BBK11: ಬಿಗ್ ಬಾಸ್ ಮನೆಗೆ ಬಿಗ್ ಟ್ವಿಸ್ಟ್‌.. ಧ್ವಂಸವಾಯ್ತು ನರಕ! ದಿಢೀರ್ ಬದಲಾವಣೆಗೆ ಕಾರಣ ಯಾರು?

author-image
admin
Updated On
BBK11: ಬಿಗ್​ಬಾಸ್​ ನರಕದಲ್ಲಿರೋ ಪಾರ್ಟ್ಸ್​ಗಳನ್ನ ಕಿತ್ತು ಬಿಸಾಕಿದ್ದಕ್ಕೆ ನಡುಗಿದ ಮನೆಮಂದಿ.. ಮುಂದೇನು?
Advertisment
  • 2 ವಾರ ಕಳೆಯುವುದರೊಳಗೆ ಮನೆಯ ವಾತಾವರಣ ಫುಲ್ ಚೇಂಜ್‌!
  • ಬಿಗ್ ಬಾಸ್ ಮನೆಯಲ್ಲಿದ್ದ ನರಕವನ್ನು ಡೆಮಾಲಿಷ್ ಮಾಡಿದ್ದೇಕೆ?
  • ಬಿಗ್ ಬಾಸ್ ಮನೆಯ ನರಕ ನಿವಾಸಿಗಳಿಗೆ ಸಿಗುತ್ತಾ ದಸರಾ ಹಬ್ಬದ ಗಿಫ್ಟ್!

ಬಿಗ್ ಬಾಸ್ ಸೀಸನ್‌ 11ರ ಮನೆಗೆ ಎಮರ್ಜೆನ್ಸಿ ಘೋಷಣೆಯಾಗಿದ್ದು, ಸ್ಪರ್ಧಿಗಳೆಲ್ಲಾ ಕಕ್ಕಾಬಿಕ್ಕಿ ಆಗಿದ್ದಾರೆ. 2 ವಾರ ಕಳೆಯುವುದರೊಳಗೆ ಮನೆಯ ವಾತಾವರಣ ಸಂಪೂರ್ಣ ಬದಲಾಗಿದೆ. ಬಿಗ್ ಬಾಸ್ ಸೀಸನ್ 11ರ ಹೊಸ ಅಧ್ಯಾಯಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.

ಇದನ್ನೂ ಓದಿ: ದಿಢೀರ್​ ಬದಲಾಯಿತು ಬಿಗ್​ಬಾಸ್ ಅಸಲಿ ಮನೆ; ‘ನರಕ’ ಡೆಮಾಲಿಷ್ ಮಾಡಿದ್ದೇಕೆ BBK ತಂಡ? 

ಎಮರ್ಜೆನ್ಸಿ ಸೈರನ್ ಆನ್ ಆಗುತ್ತಿದ್ದಂತೆ ಬಿಗ್‍‍ಬಾಸ್ ಮನೆಗೆ ಮುಸುಕುಧಾರಿಗಳು ಎಂಟ್ರಿ ಕೊಟ್ಟಿದ್ದಾರೆ. ಮನೆಯಲ್ಲಿದ್ದ ಸ್ಪರ್ಧಿಗಳು ಕಿರುಚಾಡಿಕೊಂಡು ಫುಲ್ ಗಾಬರಿ ಯಾಗಿದ್ದಾರೆ. ಕ್ರೇನ್ ಇಂದ ಬಂದ ಮುಸುಕುಧಾರಿಗಳು ಇಡೀ ನರಕದ ಮನೆಯನ್ನು ಪೀಸ್, ಪೀಸ್ ಮಾಡಿದ್ದಾರೆ.

publive-image

ಬಿಗ್ ಬಾಸ್ ಮನೆಯ ಈ ಟ್ವಿಸ್ಟ್‌ಗೆ ಸ್ಪರ್ಧಿಗಳು ಏನೋ ಪನಿಶ್‌ ಮೆಂಟ್ ಕಾದಿದೆ ಗುರು ಎಂದು ಅಂದುಕೊಂಡಿದ್ದಾರೆ. ಆಗ ಬಿಗ್ ಬಾಸ್ 11ನೇ ಸೀಸನ್‌ನಲ್ಲಿ ನೀವೆಲ್ಲರೂ 2 ವಾರ ಜೀವಿಸಿದ್ದೀರಿ. ಇಲ್ಲಿನ ಪ್ರತಿ ಕ್ಷಣವನ್ನು ಅನುಭವಿಸಿದ್ದೀರಿ ಎಂದು ಹೊಸ ಅಧ್ಯಾಯಕ್ಕೆ ಹೊಸ ಕಿಚ್ಚು ಹಚ್ಚಿದ್ದಾರೆ.

ನರಕದ ಮನೆಯನ್ನೇ ಒಡೆದು ಹಾಕಿರುವುದರಿಂದ ಬಿಗ್ ಬಾಸ್ ಮನೆಯ ಆಟದ ಶೈಲಿ ಈಗ ಬದಲಾಗಿದೆ. ಇದಕ್ಕೆ 2 ಕಾರಣಗಳಿದೆ. ಒಂದು 2ನೇ ವಾರದ ಟಾಸ್ಕ್‌ನಲ್ಲಿ ಸ್ಪರ್ಧಿಗಳು ಬ್ಲೈಂಡ್ ವಿಂಡೋ ಹಾಕಿದ್ರು ಬಿಗ್ ಬಾಸ್ ರೂಲ್ಸ್ ಬ್ರೇಕ್ ಮಾಡಿ ಒಳಗೆ ಹೋಗಿ ಬಂದಿದ್ದಾರೆ.

publive-image

ಮತ್ತೊಂದು ನರಕದಲ್ಲಿ ಮಹಿಳಾ ಸ್ಪರ್ಧಿಗಳ ಖಾಸಗಿತನಕ್ಕೆ ಧಕ್ಕೆ ಆಗುತ್ತಿದೆ ಎಂದು ರಾಜ್ಯ ಮಹಿಳಾ ಆಯೋಗಕ್ಕೆ ದೂರು ಬಂದಿತ್ತು. ಈ ಬಗ್ಗೆ ರಾಮನಗರ ಎಸ್​ಪಿಗೆ ಮಹಿಳಾ ಪತ್ರ ಬರೆದಿದ್ದು ಬಿಗ್​​ಬಾಸ್​​ ಮನೆಯನ್ನ ಪರಿಶೀಲನೆ‌ ಮಾಡಿ ವರದಿ ಕೊಡುವಂತೆ ಸೂಚನೆ ನೀಡಿತ್ತು. ಇದಕ್ಕಾಗಿ 5 ದಿನದ ಡೆಡ್‌ಲೈನ್ ಕೊಡಲಾಗಿತ್ತು. ಮಹಿಳಾ‌‌ ಆಯೋಗ ಎಂಟ್ರಿಯಾದ ಬೆನ್ನಲ್ಲೇ ಬಿಗ್ ಬಾಸ್ ಮನೆಯಲ್ಲಿದ್ದ ನರಕವನ್ನು ಡೆಮಾಲಿಷ್ ಮಾಡಲಾಗಿದೆ. ಇಂದು ರಾತ್ರಿ ಪ್ರಸಾರ ಆಗಲಿರುವ ಎಪಿಸೋಡ್​​ನಲ್ಲಿ ನರಕದ ಬೇಲಿ ತೆರವಾಗಿದ್ದು ವೀಕೆಂಡ್‌ನಲ್ಲಿ ಎಲ್ಲರೂ ಬಿಗ್ ಶಾಕ್ ಕಾದಿದೆ.

ಇದನ್ನೂ ಓದಿ: Bigg Boss: ಕ್ರೇನ್ ಮೂಲಕ ನುಗ್ಗಿದ ಮುಸುಕುಧಾರಿಗಳು.. ಬಿಗ್​​ಬಾಸ್​ ಮನೆಯ ವಸ್ತುಗಳೆಲ್ಲ ಪೀಸ್​ ಪೀಸ್.. 

ನ್ಯೂಸ್ ಫಸ್ಟ್ ವರದಿ ನಿಜವಾಯ್ತು!
ಬಿಗ್ ಬಾಸ್‌ ಮನೆಯಲ್ಲಿ ಮಹಿಳಾ ಸ್ಪರ್ಧಿಗಳ ಖಾಸಗಿತನಕ್ಕೆ ಧಕ್ಕೆಯಾಗಿದ್ದು ಮಹಿಳಾ ಆಯೋಗ ಗಂಭೀರವಾಗಿ ಪರಿಗಣಿಸಿತ್ತು. ಹೀಗಾಗಿ ಬಿಗ್ ಬಾಸ ಸೀಸನ್ 11ರ ಆಟದ ಶೈಲಿ ಬದಲಾವಣೆ ಬಗ್ಗೆ ನ್ಯೂಸ್ ಫಸ್ಟ್ ಚಾನೆಲ್ ಸುದ್ದಿ ಬ್ರೇಕ್ ಮಾಡಿತ್ತು. ಕಳೆದ ಅಕ್ಟೋಬರ್ 7ರಂದು ಬೆಳಗ್ಗೆ 9 ಗಂಟೆಗೆ ಸುದ್ದಿ ಬಿತ್ತರಿಸಿದ್ದ ನ್ಯೂಸ್ ಫಸ್ಟ್ ವರದಿ ಇಂದು ನಿಜವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment