/newsfirstlive-kannada/media/post_attachments/wp-content/uploads/2025/01/BBK11-Hanumantha-kiccha-Sudeep-1.jpg)
ಬಿಗ್ ಬಾಸ್ ಸೀಸನ್ 11 ಫಿನಾಲೆಗೆ ಮತ್ತಷ್ಟು ಹತ್ತಿರವಾಗಿದೆ. ಇವತ್ತು ಬಿಗ್ ಬಾಸ್ ಮನೆಯಿಂದ ಒಬ್ಬರು ಔಟ್ ಆಗಿ ಆಚೆ ಬರುತ್ತಿದ್ದಾರೆ. ಒಬ್ಬರ ತಲೆ ಮೇಲೆ ಎಲಿಮಿನೇಷನ್ ತೂಗುಗತ್ತಿ ನೇತಾಡುತ್ತಾ ಇದೆ. ಈ ಮಧ್ಯೆ ಹನುಮಂತನ ಪಂಚಿಂಗ್ ಡೈಲಾಗ್ ಮನೆ ಮಂದಿಯೆಲ್ಲಾ ಬಿದ್ದು, ಬಿದ್ದು ನಗುವಂತೆ ಮಾಡಿದೆ.
ಬಿಗ್ ಬಾಸ್ ಮನೆಯಲ್ಲಿ ಈಗ ಹನುಮಂತ ಫುಲ್ ರಾಕಿಂಗ್ ಸ್ಟಾರ್ ಆಗಿದ್ದಾರೆ. ಫಿನಾಲೆ ತಲುಪಿರುವ ಹನುಮಂತನ ಆಟ ಜೋರಾಗಿದ್ದು, ಬಿಗ್ ಬಾಸ್ ವೀಕ್ಷಕರಿಗೂ ಸಖತ್ ಇಷ್ಟವಾಗುತ್ತಿದೆ. ಇಂದು ಸೂಪರ್ ಸಂಡೇ ವಿತ್ ಬಾದ್ ಷಾ ಎಪಿಸೋಡ್‌ನಲ್ಲೂ ಕಿಚ್ಚ ಸುದೀಪ್ ಹನುಮಂತನ ಮಾತಿಗೆ ಕಳೆದು ಹೋಗಿದ್ದಾರೆ.
/newsfirstlive-kannada/media/post_attachments/wp-content/uploads/2025/01/BBK11-Hanumantha-kiccha-Sudeep.jpg)
ಸೂಪರ್ ಸಂಡೇ ಎಪಿಸೋಡ್‌ನಲ್ಲಿ ಕಿಚ್ಚ ಸುದೀಪ್ ಮನೆಯ ಸದಸ್ಯರು ಒಂದು ವಿಶೇಷ ಚಟುವಟಿಕೆಯನ್ನ ನೀಡಿದ್ದಾರೆ. ಪ್ರಶ್ನೆಗೆ ಉತ್ತರಿಸುವ ಈ ಟಾಸ್ಕ್‌ನಲ್ಲಿ ತಪ್ಪಾದ ಉತ್ತರ ನೀಡುವವರಿಗೆ ಶಾಕಿಂಗ್ ಟ್ರೀಟ್‌ಮೆಂಟ್ ಕೊಡಲಾಗುತ್ತಿದೆ. ಅಂದ್ರೆ ಸುದೀಪ್ ಕೇಳುವ ಪ್ರಶ್ನೆಗೆ ತಪ್ಪು ಉತ್ತರ ಕೊಟ್ಟುವರು ವಿಲವಿಲ ಒದ್ದಾಡಿದ್ದಾರೆ.
ಮೊದಲಿಗೆ ಭವ್ಯಾ, ಮಂಜು, ಗೌತಮಿ, ತ್ರಿವಿಕ್ರಮ್, ಚೈತ್ರಾ, ಧನರಾಜ್, ಮೋಕ್ಷಿತಾಗೆ ಸುದೀಪ್ ಪ್ರಶ್ನೆ ಕೇಳಿದ್ದಾರೆ. ತಪ್ಪು ಉತ್ತರ ಕೊಟ್ಟವರಿಗೆ ಬಿಗ್ ಬಾಸ್ ಕಡೆಯಿಂದ ಶಾಕ್ ಕೊಡಲಾಗಿದೆ. ಈ ಶಾಕಿಂಗ್ ಟಾಸ್ಕ್‌ನಲ್ಲೂ ಹನುಮಂತ ಸುದೀಪ್‌ಗೆ ಒಂದು ಮನವಿ ಮಾಡಿದ್ದಾರೆ.
View this post on Instagram
ಶಾಕ್ ಕೊಡುವ ಟಾಸ್ಕ್‌ಗೂ ಮುಂಚೆ ಹನುಮಂತ ಕಿಚ್ಚ ಸುದೀಪ್ ಅವರ ಬಳಿ ನಾನು ಮೊದಲು ಮೂತ್ರ ವಿಸರ್ಜನೆ ಮಾಡಿ ಬರುತ್ತೇನೆ ಎಂದು ಮನವಿ ಮಾಡಿದ್ದಾರೆ. ಹನುಮಂತು ಅವರ ಈ ಮುಗ್ಧತೆಯ ಮಾತು ಬಿಗ್ ಬಾಸ್ ಮನೆಯ ಎಲ್ಲರನ್ನೂ ನಗೆಗಡಲಲ್ಲಿ ತೇಲುವಂತೆ ಮಾಡಿದೆ. ಕಿಚ್ಚ ಸುದೀಪ್ ಅವರಂತೂ ಹನುಮಂತು ಪರಿಸ್ಥಿತಿ ನೋಡಿ ಬಿದ್ದು, ಬಿದ್ದು ನಕ್ಕಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us