BBK11 ‘ನನ್ನ ತಲೆ ಆಫ್ ಆದ್ರೆ ಅಷ್ಟೇ..’ ಚೈತ್ರಾ ಮೇಲೆ ರೊಚ್ಚಿಗೆದ್ದ ಹನುಮಂತ..!

author-image
Ganesh
Updated On
BBK11: ಆಟದ ದಿಕ್ಕು, ದಾರಿ ತಪ್ಪಿಸಿದ್ರಾ ಚೈತ್ರಾ ಕುಂದಾಪುರ? ಕಿಚ್ಚ ಸುದೀಪ್​ ಖಡಕ್ ಕ್ಲಾಸ್‌!
Advertisment
  • ಬಿಗ್​ಬಾಸ್​​ಗೆ ಮತ್ತೆ ಬೇಸರ ಮಾಡಿದ ಸ್ಪರ್ಧಿಗಳು
  • ಟಾಸ್ಕ್​​ಗಳು ದಿಢೀರ್​ ಕ್ಯಾನ್ಸಲ್​, ಶಿಕ್ಷೆ ಪ್ರಕಟ ಆಗಿದೆ
  • ಈ ವಾರ ಮನೆಯಲ್ಲಿ ಎಲ್ಲರೂ ನಾಮಿನೇಟ್?

ಬಿಗ್​​ಬಾಸ್​ ಮನೆಯಲ್ಲಿ ಸ್ಪರ್ಧಿಗಳ ನಡುವಿನ ಕಿತ್ತಾಟ ಜೋರಾಗಿದೆ. ತೀವ್ರ ಪೈಪೋಟಿಯಿಂದಾಗಿ ಜಿದ್ದಿಗೆ ಬಿದ್ದವರಂತೆ ಸ್ಪರ್ಧಿಗಳು ಕಚ್ಚಾಡಿಕೊಳ್ತಿದ್ದು, ಇದರಿಂದ ಟಾಸ್ಕ್​ ಪೂರ್ಣಗೊಳಿಸೋದೇ ದೊಡ್ಡ ಸವಾಲ್ ಆಗಿದೆ. ಬೇಸತ್ತ ಬಿಗ್​ಬಾಸ್​ ಮತ್ತೊಂದು ಟಾಸ್ಕ್​ ರದ್ದು ಮಾಡಿದ್ದಾರೆ.

ಇದರಿಂದ ಕೆಲವು ಸ್ಪರ್ಧಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಟಾಸ್ಕ್​ ರದ್ದಾಗುವಂತೆ ನಡೆದುಕೊಂಡ ಸ್ಪರ್ಧಿಗಳಿಗೆ ಶಿಕ್ಷೆಯಾಗಿ ಎಲ್ಲರೂ ನಾಮಿನೇಟ್ ಮಾಡುವ ಸಾಧ್ಯತೆ ಇದೆ. ಇದರ ಮಧ್ಯೆ ಚೈತ್ರಾ ಕುಂದಾಪುರ ಮೇಲೆ ಹನುಮಂತ ಗರಂ ಆಗಿರುವ ಪ್ರಸಂಗ ಕೂಡ ನಡೆದಿದೆ.

ಇದನ್ನೂ ಓದಿ:ಮನೆಗೆ ತೆಗೆದುಕೊಂಡು ಹೋಗಬೇಕಾಗಿದ್ದ ಮೀನನ್ನು ತಿಂದ ಬೆಕ್ಕು! ಆಮೇಲೆ ಆಗಿದ್ದೇ ರೋಚಕ

ಕಲರ್ಸ್ ಕನ್ನಡ ಬಿಡುಗಡೆ ಮಾಡಿರುವ ಪ್ರೊಮೋದಲ್ಲಿ ಹನುಮಂತ ಕೋಪಿಸಿಕೊಂಡಿರೋದನ್ನು ನೋಡಬಹುದಾಗಿದೆ. ಟಾಸ್ಕ್ ವಿಚಾರವಾಗಿ ಚೈತ್ರಾ ಕುಂದಾಪುರ ಜೊತೆ ಹನುಮಂತು ವಾದ ಮಾಡ್ತಾರೆ. ‘ನಾನು ಇನ್ನೂ ಇಲ್ಲೇ ಇದ್ದೇನೆ. ನಿಯಮ ಮೀರಿ ಗೆರೆ ದಾಟಿಲ್ಲ. ನನ್ ತಲೆ ಆಫ್ ಆದ್ರೆ.. ಮೊದಲೇ ಸರಿ ಇಲ್ಲ. ಯಾರ್ ಗಂಡು ಮಕ್ಕಳಿದ್ರೆ ಈಗ ಇತ್ತ’ ಎಂದು ಹನುಂತ ಎಚ್ಚರಿಕೆ ನೀಡಿದ್ದಾರೆ. ಹನುಮಂತು ಹಾಗಲ್ಲ ರೊಚ್ಚಿಗೇಳಲ್ಲ. ಅವರ ಕೋಪಕ್ಕೆ ನಿಜವಾದ ಕಾರಣ ಏನು ಅನ್ನೋದು ಇಂದು ರಾತ್ರಿ ಗೊತ್ತಾಗಲಿದೆ.

ಇದನ್ನೂ ಓದಿ:ಭಿಕ್ಷೆ ಬೇಡೋದನ್ನೇ ವ್ಯಾವಹಾರಿಕ ಉದ್ಯಮವಾಗಿ ಬದಲಾಯಿಸಿದ ಪಾಕ್.. ಅರಬ್ ರಾಷ್ಟ್ರಗಳು ಎಚ್ಚರಿಕೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment