BBK11: ಬಿಗ್ ಬಾಸ್‌ಗೆ ಸವಾಲು.. ಲಾಯರ್ ಜಗದೀಶ್‌ಗೆ ಕಿಚ್ಚ ಸುದೀಪ್ ಕೊಟ್ರು ಸಖತ್‌ ಮಾಂಜಾ!

author-image
admin
Updated On
BBK11: ಬಿಗ್ ಬಾಸ್‌ಗೆ ಸವಾಲು.. ಲಾಯರ್ ಜಗದೀಶ್‌ಗೆ ಕಿಚ್ಚ ಸುದೀಪ್ ಕೊಟ್ರು ಸಖತ್‌ ಮಾಂಜಾ!
Advertisment
  • ಬಿಗ್ ಬಾಸ್ ನಿಮ್ಮನ್ನ ಎಕ್ಸ್‌ಪೋಸ್ ಮಾಡ್ತೀನಿ ಎಂದಿದ್ದ ಜಗದೀಶ್‌!
  • ನನಗೆ ಬಿಗ್ ಬಾಸ್ ಬೇಕು ಅಂತ ಇಲ್ಲಿಗೆ ಬಂದವರ ಮುಖವಾಡ ಬಯಲು
  • ಲಾಯರ್ ಜಗದೀಶ್‌ಗೆ ಖಡಕ್ ಆದ ಉತ್ತರ ಕೊಟ್ಟ ಕಿಚ್ಚ ಸುದೀಪ್

ಕಿರುತೆರೆಯ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್‌ ಸೀಸನ್ 11 ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ಸೀಸನ್ 11ರ ಮೊದಲನೇ ವಾರ ಸ್ವರ್ಗ, ನರಕದ ಕಿಚ್ಚಿನಲ್ಲಿ ಬಿಗ್ ಬಾಸ್ ಸ್ಪರ್ಧಿಗಳು ಕಿತ್ತಾಡಿಕೊಂಡಿದ್ದಾರೆ. ಒಬ್ಬರಿಗೊಬ್ಬರು ಆವಾಜ್ ಹಾಕುತ್ತಾ ನಾವು ಯಾರು ಕಮ್ಮಿ ಇಲ್ಲ ಅನ್ನೋದನ್ನ ಸಾಬೀತು ಪಡಿಸಲು ಹೊರಟಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಒಂದು ವಾರ ಕಳೆದಿರುವ ಸೀಸನ್ 11ರ ಸ್ಪರ್ಧಿಗಳಿಗೆ ಈಗ ಕಿಚ್ಚನ ಪಂಚಾಯ್ತಿ ಶುರುವಾಗಿದೆ. ಮೊದಲ ವಾರದ ಕಿಚ್ಚನ ಪಂಚಾಯ್ತಿಯಲ್ಲಿ ಯಾವುದು ಸರಿ- ಯಾವುದು ತಪ್ಪು ಅನ್ನೋದರ ಬಗ್ಗೆ ಬಿಸಿ, ಬಿಸಿ ಚರ್ಚೆಯಾಗಿದೆ. ಪ್ರತಿ ಸೀಸನ್‌ಗಿಂತ ಈ ಸೀಸನ್ ಡಿಫರೆಂಟ್ ಆಗಿರೋದ್ರಿಂದ ಕಿಚ್ಚ ಸುದೀಪ್ ಅವರು ಡಿಫರೆಂಟ್ ಆಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ.

publive-image

ಬಿಗ್ ಬಾಸ್ ಸೀಸನ್ 11 ಹೊಸ ಅಧ್ಯಾಯ. ಇಲ್ಲಿಗೆ ಬಂದ ಹೊಸ ಸ್ಪರ್ಧಿಗಳಿಗೆ ಹೊಸದಾದ ಅನುಭವವೇ ಆಗಿದೆ. ನಾನು ನಾನಾಗಿ ಇರ್ತೀನಿ ಅಂತ ಬಿಗ್ ಬಾಸ್ ಮನೆಗೆ ಬಂದವರು ಮೊದಲ ದಿನವೇ ಏನ್ ಮಾಡಬೇಕು ಅಂತ ಗೊತ್ತಾಗದೇ ಕಳೆದು ಹೋಗಿದ್ದಾರೆ. ಕಿಚ್ಚ ಸುದೀಪ್ ಅವರು ನಾನು ಪ್ರತಿ ಸೀಸನ್‌ನಲ್ಲೂ ಇದೇ ರೀತಿಯ ಸ್ಪರ್ಧಿಗಳನ್ನ ಬಿಗ್ ಬಾಸ್ ಮನೆಯಲ್ಲಿ ನೋಡಿದ್ದೀನಿ ಎಂದಿದ್ದಾರೆ.

ಇದನ್ನೂ ಓದಿ: BBK11: ‘ಸುದೀಪ್​ ಸರ್​ ಇವರನ್ನೇ ಒದ್ದು ಹೊರಗಡೆ ಹಾಕ್ತಾರೆ‘; ಬಿಗ್​ಬಾಸ್​ ಮನೆಯಲ್ಲಿ ಏನಾಗ್ತಿದೆ? 

ಈ ಸೀಸನ್‌ನ ಮೊದಲ ವಾರದಲ್ಲಿ ಲಾಯರ್ ಜಗದೀಶ್ ಅವರ ರೋಷಾವೇಶ ಎಲ್ಲರ ಗಮನ ಸೆಳೆದಿದೆ. ನನಗೆ ಬಿಗ್ ಬಾಸ್ ಬೇಕು ಅಂತ ಇಲ್ಲಿಗೆ ಬಂದು ಬಿಗ್ ಬಾಸ್ ಅನ್ನೇ ಎಕ್ಸ್‌ಪೋಸ್ ಮಾಡ್ತೀನಿ ಅಂತ ಒಬ್ರು ನಿರ್ಧಾರ ತಗೊಂಡು ನಿಂತಿದ್ದಾರೆ. ಬಿಗ್ ಬಾಸ್ ನಾನು ನಿಮ್ಮನ್ನ ಎಕ್ಸ್‌ಪೋಸ್ ಮಾಡ್ತೀನಿ ಎಂದು ಜಗದೀಶ್ ಅವರು ಬಿಗ್ ಬಾಸ್ ಕ್ಯಾಮೆರಾ ಮುಂದೆ ಖಡಕ್ ಡೈಲಾಗ್ ಹೊಡೆದಿದ್ದಾರೆ.


">October 5, 2024

ಲಾಯರ್ ಜಗದೀಶ್ ಅವರು ನಮ್ಮನ್ನ ಎದುರಾಕಿಕೊಂಡು ಕರ್ನಾಟಕದಲ್ಲಿ ಬಿಗ್ ಬಾಸ್ ಓಡಿಸ್ತೀರಾ ಅನ್ನೋ ಸವಾಲು ಕಿಚ್ಚ ಸುದೀಪ್ ಅವರ ಕೋಪಕ್ಕೆ ಕಾರಣವಾಗಿದೆ. ಜಗದೀಶ್ ಅವರ ಪ್ರತಿಯೊಂದು ಮಾತಿಗೂ ವಾರದ ಕಥೆ ಕಿಚ್ಚನ ಜೊತೆ ಎಪಿಸೋಡ್‌ನಲ್ಲಿ ಕಿಚ್ಚ ಸುದೀಪ್ ಅವರಿಂದ ನೇರವಾದ ಉತ್ತರವೇ ಸಿಕ್ಕಿದೆ. ತಪ್ಪು ಯಾರು ಮಾಡಿದ್ರು? ಸರಿ ಯಾರ್ ಯಾರ್ ಮಾಡಬೇಕಿತ್ತು ಅನ್ನೋ ಪಂಚಾಯ್ತಿಯಲ್ಲಿ ಮನೆಯ 17 ಸ್ಪರ್ಧಿಗಳಿಗೂ ಕಿಚ್ಚ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment