newsfirstkannada.com

×

BBK11: ಬಿಗ್​ ಬಾಸ್​ ಇತಿಹಾಸದಲ್ಲೇ ಇದೇ ಮೊದಲು.. ಮನೆಯೊಳಕ್ಕೆ ನುಗ್ಗಿ ಬಂದ ಜನರು! ಯಾಕೆ?

Share :

Published October 25, 2024 at 9:01am

    ತೋಳ ಮತ್ತು ಹದ್ದು ಪಕ್ಷಗಳ ನಡುವೆ ಭರ್ಜರಿ ಪ್ರಚಾರ

    ಬಿಗ್​ ಬಾಸ್​ ಮನೆಯೊಳಕ್ಕೆ ಬಂದ ಹತ್ತಾರು ಜನರು

    ಜನರನ್ನು ಕಂಡು ಅಚ್ಚರಿಗೊಂಡ ಬಿಗ್​ ಬಾಸ್ ಮನೆ ಮಂದಿ

ಬಿಗ್​ ಬಾಸ್​​ ಕನ್ನಡ ಸೀಸನ್​ 11 ಭಾರೀ ಕುತೂಹಲದಿಂದ ಸಾಗುತ್ತಿದೆ. ಸದ್ಯ ಮನೆಯಲ್ಲಿ ರಾಜಕೀಯ ಟಾಸ್ಕ್​ ನಡೆಯುತ್ತಿದೆ. ಈಗಾಗಲೇ ಮನೆಯಲ್ಲಿ ಎರಡು ಬಣಗಳಾಗಿದ್ದು, ಇತ್ತಂಡಗಳು ತಮ್ಮ ಚಿಹ್ನೆಯೊಂದಿಗೆ ಪ್ರಚಾರ ನಡೆಸುತ್ತಿವೆ. ಹೀಗಿರುವಾಗ ಬಿಗ್​ ಬಾಸ್​​ ಟಾಸ್ಕ್​ನಲ್ಲಿ ಕೊಂಚ ಟ್ವಿಸ್ಟ್​ ಕೊಟ್ಟಿದ್ದಾರೆ. ಅದೇನೆಂದರೆ ಬಿಗ್​ ಬಾಸ್​ ಮನೆಗೆ ಜನಸಾಮಾನ್ಯರನ್ನು ಕರೆಸಲಾಗಿದೆ.

ಹೌದು. ರಾಜಕೀಯ ಎಂದ ಮೇಲೆ ಜನರು ಇರಲೇಬೇಕು. ಜನರಿಂದಲೇ ಪ್ರತಿನಿಧಿಯೊಬ್ಬ ರಾಜಕಾರಣಿಯಾಗಿ ಆಯ್ಕೆಯಾಗುತ್ತಾನೆ. ಆದರೀಗ ಜನರನ್ನೇ ಮನೆಯೊಳಕ್ಕೆ ಕರೆಸಿಕೊಂಡಿರುವ ಬಿಗ್​ ಬಾಸ್​ ಸ್ಪರ್ಧಿಗಳಿಗೆ ದೊಡ್ಡ ಟಾಸ್ಕ್​ ನೀಡಿದ್ದಾರೆ. ಆ ಮೂಲಕ ಹೊಸ ಇತಿಹಾಸ ನಿರ್ಮಿಸಿದೆ.

ಇದನ್ನೂ ಓದಿ: 25 ಕೆಜಿ ಅಕ್ಕಿ ಚೀಲದಲ್ಲಿ ₹15 ಲಕ್ಷ ಹಣ.. ಕಂತೆ, ಕಂತೆ ನೋಟು ನೋಡಿ ಉಲ್ಟಾ ಹೊಡೆದ ಗ್ರಾಹಕ; ಆಮೇಲೇನಾಯ್ತು? 

ಬಿಗ್​​ ಬಾಸ್​ ಮನೆಯಲ್ಲಿ ಸ್ಪರ್ಧಿಗಳು ಈಗಾಗಲೇ ಎರಡು ಪಕ್ಷವನ್ನು ರಚಿಸಿದ್ದಾರೆ. ತೋಳ ಮತ್ತು ಹದ್ದು ಎಂಬ ಎರಡು ಪಕ್ಷ ರಚಿಸಿ ಪ್ರಚಾರ ಮಾಡುತ್ತಿದ್ದಾರೆ. ಆದರೀಗ ಜನ ಸಾಮಾನ್ಯರ ಮುಂದೆ ತಮ್ಮ ಪಕ್ಷವನ್ನು ಗೆಲ್ಲಿಸುವುದೇ ಪ್ರಮುಖ ಗುರಿಯಾಗಿದೆ.

ತೋಳ ಪಕ್ಷವು ಧರ್ಮ ಪರ ಸೇನಾ ಪಕ್ಷ ಎಂಬ ಧ್ಯೇಯದೊಂದಿಗೆ ಪ್ರಚಾರ ಮಾಡಿದರೆ, ಇತ್ತ ಹದ್ದು ಪಕ್ಷವು ಪ್ರಮಾಣಿಕ ಸಮರ್ಥ ನ್ಯಾಯವಾದಿ ಪಕ್ಷ ಹೆಸರಿನಲ್ಲಿ ಪ್ರಚಾರ ಮಾಡುತ್ತಿದೆ.

ಇದನ್ನೂ ಓದಿ: ಇಂದು ಹಿತಶತ್ರುಗಳ ಕಾಟ ಹೆಚ್ಚಾಗಬಹುದು, ತುಂಬಾ ಶ್ರಮ ಪಡಬೇಕಾದ ದಿನ; ಇಲ್ಲಿದೆ ಇಂದಿನ ಭವಿಷ್ಯ!

ಒಟ್ಟಿನಲ್ಲಿ ಮನೆಯೊಳಕ್ಕೆ ಕಾಲಿಟ್ಟ ಜನರ ಮನಗೆಲ್ಲುವುದೇ ರಾಜಕಾರಣಿಗಳ ಪ್ರಮುಖ ಗುರಿಯಾಗಿದೆ. ಜೊತೆಗೆ ಸ್ಪರ್ಧಿಗಳಿಗೆ ಜನಸಾಮಾನ್ಯರು ನಾನಾ ರೀತಿಯ ಪ್ರಶ್ನೆಯನ್ನು ಕೇಳುವ ಅವಕಾಶವನ್ನು ಕೊಡಲಾಗಿದೆ. ಇಂದಿನ ಎಪಿಸೋಡ್​ ಭಾರೀ ಕುತೂಹಲತೆಯಿಂದ ಕೂಡಿದ್ದು, ಜನಸಾಮಾನ್ಯರು ಮತ್ತು ಪಕ್ಷದ ಪ್ರತಿನಿಧಿಗಳ ಜೊತೆಗಿನ ಮಾತುಕತೆಯನ್ನು ಕಾಣಲು ವೀಕ್ಷಕರು ಕಾದು ಕುಳಿತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BBK11: ಬಿಗ್​ ಬಾಸ್​ ಇತಿಹಾಸದಲ್ಲೇ ಇದೇ ಮೊದಲು.. ಮನೆಯೊಳಕ್ಕೆ ನುಗ್ಗಿ ಬಂದ ಜನರು! ಯಾಕೆ?

https://newsfirstlive.com/wp-content/uploads/2024/10/BBK11-8.jpg

Load More