/newsfirstlive-kannada/media/post_attachments/wp-content/uploads/2023/09/Chaitra-Kundapura-3.jpg)
ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 11, ನಾಲ್ಕನೇ ವಾರಕ್ಕೆ ಕಾಲಿಡುತ್ತಿದೆ. ಇದೇ ಹೊತ್ತಲ್ಲಿ ಚೈತ್ರಾ ಕುಂದಾಪುರ ಬಿಗ್​ಬಾಸ್​ ಮನೆಯ ಜೈಲು ಪಾಲಾಗಿದ್ದಾರೆ. ಬಿಗ್​ಬಾಸ್​ ಮನೆಗೆ ಕಾಲಿಟ್ಟಿದ್ದ ಚೈತ್ರಾ ಕುಂದಾಪುರ ನೇರವಾಗಿ ನರಕಕ್ಕೆ ಎಂಟ್ರಿ ಕೊಟ್ಟಿದ್ದರು.
ಬಿಗ್ ಬಾಸ್ ಸೀಸನ್ 11ರಲ್ಲಿ ಚೈತ್ರಾ ಕುಂದಾಪುರ ಅವರು ಮೊದಲ ಬಾರಿಗೆ ಜೈಲಿಗೆ ಹೋಗಿದ್ದಾರೆ. ಮೂರನೇ ವಾರದಲ್ಲಿ ಮನೆಯಲ್ಲಿದ್ದ 14 ಸ್ಪರ್ಧಿಗಳಿಗೆ ಬಿಗ್​ಬಾಸ್​ ಟಾಸ್ಕ್​ವೊಂದನ್ನು ನೀಡಿದ್ದರು. ಬಿಗ್​ಬಾಸ್​ ಮನೆಯಲ್ಲಿ ಅಪ್ರಾಮಾ ಣಿಕ ಯಾರು ಹಾಗೂ ಕುತಂತ್ರಿ ಯಾರು ಅಂತ ಹೇಳಿ ಎಂದಿದ್ದರು.
ಬಿಗ್​ಬಾಸ್​ ಮನೆಯಲ್ಲಿರೋ ಸ್ಪರ್ಧಿಗಳು ಅತಿ ಹೆಚ್ಚಾಗಿ ಹಣೆ ಪಟ್ಟಿಯನ್ನು ಚೈತ್ರಾ ಕುಂದಾಪುರ ಅವರಿಗೆ ಕೊಟ್ಟಿದ್ದಾರೆ. ಹೀಗಾಗಿ ಪ್ರಕ್ರಿಯೆಯ ಅನುಸಾರ ಚೈತ್ರಾ ಕುಂದಾಪುರ ಬಿಗ್​ಬಾಸ್​ ಜೈಲಿಗೆ ಹೋಗಿದ್ದಾರೆ. ಬಿಗ್​ಬಾಸ್​ ಅವರ ಮುಂದಿನ ಆದೇಶದವರೆಗೂ ಚೈತ್ರಾ ಜೈಲಿನಲ್ಲೇ ಇರಬೇಕಾಗುತ್ತದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us