಳುಹಿಸುತ್ತಿದ್ದರು. ಆದರೆ ಇದೇ ಬಾರಿ ಹಳೆಯ ಸ್ಪರ್ಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಒಟ್ಟು ನಾಲ್ವರು ಬಿಗ್​ಬಾಸ್​ ಮನೆಗೆ ಬಂದಿದ್ದಾರೆ. ತಾವೆಲ್ಲಾ ಹೇಗೆ ಆಡಿದ್ದರು, ಈಗ ನೀವು ಹೇಗೆ ಆಡಬೇಕು ಎಂದು ಸೀಸನ್-10 ಸ್ಪರ್ಧಿಗಳು, ಈಗಿನವರಿಗೆ ಹೇಳಿಕೊಡಬಹುದು. ಜ್ಯೂನಿಯರ್ ಸ್ಪರ್ಧಿಗಳ ಆಟಕ್ಕೆ ಹೊಸ ಟಚ್ ಸೀನಿಯರ್ ಸ್ಪರ್ಧಿಗಳು ಕೊಡಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment