/newsfirstlive-kannada/media/post_attachments/wp-content/uploads/2024/11/BIGG-BOSS-9.jpg)
ಬಿಗ್​ಬಾಸ್ ಮನೆಯಲ್ಲಿ ಟಾಸ್ಕ್​ ವಿಚಾರಕ್ಕೆ ಮತ್ತೆ ಗಲಾಟೆ ನಡೆದಿದೆ. ಕ್ಯಾಪ್ಟನ್ ಮಂಜು ಮತ್ತು ರಜತ್ ನಡುವೆ ಮಾತಿನ ಯುದ್ಧವೇ ನಡೆದು ಹೋಗಿದೆ.
ಆಗಿದ್ದೇನು..?
ಬಿಗ್​ಬಾಸ್ ಸಾಮ್ರಾಜ್ಯದಲ್ಲಿ ಕ್ಯಾಪ್ಟನ್ ಮಂಜಣ್ಣ ಮಹಾರಾಜನ ಸ್ಥಾನ ಅಲಂಕರಿಸಿ ದರ್ಬಾರ್ ನಡೆಸ್ತಿದ್ದರು. ರಾಜನ ದರ್ಬಾರ್​ಗೆ ಟ್ವಿಸ್ಟ್ ಇರಲಿ ಎಂದು ಮೋಕ್ಷಿತಾ ಅವರನ್ನು ಯುವರಾಣಿಯನ್ನಾಗಿ ಬಿಗ್​ಬಾಸ್ ಘೋಷಣೆ ಮಾಡಿದ್ದಾರೆ. ಬೆನ್ನಲ್ಲೇ, ಅಲ್ಲಿನ ಪ್ರಜೆಗಳು ಎರಡು ಬಣಗಳಾಗಿ ಪ್ರತ್ಯೇಕಗೊಂಡಿದ್ದಾರೆ.
ಒಂದು ಯುವರಾಣಿ ಮೋಕ್ಷಿತಾ ಅವರ ಬಣವಾದರೆ, ಇನ್ನೊಂದು ರಾಜ ಮಂಜಣ್ಣ ಬಣವಾಗಿದೆ. ಅಂತೆಯೇ ನಿನ್ನೆಯ ಎಪಿಸೋಡ್​ನಲ್ಲಿ ರಾಜ ಮತ್ತು ಯುವರಾಣಿಯ ನಡುವೆ ಗದ್ದುಗೆಗೆ ಕಿತ್ತಾಟ ಶುರುವಾಗಿತ್ತು. ಇಂದು ಬಿಗ್​ಬಾಸ್​ ಎರಡು ಬಣಗಳಿಗೆ ಟಾಸ್ಕ್ ನೀಡಿದ್ದಾರೆ. ಅದುವೇ ಮಣ್ಣಿನಿಂದ ಅಸ್ತ್ರ ಮಾಡೋದು.
ಈ ವೇಳೆ ಮಣ್ಣಿನ ಉಂಡೆಗಳನ್ನು ಎತ್ತಿಕೊಳ್ಳುವಾಗ ಪ್ರಜೆಗಳ ನಡುವೆ ನೂಕಾಟ, ತಳ್ಳಾಟ ನಡೆದಿದೆ. ಮಂಜು ಮತ್ತು ಮೋಕ್ಷಿತಾ ಬಣದ ರಜತ್ ನಡುವೆ ಮಾತಿನ ಸಮರ ಶುರುವಾಗಿದೆ. ಮಂಜು ಬಣದ ಪ್ರಜೆಗಳು, ಮೋಕ್ಷಿತಾ ಬಣದ ಸದಸ್ಯರನ್ನು ತಳ್ಳಿ ಮಣ್ಣನ್ನು ಎತ್ತಿಕೊಂಡು ಹೋಗಿದ್ದಾರೆ. ಇದಕ್ಕೆ ಕೋಪಿಸಿಕೊಂಡ ರಜತ್, ನಾನು ತಳ್ಳೋದಿದ್ರೆ ಸರಿಯಾಗಿ ತಳ್ಳುತ್ತೇನೆ. ಬುರುಡೆ ಹೊಡೆದು ಹೋಗುವ ಹಾಗೆ ತಳ್ಳುತ್ತೇನೆ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.
ಇದನ್ನು ಕೇಳಿಸಿಕೊಂಡ ಮಂಜು ಅಲ್ಲಿಗೆ ಎಂಟ್ರಿಯಾಗಿ.. ಬುರುಡೆ ಒಡಿತಿಯಾ ನೀನು? ಏನು ರೌಡಿಸಂ ಎಂದು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ರೌಡಿ ಅಂತಾ ಯಾಕೆ ಹೇಳ್ತೀಯಾ ಎಂದು ರಜತ್ ಕಿರುಚಾಡಿದ್ದಾರೆ. ಅದಕ್ಕೆ ಮತ್ತೆ ಕೌಂಟರ್ ಕೊಟ್ಟ ಮಂಜು, ಬೆದರಿಕೆ ಇಡೋದಲ್ಲ. 54 ದಿನ ಇಲ್ಲಿ ಭಯ ಪಟ್ಟುಕೊಂಡು ಇದ್ದಿಲ್ಲ. ನಿನ್ನಾಟ ನೀನು ತೋರಿಸು, ನನ್ನಾಟ ನಾನು ತೋರಿಸ್ತೇನೆ ಎಂದಿದ್ದಾರೆ. ಅದಕ್ಕೆ ತಿರುಗೇಟು ನೀಡುವ ರಜತ್, ಆವಾಗಿಂದು ಒಂದು ಲೆಕ್ಕ, ಇವಾಗಿಂದ ಇನ್ನೊಂದು ಲೆಕ್ಕ ಅಂತಾ ಸವಾಲ್ ಎಸೆದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us