BBK11: ಬಿಗ್‌ ಬಾಸ್‌ ಮನೆಯಲ್ಲಿ ಮೆಗಾ ಟ್ವಿಸ್ಟ್‌.. ಈ ವಾರದ ಕ್ಯಾಪ್ಟನ್ ಇವರೇ ನೋಡಿ!

author-image
admin
Updated On
BBK11: ಬಿಗ್ ಬಾಸ್ ಮನೆಯ ವಿಲನ್ ಮಂಜು ಡೈಲಾಗ್‌; ತ್ರಿವಿಕ್ರಮ್‌ಗೆ ಗುರಾಯಿಸಿದ ಧನರಾಜ್‌!
Advertisment
  • ಬಿಗ್ ಬಾಸ್ ಮನೆಯಲ್ಲಿ ಈ ವಾರದ ಕಳಪೆ ಪಟ್ಟ ರಜತ್‌ ಪಾಲು
  • ವೈಲ್ಡ್ ಕಾರ್ಡ್‌ ಎಂಟ್ರಿ ರಜತ್ ಮೇಲೆ ತಿರುಗಿಬಿದ್ದ ಮನೆಯ ಸದಸ್ಯರು
  • ತ್ರಿವಿಕ್ರಮ್ ಕ್ಯಾಪ್ಟೆನ್ಸಿ ಮುಗಿದ ಬಳಿಕ ಈ ವಾರದ ದರ್ಬಾರ್ ಯಾರದ್ದು?

ಕನ್ನಡ ಕಿರುತೆರೆಯ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 11ರ ಆಟ ರಂಗೇರಿದೆ. ಬಿಗ್ ಬಾಸ್ ಮನೆಯಲ್ಲಿ ಸದ್ಯ ಪ್ರೇಕ್ಷಕರು ನಿರೀಕ್ಷೆ ಮಾಡದ ಟ್ವಿಸ್ಟ್‌ಗಳನ್ನ ಸ್ಪರ್ಧಿಗಳು ನೀಡುತ್ತಿದ್ದಾರೆ. ಕಿಚ್ಚನ ಪಂಚಾಯ್ತಿಗೂ ಮುನ್ನ ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆಯ್ಕೆ ಕುತೂಹಲಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ಚಿಟಿಕೆ ಹೊಡೆದು ಗೋಲ್ಡ್​ ಸುರೇಶ್​ಗೆ ರಜತ್ ಚಾಲೆಂಜ್; ಮತ್ತೆ ಅದೇ ಪದ ಬಳಕೆ..! 

ಬಿಗ್ ಬಾಸ್ ಮನೆಯಲ್ಲಿ ಈ ವಾರದ ಕಳಪೆ ಯಾರಿಗೆ ಅನ್ನೋದು ಈಗಾಗಲೇ ರಿವೀಲ್ ಆಗಿದೆ. ವೈಲ್ಡ್ ಕಾರ್ಡ್‌ನಲ್ಲಿ ಎಂಟ್ರಿಯಾದ ರಜತ್ ಕಿಶನ್ ಅವರು ಮನೆಯ ಎಲ್ಲಾ ಸದಸ್ಯರ ಕೆಂಗಣ್ಣಿಗೆ ಗುರಿಯಾಗಿದ್ದು ಜೈಲು ಪಾಲಾಗಿದ್ದಾರೆ. ಬಿಗ್‌ಬಾಸ್ ಮನೆಯಲ್ಲಿ ಈ ವಾರದ ಕಳಪೆ ಪಟ್ಟ ರಜತ್ ಅವರಿಗೆ ಸಿಕ್ಕಿದೆ.

publive-image

ರಜತ್ ಅವರ ಒರಟು ಮಾತು ಹಾಗೂ ಸೆಡೆ ಅನ್ನೋ ಶಬ್ದ ಬಳಕೆ ಬಿಗ್ ಬಾಸ್ ಮನೆಯಲ್ಲಿ ಕೋಲಾಹಲವನ್ನೇ ಸೃಷ್ಟಿಸಿದೆ. ಇದೇ ಕಾರಣಕ್ಕೆ ಗೋಲ್ಡ್ ಸುರೇಶ್ ಹಾಗೂ ರಜತ್ ಮಧ್ಯೆ ಜಗಳ ನಡೆದಿತ್ತು. ಕಳಪೆ ನೀಡುವ ಟಾಸ್ಕ್‌ನಲ್ಲಿ ಗೋಲ್ಡ್ ಸುರೇಶ್ ಅವರ ಮಾತಿಗೆ ಮನೆಯವರೆಲ್ಲಾ ದನಿಗೂಡಿಸಿದ್ದಾರೆ. ಎಲ್ಲರ ವೋಟಿಂಗ್ ಆಧಾರದಲ್ಲಿ ರಜತ್ ಅವರು ಕಳಪೆ ಪಟ್ಟವನ್ನು ಅಲಂಕರಿಸಬೇಕಾಗಿದೆ.

ರಜತ್ ಅವರಿಗೆ ಕಳಪೆ ಪಟ್ಟ ಸಿಕ್ಕ ಮೇಲೆ ಈ ವಾರದ ಕ್ಯಾಪ್ಟನ್ ಯಾರು ಅನ್ನೋ ರೇಸ್‌ನಲ್ಲಿ ಮಂಜು ಅವರು ಗೆಲುವು ಸಾಧಿಸಿದ್ದಾರೆ. ಈ ವಾರದ ಟಾಸ್ಕ್‌ ಹಾಗೂ ಮನೆಯವರ ಜೊತೆ ನಡೆದ ಮಾತುಕತೆಯಲ್ಲಿ ಮಂಜು ಅವರು ಎಲ್ಲರ ಮನಗೆದ್ದಿದ್ದಾರೆ. ತ್ರಿವಿಕ್ರಮ್ ಅವರ ಕ್ಯಾಪ್ಟೆನ್ಸಿ ಮುಗಿದ ಬಳಿಕ ಅಚ್ಚರಿ ಎಂಬಂತೆ ಮಂಜು ಅವರು ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment