Advertisment

BBK11: ‘ಒಬ್ಬ ಅಪ್ಪನಿಗೆ ಹುಟ್ಟಿದ್ರೆ’ ಎಂಬ ಬೆಂಕಿ; ಹೆತ್ತ ತಾಯಿಗೆ ಮಾಡಿದ ಅವಮಾನ ಎಂದು ಚೈತ್ರಾಗೆ ಕಿಚ್ಚ ಕ್ಲಾಸ್​​!

author-image
admin
Updated On
BBK11: ‘ಒಬ್ಬ ಅಪ್ಪನಿಗೆ ಹುಟ್ಟಿದ್ರೆ’ ಎಂಬ ಬೆಂಕಿ; ಹೆತ್ತ ತಾಯಿಗೆ ಮಾಡಿದ ಅವಮಾನ ಎಂದು ಚೈತ್ರಾಗೆ ಕಿಚ್ಚ ಕ್ಲಾಸ್​​!
Advertisment
  • ಬಿಗ್ ಬಾಸ್ ಇತಿಹಾಸದಲ್ಲೇ ಮೊದಲು ಸುದೀಪ್‌ಗೆ ಇಷ್ಟು ಕೋಪ!
  • ಪಂಚಾಯ್ತಿಯಲ್ಲಿ ಮೂವರಿಗೆ ಸಖತ್ ಪಂಚ್ ಕೊಟ್ಟ ಕಿಚ್ಚ ಸುದೀಪ್
  • ಚೈತ್ರಾ ಅವರೇ ಹೆಣ್ಣು ಮಕ್ಕಳ ಬಗ್ಗೆ ಮಾತಾಡಬೇಡಿ ಅಂತೀರಾ ಆದ್ರೆ..

ಬಿಗ್ ಬಾಸ್ ಸೀಸನ್ 11 ಈ ವಾರದ ಕತೆ ಕಿಚ್ಚನ ಜೊತೆ ಕಾವೇರಿದ ವೇದಿಕೆಯಾಗಿದೆ. ಕಿಚ್ಚ ಸುದೀಪ್ ಅವರು ಮನೆಯ ಎಲ್ಲಾ ಸದಸ್ಯರ ಮೇಲೆ ಕೆರಳಿ ಕೆಂಡವಾಗಿದ್ದಾರೆ. ಒಂದೊಂದು ಮಾತಿನಲ್ಲೂ ಬೆಂಕಿ, ಬಿರುಗಾಳಿಯನ್ನೇ ಸೃಷ್ಟಿಸಿದ್ದಾರೆ. ಬಿಗ್ ಬಾಸ್ ಇತಿಹಾಸದಲ್ಲೇ ಕಿಚ್ಚ ಸುದೀಪ್ ಅವರು ಇಷ್ಟು ರೌದ್ರಾವತಾರ ತಾಳಿರೋದು ಇದೇ ಮೊದಲಾಗಿದೆ.

Advertisment

ಕಳೆದ ವಾರ ಬಿಗ್ ಬಾಸ್ ಮನೆಯಲ್ಲಿ ಯಾರೂ ಊಹಿಸಲಾಗದ ಘಟನೆಗಳು ನಡೆದಿದೆ. ಬಿಗ್ ಬಾಸ್ ಮನೆಯ ರೂಲ್ಸ್‌ಗಳನ್ನು ಗಾಳಿಗೆ ತೂರಿರುವ ಸ್ಪರ್ಧಿಗಳು ಕೈ, ಕೈ ಮಿಲಾಯಿಸಿದ್ದಾರೆ. ಹೊಡೆದಾಡಿಕೊಂಡ ರಂಜಿತ್ ಹಾಗೂ ಜಗದೀಶ್ ಇಬ್ಬರೂ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಿದ್ದಾರೆ.

publive-image

ಇದನ್ನೂ ಓದಿ: BBK11: ಬಿಗ್​ಬಾಸ್ ಮನೆಯಲ್ಲಿ ಮಾನಸ ಯಾಕೆ ಇರಬೇಕು? ಜಗದೀಶ್ ಗಲಾಟೆಯ ವಿಷ್ಯಕ್ಕೆ ಕಿಚ್ಚನ ತರಾಟೆ! 

ಬಿಗ್ ಬಾಸ್ ಮನೆಯಲ್ಲಾದ ಹಲವು ತಪ್ಪು ಹಾಗೂ ಜಗಳಗಳಿಗೆ ಕಿಚ್ಚ ಸುದೀಪ್ ಅವರು ಇಂದು ಪಂಚಾಯ್ತಿ ಮಾಡಿದ್ದಾರೆ. ಕಿಚ್ಚನ ಕಟಕಟೆಯಲ್ಲಿ ನಿಂತ ಮನೆಯ ಎಲ್ಲಾ ಸದಸ್ಯರು ಸುದೀಪ್ ಅವರ ಖಡಕ್ ಮಾತಿಗೆ ಬೆಚ್ಚಿ ಬಿದ್ದಿದ್ದಾರೆ. ಪ್ರತಿಯೊಬ್ಬರ ತಪ್ಪುಗಳನ್ನು ಉಲ್ಲೇಖ ಮಾಡಿರುವ ಕಿಚ್ಚನ ಮಾತು ಬಿಗ್ ಬಾಸ್ ಮನೆಯ ಎಲ್ಲಾ ಸದಸ್ಯರಿಗೂ ಬೆವರು ಇಳಿಯುವಂತೆ ಮಾಡಿದೆ.

Advertisment

ಚೈತ್ರಾಗೆ ಕಿಚ್ಚನ ಪಂಚ್‌!
ಪಂಚಾಯ್ತಿ ಕಟ್ಟೆಯಲ್ಲಿ ಸರಿ, ತಪ್ಪುಗಳ ಬಗ್ಗೆ ಚರ್ಚೆ ಮಾಡಿದ ಕಿಚ್ಚ ಸುದೀಪ್ ಅವರು ಪ್ರಮುಖವಾಗಿ ಮೂವರಿಗೆ ಸಖತ್ ಪಂಚ್ ಕೊಟ್ಟಿದ್ದಾರೆ. ಮೊದಲಿಗೆ ತಪ್ಪು ಮಾಡಿದವರು ಹೊರಗೆ ಹೋದ್ರು. ನೀವುಗಳಲ್ಲಿ ಎಷ್ಟು ಜನ ಸರಿ ಇದ್ದೀರಾ. ಒಬ್ಬ ಚಪ್ಪಲ್ ಎತ್ತಿ ಬಿಸಾಡುತ್ತಾ ಇದ್ದಾರೆ ಅಂದ್ರೆ ಅದು ಓಕೆ ನಾ ಎಂದು ಉಗ್ರಂ ಮಂಜುಗೆ ಮಾತಲ್ಲೇ ಚಾಟಿ ಬೀಸಿದ್ದಾರೆ.

publive-image

ಎರಡನೇಯದಾಗಿ ಪ್ರಾಮಾಣಿಕತೆ ಅನ್ನೋ ವರ್ಲ್ಡ್‌ ಈ ಮನೆಗೆ ಸೂಟ್ ಆಗಲ್ಲ. ಮಾತುಗಳಿಂದಲೇ ಒಬ್ಬ ವ್ಯಕ್ತಿ ಈ ಮನೆಯಿಂದ ಹೊರಗೆ ಹೋಗಿದ್ದಾರೆ ಅಂದ್ರೆ ನೀವು ಆಡಿರೋ ತಪ್ಪು ಮಾತುಗಳನ್ನ ಇಟ್ಕೊಂಡು ನಿಮ್ಮನ್ನ ಇನ್ನೂ ಯಾಕೆ ಒಳಗೆ ಇಟ್ಟುಕೊಂಡಿರಬೇಕು ಎಂದು ಮಾನಸ ಅವರಿಗೆ ಟಾಂಗ್ ಕೊಟ್ಟಿದ್ದಾರೆ.

ಮೂರನೇಯದಾಗಿ ಚೈತ್ರಾ ಕುಂದಾಪುರ ವಿಚಾರಕ್ಕೆ ಬಂದ ಕಿಚ್ಚ ಸುದೀಪ್ ಅವರು ರೋಷಾವೇಶದಲ್ಲಿ ಮಾತನಾಡಿದ್ದಾರೆ. ಚೈತ್ರಾ ಅವರೇ ಹೆಣ್ಣು ಮಕ್ಕಳ ಬಗ್ಗೆ ಮಾತನಾಡಬೇಡಿ ಅಂತೀರಾ. ಒಬ್ಬ ಅಪ್ಪನಿಗೆ ಹುಟ್ಟಿದ್ಯಾ ಅಂದ್ರೆ ಯಾವ ನನ್ಮಗನು ಅಪ್ಪನಿಗೆ ಬೈಯುತ್ತಿಲ್ಲ ಮೇಡಂ ತಾಯಿಗೆ ಬೈಯುತ್ತಾ ಇರೋದು ಎಂದು ಸುದೀಪ್ ಆಕ್ರೋಶದ ಮಾತನಾಡಿದ್ದಾರೆ. ಇದಿಷ್ಟು ಕಿಚ್ಚ ಸುದೀಪ್ ಅವರ ಕೋಪದ ಟ್ರೈಲರ್ ಅಷ್ಟೇ ಇವತ್ತಿನ ಎಪಿಸೋಡ್‌ನಲ್ಲಿ ಅಸಲಿ ಪಿಕ್ಚರ್ ಬಾಕಿ ಇದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment