/newsfirstlive-kannada/media/post_attachments/wp-content/uploads/2024/10/BBK11-sudeep-1.jpg)
ಕನ್ನಡದ ಬಿಗ್ ಬಾಸ್ ಸೀಸನ್ 11 ರಿಯಾಲಿಟಿ ಶೋಗೆ ರೋಚಕ ಟ್ವಿಸ್ಟ್ ಸಿಕ್ಕಿದೆ. ಬಿಗ್ ಬಾಸ್ ಮನೆಯಲ್ಲಿ ಹೊಡೆದಾಡಿಕೊಂಡು ರೂಲ್ಸ್ ಬ್ರೇಕ್ ಮಾಡಿದ ತಪ್ಪಿಗೆ ಇಬ್ಬರನ್ನು ಎಲಿಮಿನೇಟ್ ಮಾಡಲಾಗಿದೆ. ಜಗದೀಶ್ ಹಾಗೂ ರಂಜಿತ್ ಬಿಗ್ ಬಾಸ್ ಸೀಸನ್ 11ರಿಂದ ಔಟ್ ಆಗಿದ್ದಾರೆ.
ಇದನ್ನೂ ಓದಿ: ಮತ್ತೆ ಜೈಲು ಸೇರಿದ ಚೈತ್ರಾ ಕುಂದಾಪುರ.. ಬಿಗ್ ಬಾಸ್ ರಿಯಾಲಿಟಿ ಶೋಗೆ ಹೊಸ ಟ್ವಿಸ್ಟ್; ಮುಂದೇನು?
ಬಿಗ್ ಬಾಸ್ ಮನೆಯಲ್ಲಿ ಜಗದೀಶ್, ರಂಜಿತ್ ಅವರ ಜಗಳವನ್ನ ವೀಕ್ಷಕರು ಈಗಾಗಲೇ ನೋಡಿದ್ದಾರೆ. ಯಾವುದು ಸರಿ, ಯಾವುದು ತಪ್ಪು ಅನ್ನೋದರ ಚರ್ಚೆ ಇಂದು ನಡೆಯುವ ವಾರದ ಕತೆ ಕಿಚ್ಚನ ಜೊತೆಯಲ್ಲಿ ನಡೆಯಲಿದೆ. ಕಿಚ್ಚ ಸುದೀಪ್ ಜಗದೀಶ್ ಅವರ ವರ್ತನೆ, ರಂಜಿತ್ ನಡವಳಿಕೆಯ ಬಗ್ಗೆ ಏನ್ ಹೇಳುತ್ತಾರೆ ಅನ್ನೋದು ಕುತೂಹಲ ಕೆರಳಿಸಿದೆ.
ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್‌ಗಾಗಿಯೇ ಇಂದು ಬಿಗ್ ಬಾಸ್ ವೀಕ್ಷಕರು ಕಾತರದಿಂದ ಕಾಯುತ್ತಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ಕಲರ್ಸ್ ಕನ್ನಡ ವಾಹಿನಿ ಮಹತ್ವದ ನಿರ್ಧಾರ ಕೈಗೊಂಡಿದೆ. ಸದ್ಯದ ಮಾಹಿತಿ ಪ್ರಕಾರ ಬಿಗ್ ಬಾಸ್ ಮನೆಯಿಂದ ಜಗದೀಶ್, ರಂಜಿತ್ ಇಬ್ಬರನ್ನು ಎಲಿಮಿನೇಟ್ ಮಾಡಿರೋದು ಸರಿ ಅನ್ನೋ ನಿರ್ಧಾರಕ್ಕೆ ಬರಲಾಗಿದೆ. ಈ ಕುರಿತು ಕಿಚ್ಚ ಸುದೀಪ್ ಅವರು ಇಂದು ಕ್ಲಾರಿಟಿಯನ್ನು ಕೊಡಲಿದ್ದಾರೆ.
ಇದನ್ನೂ ಓದಿ: BBK11: ಬಿಗ್ಬಾಸ್ ಮುಖ್ಯ ದ್ವಾರದಿಂದ ಆಚೆ ಬಂದ ರಂಜಿತ್, ಜಗದೀಶ್.. ನೆಕ್ಸ್ಟ್ ಯಾರು?
ಬಿಗ್ ಬಾಸ್ ಮನೆಯಲ್ಲಿ ಇಷ್ಟು ವರ್ಷ ಮನೆಯವರು ಮಾಡೋ ತಪ್ಪುಗಳನ್ನು ಮಾತ್ರ ಚರ್ಚೆ ಮಾಡಲಾಗುತ್ತಿತ್ತು. ಆದರೆ ಸೀಸನ್ 11ರ ಹೊಸದೊಂದು ಬದಲಾವಣೆ ಆಗಿದೆ. ಬಿಗ್ ಬಾಸ್ ವೇದಿಕೆಯಲ್ಲಿ ಈ ಸಲ ಕಂಪ್ಲೇಂಟ್ ಇರೋದು ಬಿಗ್ ಬಾಸ್ ಮೇಲೆ. ಹೀಗಾಗಿ ಬಿಗ್ ಬಾಸ್ ನಿರ್ಧಾರವನ್ನೇ ಕಿಚ್ಚ ಸುದೀಪ್ ಅವರು ಪ್ರಶ್ನೆ ಮಾಡಿದ್ದಾರೆ. ಬಿಗ್ ಬಾಸ್ ಅವಸರದ ನಿರ್ಧಾರ ತೆಗೆದುಕೊಂಡ್ರಾ ಅಥವಾ ತಗೊಂಡಿರೋ ನಿರ್ಧಾರ ತಪ್ಪಾಗಿತ್ತಾ ಅನ್ನೋದಕ್ಕೆ ಸುದೀಪ್ ಅವರು ವಿವರಣೆ ನೀಡಿದ್ದಾರೆ.
View this post on Instagram
ಜಗದೀಶ್ ಅವರ ಮೇಲೆ ಇಡೀ ಮನೆಯ ಎಲ್ಲಾ ಸದಸ್ಯರು ತಿರುಗಿಬಿದ್ದಿದ್ದು ಕೋಲಾಹಲ ಸೃಷ್ಟಿಸಿತ್ತು. ಮಹಿಳಾ ಸ್ಪರ್ಧಿಗಳ ಮೇಲೆ ಕೇಳಿ ಬಂದ ಮಾತುಗಳಿಗೆ ಬಿಗ್ ಬಾಸ್ ಮನೆ ರಣರಂಗವಾಗಿತ್ತು. ಕೊನೆಗೆ ಮಧ್ಯಪ್ರವೇಶಿಸಿದ ಬಿಗ್ ಬಾಸ್ ಯಾರು ತುಟಿಕ್ ಪಿಟಿಕ್ ಅನ್ನೋ ಹಾಗಿಲ್ಲ ಎಂದು ಗದರಿದ್ದಾರೆ. ಈ ಕೂಡಲೇ ಮುಖ್ಯದ್ವಾರದ ಮೂಲಕ ಹೊರಗೆ ಬನ್ನಿ ಎಂದು ಜಗದೀಶ್ ಹಾಗೂ ರಂಜಿತ್ ಅವರಿಗೆ ಸೂಚನೆ ನೀಡಲಾಗಿದೆ. ಸದ್ಯ ಜಗದೀಶ್ ಅವರು ಬಿಗ್ ಬಾಸ್ ಮನೆಯಿಂದ ಹೊರಗೆ ಬಂದಿದ್ದಾರೆ ಅನ್ನೋ ಮಾಹಿತಿ ಪಕ್ಕಾ ಆಗಿದೆ. ಇಷ್ಟೆಲ್ಲಾ ಆದ ಮೇಲೆ ಬಿಗ್ ಬಾಸ್ ಮನೆಯ ಆಟ ಹೇಗಿರುತ್ತೆ. ಮುಂದಿನ ವಾರದ ಕತೆ ಏನು ಅನ್ನೋದು ಕುತೂಹಲ ಕೆರಳಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ