‘ನಂಗೆ ಈ ಅವಾರ್ಡ್​ ಬೇಡ ಸರ್’ ಎಂದ ಗೋಲ್ಡ್​ ಸುರೇಶ್; ಬಿಗ್​​ಬಾಸ್​ನಲ್ಲಿ ಹೊಸ, ಹೊಸ ಪ್ರಶಸ್ತಿ..!

author-image
Ganesh
Updated On
‘ನಂಗೆ ಈ ಅವಾರ್ಡ್​ ಬೇಡ ಸರ್’ ಎಂದ ಗೋಲ್ಡ್​ ಸುರೇಶ್; ಬಿಗ್​​ಬಾಸ್​ನಲ್ಲಿ ಹೊಸ, ಹೊಸ ಪ್ರಶಸ್ತಿ..!
Advertisment
  • ಬಿಗ್​ಬಾಸ್​ನಲ್ಲಿ ಸ್ಪರ್ಧಿಗಳ ನಡುವೆ ಬೆಂಕಿ ಹೊತ್ತಿಸುತ್ತಾ ಅವಾರ್ಡ್?
  • ಯಾವ ಅವಾರ್ಡ್​ ಯಾಱರು ಪಡೆದುಕೊಂಡರು?
  • ಕಿಚ್ಚನ ಎದುರು ಗೋಲ್ಡ್​ ಸುರೇಶ್ ಕೊಟ್ಟ ಸಮರ್ಥನೆ ಏನು?

ಬಿಗ್​ಬಾಸ್​​ನಲ್ಲಿ ಇವತ್ತು ‘ಸೂಪರ್ ಸಂಡೇ ವಿತ್ ಬಾದ್​ಷಾ ಸುದೀಪ’ ಎಪಿಸೋಡ್​ನ ಕ್ಯೂರಿಯಾಸಿಟಿ ಹೆಚ್ಚಾಗಿದೆ. ಕಲರ್ಸ್​ ಕನ್ನಡ ಪ್ರೊಮೋ ರಿಲೀಸ್ ಮಾಡಿದ್ದು, ಅದರಲ್ಲಿ ಅವಾರ್ಡ್​ ಕೊಡುವ ಟೈಂ ಬಂದಿದೆ ಎಂದು ಹೇಳಲಾಗಿದೆ.

ಪ್ರೊಮೋ ವಿಡಿಯೋ ಪ್ರಕಾರ.. ಸುದೀಪ್​ ಅವರು ಸ್ಪರ್ಧಿಗಳಿಗೆ ಅವಾರ್ಡ್​ ನೀಡಲು ಪ್ರಶ್ನೆ ಕೇಳಿದ್ದಾರೆ. ಮನೆ ಮೆಚ್ಚಿದ ಫೇಕ್ ಕಂಟೆಸ್ಟೆಂಟ್ ಯಾರು ಎಂದು ಕೇಳಿದ್ದಾರೆ. ಅದಕ್ಕೆ ಬಹುತೇಕ ಸ್ಪರ್ಧಿಗಳು ಚೈತ್ರಾ ಕುಂದಾಪುರ ಹೆಸರನ್ನು ತೆಗೆದುಕೊಂಡಿದ್ದಾರೆ.

publive-image

ಇನ್ನೊಂದು ಪ್ರಶ್ನೆ ಉಸರವಳ್ಳಿ ಕಂಟೆಸ್ಟೆಂಟ್ ಯಾರು ಎಂದು ಕಿಚ್ಚ ಕೇಳಿದ್ದಾರೆ. ಅದಕ್ಕೆ ಗೋಲ್ಡ್​ ಸುರೇಶ್ ಹೆಸರನ್ನು ಕೆಲವರು ಹೇಳಿದ್ದಾರೆ. ಅದಕ್ಕೆ ಹನುಮಂತ ಕೂಡ ಹೌದು.. ನಮ್ಮ ಮಾವರೀ.. ಐದೈದು ನಿಮಿಷಕ್ಕೂ ಅವರೇ ಚೇಂಜ್ ಆಗಿಬಿಡ್ತನ್ರಿ. ‘ಮಾವ ಅಲ್ಲಿ ಮಾತಾಡಿದ್ಯಲ್ಲೋ ಅಂದರೆ.. ಅಲ್ಲಿ ನಾನ್ಯಾವಾಗ ಮಾತಾಡಿದ್ದೆ’ ಎಂದು ಪ್ರಶ್ನೆ ಮಾಡುತ್ತಾರೆ ಎಂದು ಹನುಮಂತ ಹೇಳಿದ್ದಾರೆ.

ಇದನ್ನೂ ಓದಿ:BBK11: ಬಿಗ್​ಬಾಸ್​ ಮನೆಯಲ್ಲಿ ಬಿಗ್​ ಟ್ವಿಸ್ಟ್; ಈ ವಾರ ಮನೆಯಿಂದ ಔಟ್ ಆಗೋದ್ಯಾರು?

ಅದಕ್ಕೆ ಕಿಚ್ಚನ ಎದುರು ಪ್ರತಿಕ್ರಿಯಿಸಿದ ಗೋಲ್ಡ್​ ಸುರೇಶ್, ನಾನು ಯಾವತ್ತೂ ಅಲ್ಲಿಂದ ತಂದು ಇಲ್ಲಿ ಹೇಳೋದು, ಇಲ್ಲಿನ ವಿಚಾರಗಳನ್ನು ಅಲ್ಲಿಗೆ ಹೋಗಿ ಹೇಳುವ ಕ್ಯಾರೆಕ್ಟರ್​​ ನನ್ನದಲ್ಲ. ನಾನು ಊಸರವಳ್ಳಿ ಅಲ್ಲ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment