/newsfirstlive-kannada/media/post_attachments/wp-content/uploads/2024/11/bbk1189.jpg)
ಬಿಗ್‌ಬಾಸ್ ಮನೆಯಲ್ಲಿ ಯಾವುದು ಅಂದುಕೊಂಡಂತೆ ನಡೆಯೋದಿಲ್ಲ. ಯಾರೊಬ್ಬರನ್ನು ಅಷ್ಟು ಸುಲಭವಾಗಿ ಅಳೆದು ತೂಗಲು ಸಾಧ್ಯವೇ ಇಲ್ಲ. ವಾರಗಳು ಕಳೆದಂತೆ ಪ್ರತಿಯೊಬ್ಬ ಸ್ಪರ್ಧಿಯು ಎದುರಾಳಿಗಳಿಗೆ ಸವಾಲುಗಳಾಗಿ ನಿಲ್ಲುತ್ತಾನೆ. ಯಾರನ್ನು ಸುಲಭವಾಗಿ ಎದುರಿಸಬಹುದು ಅಂದುಕೊಂಡ್ರೆ ಅದು ಮೂರ್ಖತನವಾಗುತ್ತದೆ.
ಬಿಗ್ ಬಾಸ್ ಸೀಸನ್ 11 ಈಗ 9ನೇ ವಾರಕ್ಕೆ ಕಾಲಿಟ್ಟಿದೆ. ಈ ವಾರದ ಕ್ಯಾಪ್ಟನ್ ಆಗಿರುವ ಮಂಜು ಅವರು ಮಹಾರಾಜರಾಗಿ ತಮ್ಮ ದರ್ಬಾರ್ ತೋರುತ್ತಿದ್ದಾರೆ. ಮಂಜು ಅವರ ದಬ್ಭಾಳಿಕೆಯ ಮಾತು ಬಿಗ್‌ಬಾಸ್ ಮನೆಯ ಸದಸ್ಯರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಮಹಾರಾಜ ಮಂಜು ಅವರ ದರ್ಬಾರ್‌ನಲ್ಲಿ ಕೆಲವರಿಗೆ ಶಿಕ್ಷೆಯನ್ನು ವಿಧಿಸಲಾಗಿದ್ದು, ಬಸ್ಕಿ ಹೊಡೆದು, ಹೊಡೆದು ಸುಸ್ತಾಗಿದ್ದಾರೆ. ಮಂಜು ಅವರ ಈ ಆಜ್ಞೆಗೆ ಬೇಸತ್ತ ಕಿಲಾಡಿ ಜೋಡಿ ಸೆಡ್ಡು ಹೊಡೆಯೋ ಶಪಥ ಮಾಡಿದೆ.
ಹನು-ಧನು ಜೋಡಿ ಮಸಲತ್ತು!
ಬಿಗ್ ಬಾಸ್ ಮನೆಯ ಕಿಲಾಡಿ ಜೋಡಿ ಹನುಮಂತ ಹಾಗೂ ಧನರಾಜ್ ಈಗ ಮಹಾರಾಜ ಮಂಜು ವಿರುದ್ಧವೇ ಮಸಲತ್ತು ಮಾಡಿದ್ದಾರೆ. ಬಿಗ್‌ಬಾಸ್ ಕ್ಯಾಮೆರಾ ಮುಂದೆ ಮಾತನಾಡಿರುವ ಹನುಮಂತ, ಧನರಾಜ್ ತಮ್ಮ ಕೋಪವನ್ನ ವ್ಯಕ್ತಪಡಿಸಿದ್ದಾರೆ. ಬಿಗ್‌ಬಾಸ್ ರಾಜರಿಗೆ ನೀವು ಅಧಿಕಾರ ಕೊಟ್ಟಿದ್ದೀರಿ ಅಂತ ನಾವು ಸುಮ್ಮನಿದ್ದೇವೆ. ಇಲ್ಲ ಅಂದ್ರೆ ಸುಮ್ಮನೆ ಇರೋ ಮಗಾನೇ ಅಲ್ಲ ನಾನು. ನಮ್ಮನ್ನ ಏನು ಅಂದುಕೊಂಡಿದ್ದಾರೆ ಹೇಳಿದ್ದನ್ನೆಲ್ಲಾ ಕೇಳಿಸಿಕೊಳ್ಳೋಕೆ ಎಂದು ಧನರಾಜ್ ಹೇಳಿದ್ದಾರೆ.
ಧನರಾಜ್ ಮಾತಿಗೆ ಉತ್ತರಿಸಿದ ಹನುಮಂತು ಇರಲಿ, ಇರಲಿ ಇದೊಂದು ಸಲ ಹೊಟ್ಟೆಗೆ ಹಾಕೋ ದೋಸ್ತಾ. ಟಾಸ್ಕ್ ಹಂಗೇ ಐತೆ. ಪಟ್ಟಾಭಿಷೇಕ ಆದ ಮೇಲೆ ಅಧಿಕಾರ ಚಲಾಯಿಸಬೇಕು ಅಂತ ಹೇಳಿದ್ದಾರೆ. ಆದ್ರೆ ಹುಲಿಗೆ ಇನ್ನೂ ಅಧಿಕಾರವೇ ಕೊಟ್ಟಿಲ್ಲ ಆಗಲೇ ಆವಾಜ್ ಹಾಕುತ್ತಾ ಇದೆ ಎಂದು ಹನುಮಂತು ಹೇಳಿದ್ದಾರೆ.
ಮಂಜು ಅವರ ದಬ್ಭಾಳಿಕೆ ಮಾತಿಗೆ ರೋಸಿ ಹೋದ ಧನರಾಜ್ ನಾವು ರಾಜನ ಜೊತೆ ಒಳ್ಳೆಯವರಾಗಿದ್ದುಕೊಂಡು ಅವನ ಹಿಂದೆಯೇ ಮಸಲತ್ತು ಮಾಡಬೇಕು. ಅದೇ ಸ್ಟ್ರ್ಯಾಟಜಿ ಎಂದು ಹನುಮಂತುಗೆ ತಿಳಿಸಿದ್ದಾರೆ. ಧನರಾಜ್ ಪ್ಲಾನ್‌ಗೆ ಹನುಮಂತು ಕೈ ಜೋಡಿಸಿದ್ದು ಜನರೇಟರ್ ಪ್ಲಾನ್ ಮಾಡಲು ಹೊರಟಿದ್ದಾರೆ.
ಇದನ್ನೂ ಓದಿ: BBK11: ಬಿಗ್‌ಬಾಸ್ ಮನೆಯಲ್ಲಿ 9ನೇ ವಾರಕ್ಕೆ ಸ್ಪರ್ಧಿಗಳ ಲೆಕ್ಕಾಚಾರ ಉಲ್ಟಾ ಆಗುತ್ತಾ? ಏನಿದು ಹೊಸ ಟ್ವಿಸ್ಟ್?
ಮಹಾರಾಜ ಮಂಜು ಅವರ ಸಾಮ್ರಾಜ್ಯದಲ್ಲಿ ಎಲ್ಲರೂ ರೋಸಿ ಹೋದ್ರೆ ತಿರುಗಿ ಬೀಳುವ ಸಾಧ್ಯತೆ ಇದೆ. ಬಿಗ್‌ಬಾಸ್ ಮನೆಯಲ್ಲಿ ಚಿಕ್ಕ, ಚಿಕ್ಕ ಮಕ್ಕಳು ಅಂತಿರೋ ಹನುಮಂತ, ಧನರಾಜ್ ತಿರುಗಿ ಬಿದ್ದಿರುವಾಗ ಉಳಿದವರು ಅಖಾಡಕ್ಕೆ ಇಳಿದ ಆರ್ಭಟಿಸಿದರು ಅಚ್ಚರಿಯಿಲ್ಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ