/newsfirstlive-kannada/media/post_attachments/wp-content/uploads/2024/10/Bigg-boss-Season-11-11.jpg)
ಬಿಗ್ ಬಾಸ್ ಸೀಸನ್ 11ಕ್ಕೆ ಇಂದು ಅತಿ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಈ ವಾರ ಯಾರೆಲ್ಲಾ ನಾಮಿನೇಟ್ ಆಗ್ತಾರೆ. ಯಾರು ಬಚಾವ್ ಆಗ್ತಾರೆ ಅನ್ನೋ ಟಾಸ್ಕ್ ಮತ್ತು ಗೇಮ್‌ಗಳು ನಡೆಯುತ್ತಿತ್ತು. ಆದರೆ ಮನೆಯ ನರಕ ನಿವಾಸಿಗಳು ಮಾಡಿದ ಎಡವಟ್ಟಿಗೆ ಮನೆಯ ಎಲ್ಲಾ ಸದಸ್ಯರಿಗೂ ಕಠಿಣ ಶಿಕ್ಷೆಯಾಗಿದೆ. ಬಿಗ್ ಬಾಸ್ ಸೀಸನ್ 11ರ ಗೇಮ್‌ಗೆ ಹೊಚ್ಚ ಹೊಸ ತಿರುವು ಸಿಕ್ಕಿದೆ.
ಇದನ್ನೂ ಓದಿ: BBK11: ಎದುರಾಳಿ ಯಾರೇ ಇರಲಿ ತುಳಿದೇ ಹೋಗಬೇಕು.. ಗೌತಮಿ, ಐಶ್ವರ್ಯ ಜೊತೆ ಭವ್ಯಾ ಗುದ್ದಾಟ!
ಬಿಗ್ ಬಾಸ್ ಮನೆಯಲ್ಲಿ ನಡೆಯುವ ಟಾಸ್ಕ್‌ಗಳಿಗೆ ಗಾರ್ಡನ್ ಏರಿಯಾದಲ್ಲಿ ಪ್ರಾಪರ್ಟಿ ಹಾಗೂ ಅಗತ್ಯವಾದ ವಸ್ತುಗಳನ್ನು ರಹಸ್ಯವಾಗಿ ಇಡಲಾಗುತ್ತದೆ. ಬಿಗ್ ಬಾಸ್ ರೂಲ್ಸ್ ಬುಕ್‌ನಲ್ಲಿ ತಿಳಿಸುವವರೆಗೂ ಅದನ್ನು ಯಾವ ಸ್ಪರ್ಧಿಗಳಿಗೂ ತಿಳಿಸಲು ಬಯಸುವುದಿಲ್ಲ. ಇದು ಬಿಗ್ ಬಾಸ್ ಮನೆಯಲ್ಲಿರುವ ಬಹಳ ಪ್ರಮುಖವಾದ ನಿಯಮ.
ಮನೆಯ ಸ್ಪರ್ಧಿಗಳಿಗೆ ಟಾಸ್ಕ್ ನೀಡುವ ಮುಂಚೆ ಬಿಗ್ ಬಾಸ್ ಮನೆಗೆ Blinds down (ಪರದೆ) ಎಳೆಯಲಾಗುತ್ತದೆ. ಪರದೆ ಎಳೆದ ಸಮಯದಲ್ಲಿ ಮನೆಯ ಯಾವೊಬ್ಬ ಸದಸ್ಯರು ಅದನ್ನು ಮೀರಿ ಇಣುಕಿ ನೋಡುವಂತಿಲ್ಲ. ಆ ಕಡೆ ಮುಖವಾಡುವಂತಿಲ್ಲ. ಆದರೆ ಇವತ್ತು ಬಿಗ್ ಬಾಸ್ ಮನೆಯಲ್ಲಿ ಅತಿ ದೊಡ್ಡ ಎಡವಟ್ಟು ಆಗಿದೆ.
ನರಕ ನಿವಾಸಿಗಳಾದ ಮಾನಸಾ, ಮೋಕ್ಷಿತಾ ಹಾಗೂ ಶಿಶಿರ್ ಬಿಗ್ ಬಾಸ್ ಮನೆಯಲ್ಲಿ ಪರದೆ ಎಳೆದಿದ್ದರೂ ಗಾರ್ಡನ್ ಏರಿಯಾ ಕಡೆಗೆ ಹೋಗಿ ಬಂದಿದ್ದಾರೆ. ಮಾನಸಾ ಅವರಂತೂ ಅಲ್ಲಿ ನೋಡಿ ಬಂದ ಟಾಸ್ಕ್ ಪ್ರಾಪರ್ಟಿ ಬಗ್ಗೆ ಸ್ಪರ್ಧಿಗಳ ಜೊತೆ ಚರ್ಚಿಸಿದ್ದಾರೆ. ಮುಂದಿನ ಟಾಸ್ಕ್ ಗೇಮ್ ಸೊಂಟಕ್ಕೆ ಬೆಲ್ಟ್ ಕಟ್ಟಿಕೊಂಡು ಓಡಿ ಹೋಗುವ ತರಹ ಇರೋದು. ನಾಲ್ಕು ಬೆಲ್ಟ್ ಇಟ್ಟಿದ್ದಾರೆ ಎನ್ನುತ್ತಾರೆ.
ರೂಲ್ಸ್ ಬ್ರೇಕ್ ಆಗುತ್ತಿದ್ದಂತೆ ಬಿಗ್ ಬಾಸ್ ಮನೆಯ ಎಲ್ಲಾ ಸ್ಪರ್ಧಿಗಳಿಗೆ ಬಿಗ್ ಶಾಕ್ ಕೊಟ್ಟಿದ್ದಾರೆ. Blinds down ಆಗಿದ್ದಾಗ ಅದರಿಂದ ಆಚೆಗೆ ಇಣುಕಿ ನೋಡವಂತಿಲ್ಲ ಅನ್ನೋದು ಈ ಮನೆಯ ತುಂಬಾ ಮುಖ್ಯವಾದ ನಿಯಮ. ಈಗಷ್ಟೇ ಆ ಮೂಲ ನಿಯಮವನ್ನು ಕೆಲವು ಸದಸ್ಯರು ಉಲ್ಲಂಘಿಸಿದ್ದಾರೆ. ಈ ಕ್ಷಣದಿಂದ ಬಿಗ್ ಬಾಸ್ ಮನೆಯ ಎಲ್ಲಾ ಸದಸ್ಯರನ್ನು ನಾಮಿನೇಟ್ ಮಾಡುತ್ತಿದ್ದಾರೆ ಎಂದಿದ್ದಾರೆ. ಬಿಗ್ ಬಾಸ್ ತೆಗೆದುಕೊಂಡ ಈ ಕಠಿಣ ನಿರ್ಧಾರದಿಂದ ಈ ವಾರದಲ್ಲಿ ಮನೆಯ 16 ಸದಸ್ಯರು ನೇರವಾಗಿ ನಾಮಿನೇಟ್ ಆಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ