/newsfirstlive-kannada/media/post_attachments/wp-content/uploads/2025/01/BBK11GrandFinale-kichcha-Sudeep.jpg)
ಬಿಗ್ ಬಾಸ್ ಸೀಸನ್ 11 ಗ್ರ್ಯಾಂಡ್ ಫಿನಾಲೆಗೆ ಕಿಚ್ಚ ಸುದೀಪ್ ಖಡಕ್ ಎಂಟ್ರಿ ಕೊಟ್ಟಿದ್ದಾರೆ. ಈಗಾಗಲೇ ಸುದೀಪ್ ಅವರು ಸೀಸನ್ 11 ನನ್ನ ಕೊನೆಯ ಬಿಗ್ ಬಾಸ್ ಶೋ ಅಂತ ಘೋಷಣೆ ಮಾಡಿದ್ದಾರೆ. ಹೀಗಾಗಿ ಕಟ್ಟ ಕಡೆಯ ಬಿಗ್ ಬಾಸ್ ಶೋ ನಡೆಸಿಕೊಡಲು ಕಿಚ್ಚ ಸುದೀಪ್ ಅವರು ಸ್ವಲ್ಪ ಎಮೋಷನಲ್ ಆಗಿದ್ದಾರೆ.
ಕಲರ್ಸ್ ಕನ್ನಡ ವಾಹಿನಿ ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಫಿನಾಲೆಗೆ ಆಗಮಿಸಿದ ವಿಡಿಯೋ ಬಿಡುಗಡೆ ಮಾಡಿದೆ. ಎಂದಿನಂತೆ ತಮ್ಮ ರಗಡ್ ಲುಕ್‌ನಲ್ಲಿ ಕಿಚ್ಚ ಸುದೀಪ್ ಎಂಟ್ರಿ ಕೊಟ್ಟಿದ್ದು, ಬಿಗ್ ಬಾಸ್ ಫಿನಾಲೆಗೆ ಹೊಸ ಹುರುಪು ತುಂಬಿದ್ದಾರೆ. ಆದರೆ ಇದೇ ತನ್ನ ಕೊನೆಯ ಸೀಸನ್ ಅನ್ನೋ ನಿರ್ಧಾರ ಮಾಡಿರೋ ಸುದೀಪ್ ಅವರಿಗೂ ನೋವು ಕಾಡುತ್ತಿದೆ.
ಇದನ್ನೂ ಓದಿ: BBK11GrandFinale: ಹನುಮಂತ, ಮೋಕ್ಷಿತಾ ಮಧ್ಯೆ ಜಿದ್ದಾಜಿದ್ದಿ.. ಅವತ್ತು ಅವಮಾನ ಇವತ್ತು ಸನ್ಮಾನನಾ?
ಬಿಗ್ ಬಾಸ್ ಫಿನಾಲೆಗೆ ಬರೋ ಮುನ್ನ ಕಿಚ್ಚ ಸುದೀಪ್ ಅವರು ದೇವರ ಆಶೀರ್ವಾದ ಪಡೆದಿದ್ದಾರೆ. ಫಿನಾಲೆ ವೇದಿಕೆಗೆ ಎಂಟ್ರಿಯಾಗೋ ಮುನ್ನ ವಿಘ್ನ ವಿನಾಯಕನಿಗೆ ಮಂಡಿಯೂರಿ ನಮಸ್ಕರಿಸಿದ್ದಾರೆ. ದೇವರ ಆಶೀರ್ವಾದದೊಂದಿಗೆ ಕಿಚ್ಚ ಸುದೀಪ್ ಅವರು ಬಿಗ್ ಬಾಸ್ ಫಿನಾಲೆಗೆ ಎಂಟ್ರಿ ಕೊಟ್ಟಿದ್ದು, ಯಾವುದೇ ಅಡಚಣೆ ಆಗದೇ ಶೋ ಪರಿಪೂರ್ಣವಾಗಲಿ ಎಂದು ಬಯಸಿದ್ದಾರೆ.
View this post on Instagram
ಕಿಚ್ಚ ಸುದೀಪ್ ಅವರಿಗೆ ಬಿಗ್ ಬಾಸ್ ಸೀಸನ್ 11 ಅತ್ಯಂತ ಪ್ರಮುಖವಾಗಿದೆ. ಆರಂಭದಲ್ಲೇ ಬಿಗ್ ಬಾಸ್ ಸೀಸನ್ 11 ತಮ್ಮ ಕೊನೆಯ ಸೀಸನ್ ಅಂತ ಹೇಳಿದ್ದು, ಇವತ್ತೇ ತಮ್ಮ ಜೀವನದ ಬಿಗ್ ಬಾಸ್ ಚಾಪ್ಟರ್‌ಗೆ ತೆರೆ ಎಳೆಯುತ್ತಿದ್ದಾರೆ. ಸುದೀಪ್ ಅವರ ತಾಯಿಗೂ ಬಿಗ್ ಬಾಸ್ ಶೋ ಅಂದ್ರೆ ಬಹಳ ಇಷ್ಟವಿತ್ತು. ಹೀಗಾಗಿ ಇಷ್ಟು ದಿನ ಅಮ್ಮನ ಆಶೀರ್ವಾದದೊಂದಿಗೆ ಬಿಗ್ ಬಾಸ್ ನಡೆಸಿಕೊಡುತ್ತಿದ್ದ ಕಿಚ್ಚ ಸುದೀಪ್ ಅವರು ಕೊನೆಯ ಸೀಸನ್‌ನ ಕೊನೆಯ ಎಪಿಸೋಡ್‌ಗೆ ಎಂಟ್ರಿ ಕೊಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ