BBK11 ಮತ್ತೆ ಹೊತ್ತಿಕೊಂಡ ಬೆಂಕಿ! ಗೌತಮಿಯನ್ನು ಸ್ವಿಮ್ಮಿಂಗ್​ ಪೂಲ್​​ಗೆ ತಳ್ಳಿದ ಮೋಕ್ಷಿತಾ..!

author-image
Ganesh
Updated On
BBK11 ಮತ್ತೆ ಹೊತ್ತಿಕೊಂಡ ಬೆಂಕಿ! ಗೌತಮಿಯನ್ನು ಸ್ವಿಮ್ಮಿಂಗ್​ ಪೂಲ್​​ಗೆ ತಳ್ಳಿದ ಮೋಕ್ಷಿತಾ..!
Advertisment
  • ಗೌತಮಿ ಮೇಲೆ ಸೇಡು ತೀರಿಸಿಕೊಂಡ ಮೋಕ್ಷಿತಾ ಪೈ
  • ಬಿಗ್​ಬಾಸ್​ ನೀಡಿದ ಟಾಸ್ಕ್​​ನಲ್ಲಿ ಹಳೇ ಸೇಡಿನ ಜಿದ್ದಾಜಿದ್ದಿ
  • ಚೈತ್ರಾ ಕುಂದಾಪುರ ಪಕ್ಷಪಾತಿ ಮಾಡೋದ್ರಲ್ಲಿ ಫಸ್ಟ್..!

ಬಿಗ್​ಬಾಸ್​ ಮನೆಯಲ್ಲಿ ಮತ್ತೆ ಗೌತಮಿ ಜಾಧವ್ ಹಾಗೂ ಮೋಕ್ಷಿತಾ ಪೈ ಮಧ್ಯೆ ಹೊಗೆ ಹೊತ್ತಿಕೊಂಡಿದೆ. ಇಬ್ಬರ ನಡುವಿನ ಮುನಿಸು ಸರಿ ಹೋಗಿದೆ ಅನ್ನುವಷ್ಟರಲ್ಲಿ ಬಿಗ್​ ಬಾಸ್​ ನೀಡಿದ ಹೊಸ ಟಾಸ್ಕ್​​ನಲ್ಲಿ ಟ್ವಿಸ್ಟ್​ ಸಿಕ್ಕಿದೆ. ಮೋಕ್ಷಿತ ಅವರು ಗೌತಮಿ ಮೇಲೆ ಸೇಡು ತೀರಿಸಿಕೊಳ್ಳೋದನ್ನು ಮುಂದುವರಿಸಿದ್ದಾರೆ.

ಗೌತಮಿ ಮತ್ತು ಮೋಕ್ಷಿತಾ ನಡುವಿನ ಕಿತ್ತಾಟಕ್ಕೆ ಮತ್ತೆ ವೀಕ್ಷಕರು ಶಾಕ್ ಆಗಿದ್ದಾರೆ. ಇಂದು ರಾತ್ರಿ ಪ್ರಸಾರವಾಗಲಿರುವ ಎಪಿಸೋಡ್​ಗೆ ಸಂಬಂಧಿಸಿ ಕಲರ್ಸ್ ಕನ್ನಡ ಪ್ರೊಮೋ ರಿಲೀಸ್ ಮಾಡಿದೆ. ಅದರಲ್ಲಿ ಬಿಗ್​ಬಾಸ್​ ಟಾಸ್ಕ್ ನೀಡಿದ್ದಾರೆ. ಪಕ್ಷಪಾತಿ ಹಾಗೂ ನಿರ್ಧಾರ ತೆಗೆದುಕೊಳ್ಳುವ ಅಶಕ್ತ, ಕೊಟ್ಟ ಮಾತನ್ನು ಉಳಿಸಿಕೊಳ್ಳುವಲ್ಲಿ ಅಶಕ್ತ, ಜನ ನಿರ್ವಹಣೆಯಲ್ಲಿ ಅಶಕ್ತ ಎಂಬ ಆಯ್ಕೆಗೆ ಸ್ಪರ್ಧಿಗಳನ್ನು ಸೂಚಿಸುವಂತೆ ಬಿಗ್​ಬಾಸ್ ಸೂಚನೆ ನೀಡಿದ್ದಾರೆ. ಟಾಸ್ಕ್​​ನ ಮುಂದುವರಿದ ಭಾಗವಾಗಿ ತಾವು ತೆಗೆದುಕೊಂಡ ವ್ಯಕ್ತಿಯ ಹೆಸರನ್ನು ಹೇಳಿ, ಅದಕ್ಕೆ ಸೂಕ್ತ ಕಾರಣ ನೀಡಿ ಸ್ವಿಮ್ಮಿಂಗ್ ಪೂಲ್​​ಗೆ ತಳ್ಳಬೇಕಾಗಿರುತ್ತದೆ.

ಇದನ್ನೂ ಓದಿ:BBK11: ಸ್ಪರ್ಧಿಗಳಿಗೆ ಕಾದಿದ್ಯಾ ಬಿಗ್ ಶಾಕ್​​; ತಮ್ಮನ್ನೇ ತಾವೇ ನಾಮಿನೇಟ್​ ಮಾಡಿಕೊಂಡಿದ್ದೇಕೆ ತ್ರಿವಿಕ್ರಮ್?

ಅಂತೆಯೇ ಮೋಕ್ಷಿತಾ, ಅವರು ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಅಶಕ್ತ ಸ್ಥಾನಕ್ಕೆ ಗೌತಮಿ ಹೆಸರನ್ನು ತಿಳಿಸಿದ್ದಾರೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಮತ್ತೆ ವಾಗ್ಯುದ್ಧ ನಡೆದಿದೆ. ನಂತರ ಗೌತಮಿ ಅವರನ್ನು ಮೋಕ್ಷಿತಾ ನೀರಿಗೆ ತಳ್ಳಿದ್ದಾರೆ. ಪಕ್ಷಪಾತಿ ವ್ಯಕ್ತಿಗಳ ಸಾಲಿನಲ್ಲಿ ಹೆಚ್ಚು ಮಂದಿ ಚೈತ್ರಾ ಕುಂದಾಪುರ ಹೆಸರನ್ನು ಟಾರ್ಗೆಟ್ ಮಾಡಿದ್ದಾರೆ.

ಇದನ್ನೂ ಓದಿ:BBK11: ನನ್ನಿಂದ ದೂರ ಇದ್ರೆನೇ ಒಳ್ಳೆದು.. ನೇರವಾಗಿಯೇ ಮಂಜಣ್ಣನಿಗೆ ವಾರ್ನಿಂಗ್​ ಕೊಟ್ಟ ಗೌತಮಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment