BBK11: ಅಣ್ಣ-ತಂಗಿ ಆಟಗಳೆಲ್ಲಾ ಇಲ್ಲಿ ನಡೆಯಲ್ಲ.. ಗೋಲ್ಡ್ ಸುರೇಶ್ ಬೆವರಿಳಿಸಿದ ಕಿಚ್ಚ ಸುದೀಪ್‌!

author-image
admin
Updated On
BBK11: ಅಣ್ಣ-ತಂಗಿ ಆಟಗಳೆಲ್ಲಾ ಇಲ್ಲಿ ನಡೆಯಲ್ಲ.. ಗೋಲ್ಡ್ ಸುರೇಶ್ ಬೆವರಿಳಿಸಿದ ಕಿಚ್ಚ ಸುದೀಪ್‌!
Advertisment
  • ರೂಲ್ಸ್ ಬ್ರೇಕ್ ಮಾಡಲು ಮೊದಲು ಹಾಕೊಟ್ಟಿದ್ದೆ ಗೋಲ್ಡ್‌ ಸುರೇಶ್!
  • ಅಯ್ಯೋ ತಂಗಿ ಬಾಮ್ಮ ಅಂತ ಕುತ್ತಿಗೆಯಲ್ಲಿರೋ ಚಿನ್ನ ಬಿಚ್ಚಿ ಕೊಡ್ತಾರಾ..
  • ಕಿಚ್ಚನ ಖಡಕ್ ಮಾತುಗಳನ್ನ ಕೇಳಿ ಗೋಲ್ಡ್ ಸುರೇಶ್ ಫುಲ್ ಶಾಕ್‌

ಬಿಗ್ ಬಾಸ್ ಸೀಸನ್ 11 ದಿನಕಳೆದಂತೆ ಹೊಸ, ಹೊಸ ಟ್ವಿಸ್ಟ್‌ಗಳನ್ನ ಪಡೆದುಕೊಳ್ಳುತ್ತಿದೆ. 2ನೇ ವಾರದಲ್ಲಿ ಹಲವು ಸ್ಪರ್ಧಿಗಳ ಅಸಲಿ ಮುಖ ಅನಾವರಣವಾಗಿದ್ದು, ವಾರದ ಕತೆಯಲ್ಲಿ ಕಿಚ್ಚ ಸುದೀಪ್ ಅವರು ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ.

ಬಿಗ್ ಬಾಸ್ 2ನೇ ವಾರದಲ್ಲಿ ಮನೆಯ ಸದಸ್ಯರೆಲ್ಲಾ ಬ್ಲೈಡ್ ವಿಂಡೋ ಒಳಗೆ ಹೋಗಲೇ ಬಾರದು ಅನ್ನೋ ನಿಯಮವನ್ನು ಮುರಿದಿದ್ದರು. ತಾವೇ ಮಾಡಿಕೊಂಡ ತಪ್ಪಿನಿಂದಾಗಿ ಎಲ್ಲರೂ ನಾಮಿನೇಟ್ ಆಗಿದ್ದಾರೆ. ಆದರೆ ನಿಜವಾಗಲೂ ತಪ್ಪು ಮಾಡಿದ್ದು ಯಾರು? ಸರಿ ಯಾರದ್ದು ಅನ್ನೋ ಪಂಚಾಯ್ತಿ ಕಿಚ್ಚನ ಕಟಕಟೆಯಲ್ಲಿ ಇಂದು ನಡೆದಿದೆ.

publive-image

ವಾರದ ಕತೆಯಲ್ಲಿ ನಗು ನಗುತ್ತಲೇ ಚಾಟಿ ಬೀಸಿದ ಕಿಚ್ಚ ಸುದೀಪ್ ಅವರು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಮೊದಲಿಗೆ ಗೌತಮಿ ಅವರು ಡೈರೆಕ್ಟ್ ನಾಮಿನೇಷನ್‌ಗೆ ಅನುಷಾ ಅವರನ್ನ ಆಯ್ಕೆ ಮಾಡಿರುತ್ತಾರೆ. ಇದಕ್ಕೆ ಕಾರಣವೇನು? ಗೌತಮಿ ಅವರ ಲೆಕ್ಕಾಚಾರ ಏನಾಯ್ತು ಅನ್ನೋದು ಚರ್ಚೆಯಾಗಿದೆ.

ಇದನ್ನೂ ಓದಿ: BBK11: ಈ ವಾರದ ಕತೆಯಲ್ಲಿ ಯಾರಿಗೆ ಕಿಚ್ಚನ ಕ್ಲಾಸ್‌.. ಪಂಚಾಯ್ತಿಯಲ್ಲಿ ಪ್ರಾಮಾಣಿಕತೆ ಇಲ್ಲದವರಿಗೆ ಪ್ರಾಯಶ್ಚಿತ! 

ಪ್ರಮುಖವಾಗಿ ಬಿಗ್ ಬಾಸ್ ಮನೆಯಲ್ಲಿ ರೂಲ್ಸ್ ಬ್ರೇಕ್ ಆಗಿದ್ದು ಹೇಗೆ ಅನ್ನೋದೇ ಈ ವಾರದ ಪಂಚಾಯ್ತಿಯಲ್ಲಿ ರೋಚಕವಾದ ಚರ್ಚೆಗೆ ಕಾರಣವಾಗಿದೆ. ಎಲ್ಲರ ಗೊಂದಲಕ್ಕೆ ಸ್ಪಷ್ಟನೆ ನೀಡಿರುವ ಕಿಚ್ಚ ಸುದೀಪ್ ಅವರು ಮಾನಸ ಅವರನ್ನ ಹೊರಗೆ ಹೋಗಿ ನೋಡಿಕೊಂಡು ಬಾ ಎಂದು ಮೊದಲು ಹಾಕೊಟ್ಟಿದ್ದೆ ಗೋಲ್ಡ್‌ ಸೂರಿ ಅವರು ಎಂದಿದ್ದಾರೆ.

publive-image

ಸುದೀಪ್ ಅವರ ಮಾತಿಗೆ ಶಾಕ್ ಆದ ಗೋಲ್ಡ್ ಸುರೇಶ್ ಅವರು ಮಾನಸ ಅವರು ಫಸ್ಟ್ ಹೋಗಿ ಬಂದ್ರು ಕಾಣಿಸಲಿಲ್ಲ ಅಂದ್ರು. ಹೀಗಾಗಿ ಹೇಳಿದೆ ಎಂದು ಒಪ್ಪಿಕೊಂಡಿದ್ದಾರೆ. ಇದಾದ ಮೇಲೆ ಅನುಷಾ ಹಾಗೂ ಸುರೇಶ್ ಅವರ ಜಗಳದ ಬಗ್ಗೆ ಚರ್ಚೆಯಾಗಿದೆ. ಅನುಷಾ ಅವರು ನಾನು ಸುರೇಶ್ ಅವರನ್ನ ಅಣ್ಣ ಅಂತ ಬಾಯಿ ತುಂಬಾ ಕರೆಯುತ್ತೇನೆ ಎಂದಿದ್ದಾರೆ.

publive-image

ಬಿಗ್‌ ಬಾಸ್‌ ಮನೆಯ ಸ್ಪರ್ಧಿಗಳ ಮಧ್ಯೆ ಅಣ್ಣ-ತಂಗಿ ಅನ್ನೋ ಮಾತಿಗೆ ಬೆಲೆಯಿಲ್ಲ. ಇದನ್ನು ಮನವರಿಕೆ ಮಾಡಿಕೊಟ್ಟಿರುವ ಕಿಚ್ಚ ಸುದೀಪ್ ಅವರು ಅಣ್ಣ ಅಂತ ಬಾಯಿ ತುಂಬಾ ಕರೆಯೋದು ಬಿಡಿ.ಅವರು ಸೋಲೋದು ನನಗೆ ಇಷ್ಟವಿಲ್ಲ ನಾನು ಮನೆಗೆ ಹೋಗ್ತೀನಿ ಅಂತ ಹೇಳಿ ಬನ್ನಿ ನೋಡೋಣ ಎಂದು ಸವಾಲು ಹಾಕಿದ್ದಾರೆ.

ಇನ್ನು, ಗೋಲ್ಡ್ ಸುರೇಶ್ ಅವರಿಗೂ ಅಯ್ಯೋ ತಂಗಿ ಬಾಮ್ಮ ನೀನೇ ಗೆಲ್ಲು ಅಂತ ಕುತ್ತಿಗೆಯಲ್ಲಿರೋ ಚಿನ್ನ ಬಿಚ್ಚಿ ಕೊಡ್ತಾರಾ ಎಂದು ಸುದೀಪ್‌ ಕೇಳಿದ್ದಾರೆ. ಗೊತ್ತಿದ್ದು ಮಾಡೋದಕ್ಕೆ ಮಿಸ್ಟೇಕ್ ಅನ್ನಲ್ಲ ಸಾರ್ ಚಾಲೆಂಜಿಂಗ್ ಅಂತಾರೆ. ಬಿಗ್ ಬಾಸ್ ಮನೆಯಲ್ಲಿ ನಡೆಯೋ ಆಟಗಳೇ ಬೇರೆ ಅನ್ನೋದು ಎಲ್ಲಾ ಸ್ಪರ್ಧಿಗಳಿಗೆ ಈಗ ಅರ್ಥವಾಗುತ್ತಿದೆ. ಕಿಚ್ಚ ಸುದೀಪ್ ಅವರ ಖಡಕ್ ಮಾತುಗಳಿಂದ ಗೋಲ್ಡ್ ಸುರೇಶ್ ಅವರು ಈ ವಾರ ಫುಲ್ ಶಾಕ್ ಆಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment