/newsfirstlive-kannada/media/post_attachments/wp-content/uploads/2024/10/Bigg-boss-Season-11-Sudeep-4.jpg)
ಬಿಗ್ ಬಾಸ್ ಸೀಸನ್ 11 ದಿನ ಕಳೆದಂತೆ ಹೊಸ, ಹೊಸ ರೂಪ ಪಡೆದುಕೊಳ್ತಿದೆ. ಹೊಸ ಅಧ್ಯಾಯ ಅಂತಲೇ ಶುರುವಾಗಿರುವ ಈ ಸೀಸನ್‌ನಲ್ಲಿ ಎಲ್ಲವೂ ಹೊಸತನದಿಂದ ಕೂಡಿದೆ. ವಾರದ ಕತೆ ಕಿಚ್ಚನ ಜೊತೆಯಲ್ಲಿ ಮತ್ತೊಂದು ಹೊಸತನಕ್ಕೆ ಮುನ್ನುಡಿ ಬರೆಯಲಾಗಿದೆ.
ಇದನ್ನೂ ಓದಿ: BBK11: ಸೈಕಲ್ ಪಂಪ್, ಸೀಟಿ, ಕ್ಯಾಲ್ಕುಲೇಟರ್.. ಬಿಗ್ ಬಾಸ್ ಸ್ಪರ್ಧಿಗಳ ಮುಖವಾಡ ಕಳಚಿಟ್ಟ ಕಿಚ್ಚ ಸುದೀಪ್!
ವಾರದ ಕತೆಯನ್ನು ಫುಲ್ ಜೋಶ್‌ನಿಂದಲೇ ಆರಂಭಿಸಿರುವ ಬಿಗ್ ಬಾಸ್ ತಂಡ ಈ ಸೀಸನ್‌ನ ಸ್ಪರ್ಧಿಗಳಿಗೆ ಬಿಗ್ ಸರ್‌ಪ್ರೈಸ್ ಅನ್ನೇ ನೀಡಿದೆ. ಕಿಚ್ಚ ಸುದೀಪ್ ಅವರು ಎಲ್ಲಾ ಸ್ಪರ್ಧಿಗಳಿಗೆ ವಾರ್ ಹಾಗೂ ಬ್ಯಾಟಲ್ ಬಗ್ಗೆ ತಿಳಿಸಿ ಹೇಳಿ ನೇರವಾಗಿ ಗಾರ್ಡನ್ ಏರಿಯಾಗೆ ಹೋಗುವಂತೆ ಹೇಳಿದರು.
ಬಿಗ್ ಬಾಸ್ ಮನೆಯಲ್ಲಿ ಇದುವರೆಗೂ ಸ್ವರ್ಗ, ನರಕ ಅನ್ನೋ ಬೇಲಿ ಇತ್ತು. 2 ವಾರದ ಬಳಿಕ ನರಕದ ಬೇಲಿ ತೆಗೆಯಲಾಗಿದೆ. ಅದರ ಬದಲಾಗಿ ಗಾರ್ಡನ್ ಏರಿಯಾದಲ್ಲಿ ಈಗ ಹೊಸದೊಂದು ಗಿಫ್ಟ್ ಬಿಗ್ ಬಾಸ್ ಸೀಸನ್ 11 ಸ್ಪರ್ಧಿಗಳಿಗೆ ಸಿಕ್ಕಿದೆ.
ಭಾರತದ ಬಿಗ್ ಬಾಸ್ ಇತಿಹಾಸದಲ್ಲೇ ಮೊದಲ ಬಾರಿಗೆ ಬಿಗ್ ಬಾಸ್ ಮನೆಯ ಸದಸ್ಯರಿಗೆ ಲಕ್ಷುರಿ ಗಿಫ್ಟ್ ನೀಡಲಾಗಿದೆ. ಗಾರ್ಡನ್ ಏರಿಯಾದಲ್ಲಿ ಎಲಿವೇಟರ್ ಅನ್ನು ಹಾಕಲಾಗಿದೆ. ಬಿಗ್ ಬಾಸ್ ಮನೆಯಲ್ಲಿ ಈ ರೀತಿಯ ಎಲಿವೇಟರ್ ಹಾಕಿರೋದು ಬಿಗ್ ಬಾಸ್ ಇತಿಹಾಸದಲ್ಲಿ ಇದೇ ಮೊದಲು. ಈ ಎಲಿವೇಟರ್‌ನಲ್ಲಿ ಕ್ಯಾಪ್ಟನ್ ಶಿಶಿರ್ ಅವರು ಮೊದಲ ಬಾರಿಗೆ ಮೇಲಕ್ಕೆ ಹೋಗಿ ಬಂದಿದ್ದಾರೆ.
ಬಿಗ್ ಬಾಸ್ ಗಾರ್ಡನ್ ಏರಿಯಾದಲ್ಲಿ ಇದುವರೆಗೂ ಮೆಟ್ಟಿಲು ಹತ್ತಿ ಹೋಗಿ ಸ್ಪರ್ಧಿಗಳು ಹರಟೆ ಹೊಡೆಯುತ್ತಿದ್ದರು. ಇದೀಗ ಎಲಿವೇಟರ್‌ನಲ್ಲಿ ಹೋಗುವ ಅವಕಾಶವನ್ನು ಸೀಸನ್ 11ರ ಸ್ಪರ್ಧಿಗಳಿಗೆ ನೀಡಲಾಗಿರೋದು ವಿಶೇಷವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ