ಬಿಗ್ ಬಾಸ್ ಮನೆಯ ಸ್ವರ್ಗ, ನರಕದ ಆಟದಿಂದ ವಿವಾದ
ನರಕದಲ್ಲಿದ್ದ ಮಹಿಳಾ ಸ್ಪರ್ಧಿಗಳ ಅವಸ್ಥೆ ಬಗ್ಗೆ ಕೇಳಿ ಬಂದ ದೂರು
ನರಕದ ಮಹಿಳಾ ಸ್ಪರ್ಧಿಗಳಿಗೆ ಅನ್ಯಾಯ ಮಾಡಿದ್ದು ನಿಜನಾ?
ಬಿಗ್ ಬಾಸ್ ಸೀಸನ್ 11ರ ಮನೆ ಈಗ ಸಂಪೂರ್ಣ ಬದಲಾಗಿದೆ. ಸ್ವರ್ಗ, ನರಕದ ಬೇಲಿಯನ್ನು ಇದ್ದಕ್ಕಿದ್ದಂತೆ ತೆಗೆದು ಹಾಕಲಾಗಿದ್ದು ಎಲ್ಲಾ ಸ್ಪರ್ಧಿಗಳು ಒಂದೇ ಮನೆಯಲ್ಲಿ ಲಾಕ್ ಆಗಿದ್ದಾರೆ. ಬಿಗ್ ಬಾಸ್ ಸೀಸನ್ 11 ಶುರುವಾದಾಗ ಸ್ವರ್ಗ ಹಾಗೂ ನರಕ ಅನ್ನೋ ಟಾಸ್ಕ್ ನೀಡಲಾಗಿತ್ತು. ಆದರೆ 2 ವಾರ ಮುಗಿಯುತ್ತಿದ್ದಂತೆ ನರಕವನ್ನ ಡೆಮಾಲಿಷ್ ಮಾಡಿದ್ದು, ಬಿಗ್ ಬಾಸ್ ಮನೆಯಲ್ಲಿದ್ದವರಿಗೆ ಆಶ್ಚರ್ಯವನ್ನು ಉಂಟುಮಾಡಿತ್ತು.
ಬಿಗ್ ಬಾಸ್ ಮನೆಯ ಸ್ವರ್ಗ, ನರಕದ ಆಟ ಒಂದು ವಿವಾದಕ್ಕೂ ಕಾರಣವಾಗಿತ್ತು. ನರಕದಲ್ಲಿದ್ದ ಮಹಿಳಾ ಸ್ಪರ್ಧಿಗಳ ಅವಸ್ಥೆ ಬಗ್ಗೆ ರಾಜ್ಯ ಮಹಿಳಾ ಆಯೋಗ ಪ್ರಶ್ನಿಸಿತ್ತು. ಈ ಬಗ್ಗೆ ದೂರು ಕೂಡ ದಾಖಲಾಗಿದ್ದು, ಬಿಗ್ ಬಾಸ್ ತಂಡಕ್ಕೆ ನೋಟಿಸ್ ಕೂಡ ನೀಡಲಾಗಿತ್ತು. ಇದೀಗ ನರಕ ಮನೆಯನ್ನ ತೆಗೆದು ಹಾಕಲಾಗಿದೆ.
ಬಿಗ್ ಬಾಸ್‌ನಲ್ಲಿ ಮೊದಲ ಬಾರಿಗೆ ಶೋನ ವೇದಿಕೆಯಲ್ಲೇ ಮಹಿಳಾ ಆಯೋಗದ ದೂರಿಗೆ ಉತ್ತರ ನೀಡಲಾಗಿದೆ. ಸೂಪರ್ ಸಂಡೇ ಶೋನಲ್ಲಿ ಕಿಚ್ಚ ಸುದೀಪ್ ಅವರು ನರಕದಲ್ಲಿದ್ದಂತಹ ಲೇಡಿಸ್‌ಗೆ ಒಂದು ಪ್ರಶ್ನೆ ಕೇಳಿದ್ದಾರೆ.
ಮಹಿಳಾ ಆಯೋಗದ ನೋಟಿಸ್ ಅನ್ನು ಎಲ್ಲರ ಗಮನಕ್ಕೆ ತಂದ ಕಿಚ್ಚ ಸುದೀಪ್ ಅವರು ಅವರು ಹೇಳ್ತಾ ಇರೋದು ನೀವು ನರಕದ ಮಹಿಳಾ ಸ್ಪರ್ಧಿಗಳಿಗೆ ಅನ್ಯಾಯ ಮಾಡಿದ್ದೀರಿ. ಅವರನ್ನೆಲ್ಲಾ ದಯವಿಟ್ಟು ವಾಪಸ್ ಕಳಿಸಿ ಅಂತ ಹೇಳಿದ್ದಾರೆ. ಅದಕ್ಕೆ ನೀವು ಏನು ಹೇಳುತ್ತೀರಿ ಎಂದು ಕೇಳಿದ್ದಾರೆ.
ಸುದೀಪ್ ಅವರ ಮಾತಿಗೆ ಉತ್ತರಿಸಿದ ಮಹಿಳಾ ಸ್ಪರ್ಧಿಗಳೇ ಉತ್ತರಿಸಿದ್ದಾರೆ. ನರಕದಲ್ಲಿ ನಮಗೆ ಯಾವುದೇ ಅನಾನುಕೂಲಗಳು ಇರಲಿಲ್ಲ. ದೊಡ್ಡ ಪ್ರಾಬ್ಲಂ ಏನು ಇರಲಿಲ್ಲ ಎಂದು ಮಾನಸ, ಅನುಷಾ, ಹಾಗೂ ಮೋಕ್ಷಿತಾ ಅವರು ಹೇಳಿದ್ದಾರೆ. ಚೈತ್ರಾ ಅವರು ನರಕದಲ್ಲಿದ್ದಾಗ ದೊಡ್ಡ ಸಮಸ್ಯೆಗಳು ಏನು ಕಾಣಿಸಲಿಲ್ಲ ನಮಗೆ. ಸ್ಕ್ರೀನ್‌ನಲ್ಲಿ ಹಾಗೆ ಬಿಂಬಿತವಾಗಿರಬಹುದು.
ಬ್ಲೈಂಡ್ಸ್ ಡೌನ್ ಆದಾಗ ನಮಗೆ ಸ್ವರ್ಗದ ವಾಶ್ ರೂಮ್ ಬಳಸಲು ಅನುಕೂಲತೆ ಇತ್ತು. ಮನೆಗಳಲ್ಲಿ ಹೇಗಿತ್ತೋ ಹಾಗೆ ಅನುಕೂಲಗಳು ಇತ್ತು. ನೀರಿನ ಸಮಸ್ಯೆ ಬರಲಿಲ್ಲ. ಹೆಣ್ಣು ಮಕ್ಕಳಿಗೆ ಬೇಕಾಗುವುದೇ ನೀರು ಹಾಗೂ ಶೌಚಾಲಯ. ಶೌಚಾಲಯ ನೀಟ್ ಆಗಿ ಇತ್ತು. ಆ ವಿಚಾರದಲ್ಲಿ ನಮಗೆ ಸಮಸ್ಯೆ ಬಂದೇ ಇಲ್ಲ.
ಇದನ್ನೂ ಓದಿ: ಬಿಗ್ಬಾಸ್ಗೆ ಬಿಗ್ ಶಾಕ್; ದೊಡ್ಮನೆಗೆ ಮಹಿಳಾ ಆಯೋಗ ಎಂಟ್ರಿ? ಬದಲಾಗುತ್ತಾ ಆಟದ ಶೈಲಿ?
ಬಿಗ್ ಬಾಸ್ ಟೀಮ್ ಟಾಸ್ಕ್ ಮುಗಿಸಿಕೊಂಡು ಬಂದಾಗ ಬ್ಲೈಂಡ್ಸ್ ಡೌನ್ ಆಗಿದೆ. ವಾಶ್ ರೂಮ್ ಬೇಕು ಅಂತ ಕೇಳಿಕೊಂಡಾಗ 5 ನಿಮಿಷದಲ್ಲಿ ಸ್ವರ್ಗದಲ್ಲಿ ಬಳಸಲು ಅನುಮತಿ ನೀಡುವ ಪತ್ರ ಬಂದಿದೆ. ಅಷ್ಟು ಸೂಕ್ಷ್ಮವಾಗಿ ಬಿಗ್ ಬಾಸ್ ತಂಡ ನಮ್ಮನ್ನು ನೋಡಿ ಕೊಂಡಿದೆ. ನಮಗೆ ಯಾವುದೇ ಅನಾನುಕೂಲ ಆಗಿಲ್ಲ ಎಂದಿದ್ದಾರೆ. ಮಹಿಳಾ ಸ್ಪರ್ಧಿಗಳ ಉತ್ತರಕ್ಕೆ ಕಿಚ್ಚ ಸುದೀಪ್ ಅವರು ಇದನ್ನು ಗಮನಿಸಿ ಮಹಿಳಾ ಆಯೋಗಕ್ಕೆ ಮಹಿಳೆಯರ ಬಗ್ಗೆ ಕಾಳಜಿ ಇದೆ. ಅದಕ್ಕೆ ಧನ್ಯವಾದಗಳು ಎಂದಿದ್ದಾರೆ.
ದೂರಿನಲ್ಲಿ ಏನಿದೆ?
ಬಿಗ್ಬಾಸ್ 11 ಕಾರ್ಯಕ್ರಮದಲ್ಲಿ ಮಹಿಳೆಯರು ಮತ್ತು ಪುರುಷ ಸ್ಪರ್ಧಿಗಳು ಭಾಗವಹಿಸುತ್ತಿದ್ದಾರೆ. ಸ್ವರ್ಗ ಮತ್ತು ನರಕವೆಂಬ ಎರಡು ವಿಚಾರದ ಮೇಲೆ ಸ್ಪರ್ಧಿಗಳನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ಪ್ರಸಾರವಾಗುತ್ತಿರುವ ದೃಶ್ಯಗಳಲ್ಲಿ ಪುರುಷ ಮತ್ತು ಮಹಿಳೆಯರನ್ನು ಒಂದು ಜೈಲಿನ ರೂಪದಲ್ಲಿರುವ ಬಂದಿಖಾನೆಯಂತಹ ಕೊಠಡಿಯಲ್ಲಿ ಇಡಲಾಗಿದೆ. ಆ ಕೊಠಡಿಗೆ ನೂರಾರು ಕ್ಯಾಮರಾಗಳನ್ನು ಅಳವಡಿಸಲಾಗಿದೆ.
ವಾಹಿನಿಯಲ್ಲಿ ಪ್ರಸಾರವಾಗಿರುವ ಮಾಹಿತಿ ಪ್ರಕಾರ.. ನರಕದಲ್ಲಿರೋರಿಗೆ ಕೇವಲ ಗಂಜಿಯನ್ನು ಮಾತ್ರ ನೀಡಲಾಗುತ್ತಿದೆ. ಸಂವಿಧಾನ ಪ್ರಕಾರ ನಾಗರಿಕರಿಗೆ ಪೌಷ್ಟಿಕ ಆಹಾರವನ್ನು ಕೊಡದಿರುವುದು ಅಪರಾಧವಾಗುತ್ತದೆ. ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ, ಮಲಗುವ ವ್ಯವಸ್ಥೆ ನೀಡಿಲ್ಲ. ಶೌಚಾಲಯ ಉಪಯೋಗಿಸಲು ಬಲವಂತಕ್ಕೆ ಒಳಪಡಿಸುವುದು ಮಹಿಳೆಯರ ಖಾಸಗಿತನಕ್ಕೆ ಧಕ್ಕೆಯಾಗುತ್ತದೆ. ಬಿಗ್ ಬಾಸ್ 11ರ ಕಾರ್ಯಕ್ರಮದಲ್ಲಿ ಸ್ಪರ್ಧಿಗಳೊಂದಿಗೆ ಕಾನೂನು ಬದ್ಧವಾಗಿ ಒಪ್ಪಂದ ಮಾಡಿಕೊಂಡಿದ್ದು, ಇಂತಹ ನಿರ್ಬಂಧಗಳನ್ನು ಹೇರುವುದು ಸಂವಿಧಾನದ ವಿರುದ್ಧ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ