/newsfirstlive-kannada/media/post_attachments/wp-content/uploads/2024/12/BBK11-Shobitha-Shetty.jpg)
ಕನ್ನಡ ಕಿರುತೆರೆಯ ಬಿಗ್ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 11ಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಈ ವಾರದ ಎಲಿಮಿನೇಷನ್ ಅಚ್ಚರಿ ರೀತಿಯಲ್ಲಿ ನಡೆಿದಿದೆ. ಈ ಮನೆಯಲ್ಲಿ ಇನ್ನು ನನಗೆ ಉಳಿಯಲು ಸಾಧ್ಯವಿಲ್ಲ ಎಂದು ಕಣ್ಣೀರು ಹಾಕಿದ್ದ ಶೋಭಾ ಶೆಟ್ಟಿ ಅವರು ಕೊನೆಗೂ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ.
ಸೂಪರ್ ಸಂಡೇ ವಿಥ್ ಬಾದ್ ಷಾ ಎಪಿಸೋಡ್‌ನಲ್ಲೇ ಎಲಿಮಿನೇಷನ್‌ಗೆ ಹೊಸ ಟ್ವಿಸ್ಟ್ ಸಿಕ್ಕಿತ್ತು. ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದ ಶೋಭಾ ಶೆಟ್ಟಿ ಅವರು ಅತ್ತು ಕರೆದು ನಾನು ಈ ಮನೆಯಲ್ಲಿ ಇನ್ನು ಇರೋದಕ್ಕೆ ಆಗುತ್ತಿಲ್ಲ. ನನಗೆ ವೋಟ್ ಹಾಕಿದವರಿಗೆ ಕ್ಷಮೆ ಕೇಳುತ್ತೇನೆ ಎಂದು ಕಣ್ಣೀರು ಹಾಕಿದ್ದರು.
ಇದನ್ನೂ ಓದಿ: ನಟಿ ಶೋಭಿತಾ ಶಿವಣ್ಣ ಕೇಸ್‌ಗೆ ಮೇಜರ್ ಟ್ವಿಸ್ಟ್; ಬೆಡ್ ರೂಂನಲ್ಲಿ ಎರಡೇ ಸಾಲಿನ ಡೆ*ತ್ ನೋಟ್ ಪತ್ತೆ!
ನ್ಯೂಸ್ ಫಸ್ಟ್‌ಗೆ ಸಿಕ್ಕ ಮಾಹಿತಿ ಪ್ರಕಾರ ಈ ವಾರದ ಎಲಿಮಿನೇಷನ್ ವಿಭಿನ್ನವಾಗಿದೆ. ಶೋಭಾ ಶೆಟ್ಟಿ ಅವರಿಗೆ ಬಾಗಿಲು ತೆರೆದ ಬಿಗ್ ಬಾಸ್ ಹೊರ ಹೋಗುವಂತೆ ಹೇಳಿದ್ದಾರೆ. ಅಚ್ಚರಿ ರೀತಿಯಲ್ಲಿ ಶೋಭಾ ಶೆಟ್ಟಿ ಅವರು ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದು, ಉಳಿದವರ ಆಟ ರೋಚಕವಾಗಿದೆ. ಬಿಗ್ ಬಾಸ್ ಮನೆ ಈ ವಾರ 2 ಟಿವಿ ವಾಹಿನಿಗಳಾಗಿ ಪರಿವರ್ತನೆಗೊಂಡಿದ್ದು ಮನರಂಜನೆ ಜೋರಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ