Advertisment

BBK11: ಈ ವಾರದ ಕತೆಯಲ್ಲಿ ಯಾರಿಗೆ ಕಿಚ್ಚನ ಕ್ಲಾಸ್‌.. ಪಂಚಾಯ್ತಿಯಲ್ಲಿ ಪ್ರಾಮಾಣಿಕತೆ ಇಲ್ಲದವರಿಗೆ ಪ್ರಾಯಶ್ಚಿತ!

author-image
admin
Updated On
BBK11: ಈ ವಾರದ ಕತೆಯಲ್ಲಿ ಯಾರಿಗೆ ಕಿಚ್ಚನ ಕ್ಲಾಸ್‌.. ಪಂಚಾಯ್ತಿಯಲ್ಲಿ ಪ್ರಾಮಾಣಿಕತೆ ಇಲ್ಲದವರಿಗೆ ಪ್ರಾಯಶ್ಚಿತ!
Advertisment
  • ಈ ವಾರ ಬಿಗ್ ಬಾಸ್‌ ರೂಲ್ಸ್ ಬ್ರೇಕ್ ಮಾಡಿರೋದ್ರಿಂದ ಶಿಕ್ಷೆ ಆಗುತ್ತಾ?
  • ಕಿಚ್ಚನ ಪಂಚಾಯ್ತಿಯಲ್ಲಿ ತಪ್ಪು ಮಾಡಿದವರನ್ನ ಎಚ್ಚರಿಸಿದ ಸುದೀಪ್‌!
  • ಬಿಗ್ ಬಾಸ್ ಮನೆಯಲ್ಲಿ ನಿಯಮಗಳಿಗೆ ನಿಯತ್ತಾಗಿ ಇದ್ದವರು ಯಾರು?

ಬಿಗ್ ಬಾಸ್ ಸೀಸನ್ 11 ಯಶಸ್ವಿಯಾಗಿ ಎರಡು ವಾರಗಳನ್ನ ಪೂರೈಸುತ್ತಿದೆ. ಇವತ್ತು ವಾರದ ಕತೆ ಕಿಚ್ಚನ ಜೊತೆ ಬಹಳಷ್ಟು ಕುತೂಹಲವನ್ನ ಕೆರಳಿಸಿದೆ. ಆಟ ಬದಲಾಗಿದೆ. ಮನೆಯಲ್ಲಿರುವವರ ಮನಸು ಬದಲಾಗಿದೆ. ಮನೆಯ ಸದಸ್ಯರು ಈ ವಾರ ಬಿಗ್ ಬಾಸ್‌ ರೂಲ್ಸ್ ಬ್ರೇಕ್ ಮಾಡಿರೋದ್ರಿಂದ ಕಿಚ್ಚ ಸುದೀಪ್ ಅವರು ಯಾವ ರೀತಿ ಕ್ಲಾಸ್ ತೆಗೆದುಕೊಳ್ಳುತ್ತಾರೆ ಅನ್ನೋದು ಬಹಳ ಮುಖ್ಯವಾಗಿದೆ.

Advertisment

ಬಿಗ್ ಬಾಸ್ ತಂಡ ಈ ವಾರದ ಕಿಚ್ಚನ ಪಂಚಾಯ್ತಿಯಲ್ಲಿ ಪ್ರಾಮಾಣಿಕತೆ ಇಲ್ಲದವರಿಗೆ ಪ್ರಾಯಶ್ಚಿತ ಅನ್ನೋ ಸುಳಿವು ನೀಡಿದೆ. ಅಂದ್ರೆ ಈ ವಾರ ಬಿಗ್ ಬಾಸ್ ಮನೆಯಲ್ಲಿ ನಿಯಮಗಳಿಗೆ ನಿಯತ್ತಾಗಿ ಇದ್ದವರು ಯಾರು. ನೀತಿ ಮೀರಿ ನಿಯಮಗಳನ್ನು ಮುರಿದವರು ಯಾರು. ಪ್ರಾಮಾಣಿಕತೆ ಇಲ್ಲದವರಿಗೆ ಪ್ರಾಯಶ್ಚಿತ ಇದ್ದೇ ಇರುತ್ತೆ ಅನ್ನೋ ಸಂದೇಶವನ್ನು ಕಿಚ್ಚ ಸುದೀಪ್ ನೀಡಿದ್ದಾರೆ.

publive-image

ಬಿಗ್ ಬಾಸ್ ಮನೆಯ 2ನೇ ವಾರದಲ್ಲಿ ಎಲ್ಲಾ ಸದಸ್ಯರು ನಾಮಿನೇಟ್ ಆಗಿದ್ದರು. ಹೀಗೆ ಆಗಲು ಕಾರಣ ಸ್ಪರ್ಧಿಗಳೇ ಮಾಡಿಕೊಂಡ ಒಂದು ಎಡವಟ್ಟು. ಬಿಗ್ ಬಾಸ್ ಮನೆಯಲ್ಲಿ ಬ್ಲೈಂಡ್ ವಿಂಡೋ ಮುಚ್ಚಿರುವಾಗ ಯಾರು ಆ ಕಡೆ ಹೋಗುವಂತಿಲ್ಲ. ಆದರೆ ಬಿಗ್ ಬಾಸ್ ಮನೆಯ ಸದಸ್ಯರು ಬ್ಲೈಂಡ್ ವಿಂಡೋ ದಾಟಿ ಹೋಗಿರೋದು ನಿಯಮಗಳನ್ನು ಮುರಿದಂತೆ ಆಗಿದೆ.

publive-image

ಬಿಗ್ ಬಾಸ್ ಮನೆಯ ರೂಲ್ಸ್ ಬ್ರೇಕ್ ಮಾಡಿರೋದ್ರಿಂದ ಅನುಷಾ ಅವರನ್ನ ನೇರವಾಗಿ ಗೌತಮಿ ಅವರು ನಾಮಿನೇಟ್ ಮಾಡಿದ್ದಾರೆ. ಅನುಷಾ - ಗೋಲ್ಡ್ ಸುರೇಶ್ ಮಧ್ಯೆ ದೊಡ್ಡ ವಾಗ್ವಾದ ನಡೆದಿದೆ. ಇದರ ಜೊತೆಗೆ ಟಾಸ್ಕ್‌ನಲ್ಲಿ ಯಾರು ಸರಿ, ಯಾರು ತಪ್ಪು ಅನ್ನೋ ಪಂಚಾಯ್ತಿ ಕೂಡ ಇಂದೇ ನಡೆಯಲಿದೆ.

Advertisment

publive-image

ಕಳೆದ ವಾರ ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆಗಿ ಹಂಸಾ ಅವರು ಆಯ್ಕೆಯಾಗಿದ್ದರು. ಹಂಸಾ ಕ್ಯಾಪ್ಟೆನ್ಸಿಯಲ್ಲಿ ಕೆಲವೊಂದು ತಪ್ಪುಗಳು ನಡೆದಿದೆ. ಬಿಗ್ ಬಾಸ್ 11ರ ಮೊದಲ ಕ್ಯಾಪ್ಟನ್ ಹಂಸಾ ಕ್ಯಾಪ್ಟೆನ್ಸಿ ಹೇಗಿತ್ತು ಅನ್ನೋದು ವಾರದ ಕತೆಯಲ್ಲಿ ಚರ್ಚೆಯಾಗಲಿದೆ. ಇದರ ಜೊತೆಗೆ ಕ್ಯಾಪ್ಟನ್ ಹಂಸಾ ಅವರಿಗೆ ಜಗದೀಶ್ ಅವರು ಸಿಕ್ಕಾಪಟ್ಟೆ ರೇಗಿಸಿ ಮನೆಯವರ ಮನಸು ಕದ್ದಿದ್ದಾರೆ. ಜಗದೀಶ್ ಹಾಗೂ ಹಂಸ ಅವರ ಕಾಮಿಡಿ ಈ ವಾರದ ಎಂಟ್ರೈಟನ್‌ಮೆಂಟ್ ಟಾಪಿಕ್ ಆಗಿತ್ತು ಅಂದ್ರೂ ಸುಳ್ಳಲ್ಲ.

ಇದನ್ನೂ ಓದಿ: Bigg Boss Kannada Season 11: ಮನೆಯ ನಾಯಕತ್ವ ಬದಲಾಯ್ತು! ಅಸಲಿ ಆಟ ಈಗ ಶುರುವಾಗುತ್ತಾ? 

ಇಷ್ಟೆಲ್ಲಾದರ ಮಧ್ಯೆ ಈ ವಾರದ ಕಿಚ್ಚನ ಪಂಚಾಯ್ತಿಯಲ್ಲಿ ತಪ್ಪು ಮಾಡಿದವರಿಗೆ ಕಿಚ್ಚನ ಕ್ಲಾಸ್ ಹಾಗೂ ಸಖತ್ ಖುಷಿಯಾಗಿ ಆಟ ಆಡಿದವರಿಗೆ ಚಪ್ಪಾಳೆಯೂ ಸಿಕ್ಕಿದೆ. ಮುಂದಿನ ವಾರಕ್ಕೆ ಬಿಗ್ ಬಾಸ್ ಮನೆಯಲ್ಲಿ ಸ್ವರ್ಗ, ನರಕವೇ ಇಲ್ಲ. ಹೀಗಾಗಿ ಈ ವೀಕೆಂಡ್‌ನಲ್ಲಿ ಕಿಚ್ಚ ಸುದೀಪ್ ಅವರು ಸಲಹೆ ಮತ್ತು ಬುದ್ಧಿವಾದ ಬಿಗ್‌ ಬಾಸ್ ಮನೆಗೆ ಹೊಸ ತಿರುವು ನೀಡಲಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment