/newsfirstlive-kannada/media/post_attachments/wp-content/uploads/2024/10/BIG-BOSS-3.jpg)
ಬಿಗ್​​ಬಾಸ್​ ಮನೆಯಲ್ಲಿ ಸ್ಪರ್ಧಿಗಳ ನಡುವಿನ ಕಿತ್ತಾಟ ಜೋರಾಗಿದೆ. ಮೂಲಗಳ ಪ್ರಕಾರ, ಜಗದೀಶ್ ಹಾಗೂ ರಂಜಿತ್ ಹೊಡೆದಾಡಿಕೊಂಡಿದ್ದಾರೆ. ಇದರಿಂದ ಕೋಪಿಸಿಕೊಂಡಿರುವ ಬಿಗ್​​ಬಾಸ್​, ಇಬ್ಬರನ್ನೂ ಮನೆಯಿಂದ ಆಚೆ ಹಾಕಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ನಿನ್ನೆಯ ಎಪಿಸೋಡ್​​ನಲ್ಲಿ ಬಿಗ್​ಬಾಸ್​ ಮನೆಯಲ್ಲಿ ಏನಾಗಿದೆ ಎಂದು ಅಭಿಮಾನಿಗಳು ಕುತೂಹಲದಿಂದ ವೀಕ್ಷಣೆ ಮಾಡಿದರು.
ಆದರೆ ಇಬ್ಬರನ್ನು ಮನೆಯಿಂದ ಆಚೆ ಹಾಕಿರುವ ಬಗ್ಗೆ ಬಿಗ್​ಬಾಸ್ ಎಲ್ಲಿಯೂ ಸುಳಿವು ಬಿಟ್ಟುಕೊಟ್ಟಿಲ್ಲ. ಹೀಗಾಗಿ ಇವತ್ತಿನ ಎಪಿಸೋಡ್​ ತುಂಬಾನೇ ಎಕ್ಸೈಟಿಂಗ್ ಆಗಿದೆ. ನಿಜವಾಗಿಯೂ ರಂಜಿತ್ ಹಾಗೂ ಜಗದೀಶ್​ ಮನೆಯಿಂದ ಆಚೆ ಹೋಗಿದ್ದಾರೋ, ಇಲ್ಲವೋ ಎಂಬ ಕುತೂಹಲಗಳಿಗೆ ತೆರೆ ಬೀಳಲಿದೆ.
ಇದನ್ನೂ ಓದಿ:BBK11: ಜಗದೀಶ್, ರಂಜಿತ್ ಕಿಕ್ ಔಟ್.. ಬಿಗ್ ಬಾಸ್ ಮನೆಯಲ್ಲಿ ಹೊಡೆದಾಟಕ್ಕೆ ಕಾರಣವೇನು?
ಆದರೆ ಜಗದೀಶ್ ಹಾಗೂ ರಂಜಿತ್ ಗಲಾಟೆಗೆ ಸಂಬಂಧಿಸಿದ ವಿಡಿಯೋ ಒಂದು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಜಗದೀಶ್ ಹಾಗೂ ಉಗ್ರಂ ಮಂಜು ಜಗಳ ಆಡುತ್ತಿರುತ್ತಾರೆ. ಈ ವೇಳೆ ಹಿಂದಿನಿಂದ ಬಂದ ರಂಜಿತ್, ಜಗದೀಶ್​ ಅವರನ್ನು ತಳ್ಳಿದಂತೆ ಕಾಣ್ತಿದೆ. ಆಗ ಜಗದೀಶ್​ ರಂಜಿತ್​ ಅವರನ್ನು ಗುರಾಯಿಸಿದ್ದಾರೆ. ನಂತರ ಬಿಗ್​ಬಾಸ್​ ಮನೆಯಲ್ಲಿ ಹೊಡೆದಾಟ ನಡೆದಿದೆ ಎನ್ನಲಾಗಿದೆ. ಈ ವಿಡಿಯೋ ನೋಡಿದ ಬಿಗ್​ಬಾಸ್ ವೀಕ್ಷಕರು, ಅನಗತ್ಯವಾಗಿ ರಂಜಿತ್ ಅವರು ಜಗದೀಶ್​​ನನ್ನು ತಳ್ಳಿ ಗಲಾಟೆ ಮಾಡಿದ್ದಾರೆ ಎಂದು ಕಮೆಂಟ್ಸ್ ಮಾಡ್ತಿದ್ದಾರೆ.
https://twitter.com/sampath56798/status/1846611685580460537
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us