BBK11: ರಜತ್​, ಭವ್ಯಾಗೆ ಕಾದಿದೆ ಮಾರಿಹಬ್ಬ.. ಕಿಚ್ಚ ಸುದೀಪ್​ ಕೈಗೆ ಸಿಕ್ಕಿ ಬಿದ್ರು! ಇಬ್ಬರು ಮಾಡಿದ ತಪ್ಪೇನು?

author-image
Veena Gangani
Updated On
BBK11: ರಜತ್​, ಭವ್ಯಾಗೆ ಕಾದಿದೆ ಮಾರಿಹಬ್ಬ.. ಕಿಚ್ಚ ಸುದೀಪ್​ ಕೈಗೆ ಸಿಕ್ಕಿ ಬಿದ್ರು! ಇಬ್ಬರು ಮಾಡಿದ ತಪ್ಪೇನು?
Advertisment
  • ಬಿಗ್​ಬಾಸ್ ವೇದಿಕೆಗೆ ಬರುತ್ತಿದ್ದಂತೆ ಕಿಚ್ಚನ ಕ್ಲಾಸ್ ಯಾರಿಗೆ
  • ಬಿಗ್​ಬಾಸ್​ ಗ್ರ್ಯಾಂಡ್​ ಫಿನಾಲೆಗೆ ಮೂರು ವಾರಗಳು ಬಾಕಿ
  • ಈ ವಾರ ದೊಡ್ಮನೆಯಲ್ಲಿ ತಪ್ಪು ಮಾಡಿದ ಸ್ಪರ್ಧಿ ಯಾರು?​

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 11, 104ನೇ ದಿನಕ್ಕೆ ಕಾಲಿಟ್ಟಿದೆ. ಇದೇ ಹೊತ್ತಲ್ಲಿ ಬಿಗ್​ಬಾಸ್ ವೇದಿಕೆಗೆ ಕಿಚ್ಚ ಸುದೀಪ ಖಡಕ್​ ಆಗಿ ಎಂಟ್ರಿ ಕೊಟ್ಟಿದ್ದಾರೆ. ಆದ್ರೆ ವೇದಿಕೆಗೆ ಬರುತ್ತಿದ್ದಂತೆ ಈ ವಾರ ವೇಗದ ಮಿತಿಮೀರಿ, ಆಟದ ಗತಿ ತಪ್ಪಿಸಿದೋರು ಯಾರು ಎಂದು ಕ್ಲಾಸ್​ ತೆಗೆದುಕೊಳ್ಳಲು ಸಜ್ಜಾಗಿದ್ದಾರೆ.

publive-image

ಇದನ್ನೂ ಓದಿ: BBK11 ಐವರು ನಾಮಿನೇಟ್​.. ಕಿಚ್ಚನ ಪಂಚಾಯ್ತಿಯಲ್ಲಿ ಗೇಟ್​ಪಾಸ್​ ಯಾರಿಗೆ..?

ಹೌದು, ಈ ವಾರ ಸ್ಪರ್ಧಿಗಳಿಗೆ ತುಂಬಾ ಮುಖ್ಯವಾಗಿತ್ತು. ಅದರಲ್ಲೂ ಟಿಕೆಟ್ ಟು ಫಿನಾಲೆಗೆ ಎಂಟ್ರಿ ಕೊಡುವ ಸಲುವಾಗಿ ಸ್ಪರ್ಧಿಗಳು ನಾ ಮುಂದು, ತಾ ಮುಂದು ಅಂತ ಹೋರಾಟ ಮಾಡಿರೋ ವಾರವಾಗಿತ್ತು. ಆದರೆ ಕೇವಲ 2 ಸೆಕೆಂಡ್​ಗಳಲ್ಲಿ ಟಿಕೆಟ್ ಟು ಫಿನಾಲೆ ಪಾಸ್​ ಅನ್ನು ಹನುಮಂತ ಪಡೆದುಕೊಂಡಿದ್ದಾರೆ.

ಅಲ್ಲದೇ ಈ ವಾರ ಸ್ಪರ್ಧಿಗಳು ಎಲ್ಲಿ ಎಡವಿದರೂ, ಎಲ್ಲಿ ಧ್ವನಿ ಎತ್ತಬೇಕಾಗಿತ್ತು, ಉಸ್ತುವಾರಿ ಮಾಡಿರೋ ತಪ್ಪೇನು, ಭವ್ಯಾ ಗೌಡ ಹನುಮಂತ ಮೇಲೆ ಕೈ ಮಾಡಿದ್ದೇಕೆ ಎಂಬೆಲ್ಲಾ ವಿಚಾರಗಳ ಬಗ್ಗೆ ಇಂದಿನ ಪಂಚಾಯ್ತಿಯಲ್ಲಿ ಕಿಚ್ಚ ಸುದೀಪ್ ಕ್ಲಾಸ್​ ತೆಗೆದುಕೊಳ್ಳಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment