/newsfirstlive-kannada/media/post_attachments/wp-content/uploads/2024/10/Jagadish-3.jpg)
Bigg Boss Kannada Season 11: ಬಿಗ್​ ಬಾಸ್ ಕನ್ನಡ​​ ಸೀಸನ್​ 11 ಕಾರ್ಯಕ್ರಮ 2ನೇ ವಾರದತ್ತ ಮುನ್ನುಗುತ್ತಿದೆ. ಮನೆಯ ಕ್ಯಾಪ್ಟನ್​ ಕೂಡ ಬದಲಾಗಿದ್ದಾರೆ. ನಟಿ ಹಂಸಾ (Hamsa) ಮನೆಯ ನಾಯಕತ್ವ ವಹಿಸಿದ್ದು, ಇದೀಗ ಲಾಯರ್​ ಜಗದೀಶ್ (Jagadish)​ ಅವರ ಕಾಲೆಳೆಯಲು ಶುರು ಮಾಡಿದ್ದಾರೆ. ಅಷ್ಟೇ ಏಕೆ ‘ಐ ಲವ್​ ಯೂ ಕ್ಯಾಪ್ಟನ್’​ ಎಂದು ಹೇಳಿದ್ದಾರೆ.
ಲಾಯರ್​ ಜಗದೀಶ್​ ಕ್ಯಾಪ್ಟನ್​ ಹಂಸಾ ಅವರಿಗೆ ಕೋಪಿಸಿಕೊಳ್ಳುವಂತೆ ಮಾಡಿದ್ದಾರೆ. ಈ ವೇಳೆ ತಮಾಷೆಯ ಜೊತೆಗೆ ಕಾಲೆಳೆಯುತ್ತಿದ್ದಾರೆ. ಸಿಕ್ಕ ಸಿಕ್ಕ ವಸ್ತುಗಳನ್ನು ತಂದು ಕೊಡುವಂತೆ ಆಗ್ರಹಿಸಿದ್ದಾರೆ. ಅಷ್ಟು ಮಾತ್ರವಲ್ಲ ನನಗೆ ಚಿಕನ್​ ಮಂಚೂರಿ ಬೇಕು ಎಂದು ಜಗದೀಶ್​ರವರು ಹಂಸಾ ಬಳಿ ಕೇಳಿದ್ದಾರೆ. ತಂದಿಲ್ಲ ಅಂದ್ರೆ ನಿನ್ನನ್ನೇ ಮಾಡ್ತೀನಿ ನೋಡ್ತಿರು ಎಂದಿದ್ದಾರೆ.
ಇದನ್ನೂ ಓದಿ: KicchaBOSS: ಬಂದ ನೋಡು ಪೈಲ್ವಾನ್.. ಬಿಗ್ ಸರ್‌ಪ್ರೈಸ್ ಕೊಟ್ಟ ಸ್ಯಾಂಡಲ್‌ವುಡ್ ಬಾದ್ ಷಾ; ಏನಿದರ ವಿಶೇಷ?
ಇದಲ್ಲದೆ ಹಂಸಾ ಅವರಿಗೆ ಉಪೇಂದ್ರ ನಟನೆಯ ಗೋಕರ್ಣ ಸಿನಿಮಾದ ‘ಮಾರಿ ಕಣ್ಣು ಹೋರಿ ಮ್ಯಾಲೆ’ ಹಾಡು ಹಾಡಿದ್ದಾರೆ. ನನ್ನ ಕಣ್ಣು ಅವಳ ಮೇಲೆ ಅವಳ ಕಣ್ಣು ನನ್ನ ಮೇಲೆ ಎಂದಿದ್ದಾರೆ. ಇದಲ್ಲದೆ, ಹಂಸಾ ಅವರನ್ನು ಹಂಸ್​ ಎಂದು ಕರೆದಿದ್ದಾರೆ.
ಕ್ಯಾಪ್ಟನ್ ‘ಐ ಲವ್ ಯು’!
ಬಿಗ್ ಬಾಸ್ ಕನ್ನಡ ಸೀಸನ್ 11 | ಸೋಮ-ಶುಕ್ರ ರಾತ್ರಿ 9:30 #BiggBossKannada11#BBK11#HosaAdhyaya#ColorsKannada#BannaHosadaagideBandhaBigiyaagide#ಕಲರ್ಫುಲ್ಕತೆ#colorfulstory#Kicchasudeepapic.twitter.com/Ixvz2z2qzO
— Colors Kannada (@ColorsKannada)
ಕ್ಯಾಪ್ಟನ್ ‘ಐ ಲವ್ ಯು’!
ಬಿಗ್ ಬಾಸ್ ಕನ್ನಡ ಸೀಸನ್ 11 | ಸೋಮ-ಶುಕ್ರ ರಾತ್ರಿ 9:30 #BiggBossKannada11#BBK11#HosaAdhyaya#ColorsKannada#BannaHosadaagideBandhaBigiyaagide#ಕಲರ್ಫುಲ್ಕತೆ#colorfulstory#Kicchasudeepapic.twitter.com/Ixvz2z2qzO— Colors Kannada (@ColorsKannada) October 8, 2024
">October 8, 2024
ಹಂಸಾಗೆ ನಾನು ನಿಮ್ಮ ಫ್ಯಾನ್​​ ಎಂದು ಜಗದೀಶ್ ಹೇಳಿದ್ದಾರೆ. ಮುಂಗಾರು ಮಳೆ ಸಿನಿಮಾದಂತೆ ಹಂಸಾರವರು ಜಗದೀಶ್​ ಎದೆ ಮೇಲೆ ಕಾಲಿಟ್ಟು ನಡೆದಿದ್ದಾರೆ​​.
ಒಟ್ಟಿನಲ್ಲಿ ಇಂದಿನ ಎಪಿಸೋಡ್​ನಲ್ಲಿ ಜಗದೀಶ್​ ಮತ್ತು ಹಂಸಾ ನಡುವಿನ ಮಾತು, ಜಗಳ, ತಮಾಷೆ ಪ್ರೇಕ್ಷಕರ ಕಣ್ಣು ಕಟ್ಟುವಂತೆ ಮಾಡಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ