/newsfirstlive-kannada/media/post_attachments/wp-content/uploads/2024/10/Hanubantu-BBK11.jpg)
ಬಿಗ್​ ಬಾಸ್​ ಕನ್ನಡ ಸೀಸನ್​ 11 ಕಾರ್ಯಕ್ರಮ ಭಾರೀ ಕುತೂಹಲದಿಂದ ಸಾಗುತ್ತಿದೆ. ಈಗಾಗಲೇ ಮನೆಯಿಂದ ಮೂರು ಸ್ಪರ್ಧಿಗಳು ಹೊರಹೋಗಿದ್ದು, ಅದರಲ್ಲಿ ಇಬ್ಬರನ್ನು ಹಲ್ಲೆ ವಿಚಾರಕ್ಕೆ ಹೊರಹಾಕಲಾಗಿದೆ. ಇದರ ಬೆನ್ನಲ್ಲೇ ದೊಡ್ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಗಾಯಕ ಹನುಮಂತ ಮನೆಯೊಳಕ್ಕೆ ಎಂಟ್ರಿ ಕೊಟ್ಟಿದ್ದು, ಬಿಗ್​ ಬಾಸ್​ ಮನೆಯ ನಾಯಕ ಸ್ಥಾನವನ್ನು ಅವರ ಕೈಗಿಟ್ಟಿದ್ದಾರೆ. ಹೀಗಿರುವಾಗ ಮನೆಯ ಸ್ಪರ್ಧಿಗಳ ನಡುವೆ ಅಸಮಾಧಾನ ಭುಗಿಲೆದ್ದಿದೆ. ಅದಕ್ಕೆ ಟಾಸ್ಕ್​ ಕಾರಣವಾಗಿದೆ.
ಹೌದು. ಬಿಗ್​ ಬಾಸ್​ ಮನೆಯ ಹೊಸ ಕ್ಯಾಪ್ಟನ್​ ಹನುಮಂತನಿಗೆ ಟಾಸ್ಕ್​​ ಕೊಟ್ಟಿದ್ದಾರೆ. ಮನೆಯ ಸ್ಪರ್ಧಿಗಳನ್ನು ನಂಬರ್​ ಆಧಾರದ ಮೇಲೆ ಸ್ಥಾನಗಳನ್ನು ನೀಡುವ ಟಾಸ್ಕ್​ ನೀಡಿದ್ದಾರೆ. ಆದರೆ ಹನುಮಂತು ನೀಡಿರುವ ಸ್ಥಾನದ ಕುರಿತು ಸ್ಪರ್ಧಿಗಳ ನಡುವೆ ಅಸಮಾಧಾನ ಉಂಟಾಗಿದೆ.
ಇದನ್ನೂ ಓದಿ: ಊರಿಗೆ ಹೋಗಿದ್ದಕ್ಕೆ ಸಿಟ್ಟು.. ನನಗೆ ಊಟ ಮಾಡಿಕೊಡೋರು ಯಾರು ಎಂದು ತಾಯಿಯನ್ನೇ ಕೊಂ*ದ ಮಗ
ಚೈತ್ರಾ ಕುಂದಾಪುರ, ಭವ್ಯ ಗೌಡ, ಕೀರ್ತಿ ಧರ್ಮರಾಜ್​, ತ್ರಿವಿಕ್ರಮ್​ ಹೀಗೆ ಕೆಲವರು ಹನುಮಂತು​ ಮೇಲೆ ಸಿಟ್ಟಿಗೆದ್ದಿದ್ದಾರೆ. ನನಗೆ ಈ ಸ್ಥಾನವನ್ನು ಯಾಕೆ ಕೊಟ್ಟೆ ಎಂದು ಕೋಪಿಸಿಕೊಂಡಿದ್ದಾರೆ. ಜೊತೆಗೆ ಹನುಮಂತುವನ್ನು ಪ್ರಶ್ನಿಸಿದ್ದಾರೆ.
ಹನುಮಂತು ಕೊಟ್ಟ ಸ್ಥಾನ; ಬುಗಿಲೆದ್ದ ಅಸಮಾಧಾನ!
ಬಿಗ್ ಬಾಸ್ ಕನ್ನಡ ಸೀಸನ್ 11 | ಸೋಮ-ಶುಕ್ರ ರಾತ್ರಿ 9:30#BiggBossKannada11#BBK11#HosaAdhyaya#ColorsKannada#BannaHosadaagideBandhaBigiyaagide#ಕಲರ್ಫುಲ್ಕತೆ#colorfulstory#Kicchasudeepapic.twitter.com/oXHUKRBL7P
— Colors Kannada (@ColorsKannada)
ಹನುಮಂತು ಕೊಟ್ಟ ಸ್ಥಾನ; ಬುಗಿಲೆದ್ದ ಅಸಮಾಧಾನ!
ಬಿಗ್ ಬಾಸ್ ಕನ್ನಡ ಸೀಸನ್ 11 | ಸೋಮ-ಶುಕ್ರ ರಾತ್ರಿ 9:30#BiggBossKannada11#BBK11#HosaAdhyaya#ColorsKannada#BannaHosadaagideBandhaBigiyaagide#ಕಲರ್ಫುಲ್ಕತೆ#colorfulstory#Kicchasudeepapic.twitter.com/oXHUKRBL7P— Colors Kannada (@ColorsKannada) October 21, 2024
">October 21, 2024
ಇದನ್ನೂ ಓದಿ: ಹೊಳೆಯಂತಾದ ಬೆಂಗಳೂರು.. ಒಂದಾ, ಎರಡಾ, ಸಾಲು ಸಾಲು ಅವಾಂತರಗಳ ನಡುವೆ ಸಂಕಷ್ಟದಲ್ಲಿ ಜನರು
ಇವರೆಲ್ಲರ ಮಾತು ಕೇಳಿ ಹನುಮಂತು ಸುಸ್ತಾಗಿದ್ದಾರೆ. ಕೊನೆಗೆ ಈ ರೀತಿ ಜಗಳ ಆಡುತ್ತೀರಾ ಅಂದರೆ ಬರುತ್ತಿರಲಿಲ್ಲ. ನಾನು ಈ ಆಟದಲ್ಲಿ ಇಲ್ಲ. ಕ್ಯಾನ್ಸಲ್​, ಕ್ಯಾಪ್ಟನ್​ ಕ್ಯಾನ್ಸಲ್​ ಎಂದು ಹನುಮಂತು ಬಿಗ್​ ಬಾಸ್​ ಬಳಿ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us