/newsfirstlive-kannada/media/post_attachments/wp-content/uploads/2024/11/BBK-11-Chaitra-Rajath.jpg)
9ನೇ ವಾರದಲ್ಲಿ ಬಿಗ್‌ಬಾಸ್ ಸೀಸನ್ 11 ರಣರೋಚಕವಾದ ಆಟಕ್ಕೆ ಸಾಕ್ಷಿಯಾಗುತ್ತಿದೆ. ಎಲ್ಲಾ ಸ್ಪರ್ಧಿಗಳು ಈ ವಾರ ಮನೆಯಲ್ಲಿ ಉಳಿದುಕೊಳ್ಳಲು ಶತಯಗತಾಯ ಹೋರಾಡುತ್ತಿದ್ದಾರೆ. ಈ ವಾರದ ಟಾಸ್ಕ್‌ಗಳು ವಿಭಿನ್ನವಾಗಿದ್ದು, ಕ್ಯಾಪ್ಟನ್ ಮಂಜು ಅವರ ಸಾಮ್ರಾಜ್ಯದಲ್ಲಿ ದಿನಕ್ಕೊಂದು ಟ್ವಿಸ್ಟ್‌ಗಳು ಸಿಗುತ್ತಾ ಇದೆ.
ಬಿಗ್ ಬಾಸ್ ಸೀಸನ್ 11 ಈ ವಾರದ ನಾಮಿನೇಷನ್ ಪ್ರಕ್ರಿಯೆ ಆರಂಭವಾಗಿದೆ. ನಾಮಿನೇಟ್ ಮಾಡುವಾಗ ಚೈತ್ರಾ ಅವರು ಮೊದಲಿಗೆ ಗೋಲ್ಡ್ ಸುರೇಶ್ ಅವರನ್ನ ಮನೆಯಿಂದ ಹೊರಗೆ ಕಳುಹಿಸಲು ಆಯ್ಕೆ ಮಾಡಿದ್ದಾರೆ.
ಸುರೇಶ್ ಅವರನ್ನ ನಾಮಿನೇಟ್ ಮಾಡುವಾಗ ಚೈತ್ರಾ ಅವರು ಕೊಟ್ಟ ಕಾರಣಕ್ಕೆ ಮಂಜು ಅವರು ಸಖತ್ ಕಾಮಿಡಿ ಮಾಡಿದ್ದಾರೆ. ಹರಾಜಿನಲ್ಲಿ ನನ್ನ ತಂಡ ನನ್ನನ್ನ ತೆಗೆದುಕೊಂಡಿರೋದಿಲ್ಲ ಅದು ನನಗೆ ತುಂಬಾ ಬೇಜಾರ್ ತಂದಿರುತ್ತೆ ಎಂದಾಗ ಮಹಾರಾಜ ಮಂಜು ಅವರು ಇಡೀ ತಂಡವನ್ನ ನಾಮಿನೇಷನ್ ಮಾಡುತ್ತಾ ಇದ್ದೀರಾ, ಸುರೇಶ್ ಅವರನ್ನ ನಾಮಿನೇಟ್ ಮಾಡ್ತಾ ಇದ್ದೀರಾ ಎಂದು ಕೇಳಿದ್ದಾರೆ. ಮಂಜು ಅವರ ಗಿಚ್ಚಿ ಗಿಲಿಗಿಲಿ ಮಾತಿಗೆ ಶಿಶಿರ್, ಶೋಭಾ, ತ್ರಿವಿಕ್ರಮ್, ಭವ್ಯ, ಗೌತಮಿ ಅವರು ಬಿದ್ದು, ಬಿದ್ದು ನಕ್ಕಿದ್ದಾರೆ.
ಚೈತ್ರಾ V/S ರಜತ್ ಫೈಟ್!
ನಾಮಿನೇಷನ್ ಪ್ರಕ್ರಿಯೆಯಲ್ಲಿ ಚೈತ್ರಾ ಅವರು ರಜತ್ ಅವರಿಗೆ ಟಾಂಗ್ ಕೊಡಲು ಹೋಗಿದ್ದಾರೆ. ರಜತ್ ಅವರು ಪ್ರತಿ ಬಾರಿ ಬಾಸ್, ಬಾಸ್ ಅಂದಾಗ ಅದರಲ್ಲೊಂದು ವ್ಯಂಗ್ಯ ಕಾಣುತ್ತೆ. ಮನೆಯಿಂದ ಹೊರಗಡೆ ಹೋಗೋದಕ್ಕೆ ರೆಡಿ ಆಗಿದ್ದೀನಿ ಅಂತ ಒಪ್ಪಿಕೊಂಡಿದ್ದಾರೆ ಎಂದಿದ್ದಾರೆ.
ಚೈತ್ರಾ ಅವರ ಮಾತಿಗೆ ರೊಚ್ಚಿಗೆದ್ದ ರಜತ್, ಈವಾಗಲೂ ಹೇಳ್ತೀನಿ ನಮ್ಮ ಬಾಸ್ ಇವರು. ಬರೀ ಬಾಸ್ ಅಂದಿದ್ದಕ್ಕೆ ಮನೆಯಿಂದ ಆಚೆ ಕಳುಹಿಸುತ್ತಾರಂತೆ ಅದಕ್ಕೆ ನಮ್ಮ ಬಾಸ್ ಇವ್ರು. ಬಾಸ್ ನಾನು ಈಗಲೂ ಹೇಳುತ್ತೇನೆ ಕೇಳಿಸಿಕೊಳ್ಳಿ. ನಿಮ್ಮನ್ನ ಮನೆಯಿಂದ ಹೊರಗೆ ಕಳುಹಿಸೋವರೆಗೂ ನಾನು ಹೋಗಲ್ಲ ಬಾಸ್ ಎಂದು ಸವಾಲು ಹಾಕಿದ್ದಾರೆ.
ಇದನ್ನೂ ಓದಿ: BBK11: ಬಿಗ್ ಬಾಸ್ ಮಹಾರಾಜನ ಮೇಲೆ ಮಸಲತ್ತು.. ಹನು-ಧನು ಜೋಡಿ ಸಿಡಿದೆದ್ದ ಮೇಲೆ ಏನಾಗುತ್ತೆ?
ಈ ವಾರದ ನಾಮಿನೇಷನ್ ಬಿಗ್ ಬಾಸ್ ಮನೆಯಲ್ಲಿ ಹೊಸ ಕಿಚ್ಚು ಹಚ್ಚಿದ್ದು, ಯಾರೆಲ್ಲಾ ನಾಮಿನೇಟ್ ಆಗುತ್ತಾರೆ ಅನ್ನೋದು ಸದ್ಯದಲ್ಲೇ ಗೊತ್ತಾಗಲಿದೆ. ಕಳೆದ ಸೇಫ್ ಆದವರು ಬಹಳ ಎಚ್ಚರಿಕೆಯಿಂದ ಆಟ ಆಡುತ್ತಿದ್ದು, ಯಾರನ್ನ ಮನೆಯಿಂದ ಹೊರಗೆ ಕಳುಹಿಸಬೇಕು ಅನ್ನೋ ಮಸಲತ್ತು ಜೋರಾಗಿ ನಡೆಯುತ್ತಾ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ