BBK11: ಬಿಗ್ ಬಾಸ್ ಮನೆಯನ್ನೇ ‘ಅಲ್ಲಾಡಿಸಿದ’ ಶೋಭಾ ಆರ್ಭಟ; ಉಗ್ರಂ ಮಂಜು ಪ್ಲ್ಯಾನ್ ಫೇಲ್ ಆಯ್ತಾ?

author-image
admin
Updated On
BBK11: ಬಿಗ್ ಬಾಸ್ ಮನೆಯನ್ನೇ ‘ಅಲ್ಲಾಡಿಸಿದ’ ಶೋಭಾ ಆರ್ಭಟ; ಉಗ್ರಂ ಮಂಜು ಪ್ಲ್ಯಾನ್ ಫೇಲ್ ಆಯ್ತಾ?
Advertisment
  • ಕ್ಯಾಪ್ಟನ್ ಆಗಲು ಶೋಭಾ ಅವರು ಅನರ್ಹರು ಎಂದ ಮಂಜು
  • ಮಂಜು ‘ಅಲ್ಲಾಡ್ಸಿದ್ದು’ ಅನ್ನೋ ಮಾತಿಗೆ ಶೋಭಾ ಕೆರಳಿ ಕೆಂಡ
  • ಶೋಭಾ ಹಾಗೂ ಮಂಜು ಅವರ ಗಲಾಟೆಗೆ ಎಲ್ಲರೂ ಥಂಡಾ, ಥಂಡಾ!

ಸತತ 50 ದಿನಗಳನ್ನು ಪೂರೈಸಿರುವ ಬಿಗ್ ಬಾಸ್ ಸೀಸನ್ 11 ಮನೆಯ ವಾತಾವರಣ ಈಗ ಸಂಪೂರ್ಣ ಬದಲಾಗಿದೆ. 2 ವೈಲ್ಡ್ ಕಾರ್ಡ್ ಎಂಟ್ರಿಯ ಜೊತೆಗೆ ಉಳಿದವರ ಆಟದ ವೈಖರಿಗೆ ಹೊಸ ತಿರುವು ಸಿಕ್ಕಿದೆ. ಈ ವಾರದ ನಾಮಿನೇಷನ್ ಪ್ರಕ್ರಿಯೆಯ ಒಂದೊಂದು ಟಾಸ್ಕ್ ಕೂಡ ಒಂದೊಂದು ಜಗಳಕ್ಕೆ ವೇದಿಕೆ ಆಗುತ್ತಿದೆ.

ಬಿಗ್ ಬಾಸ್ ಸೀಸನ್ 11 ಕೂಗಾಟ, ಗಲಾಟೆ, ಹೊಡೆದಾಟದಿಂದಲೇ ಅತಿ ಹೆಚ್ಚು ಸದ್ದು ಮಾಡುತ್ತಿದೆ. ಈ ವಾರದಲ್ಲೂ ಸದಸ್ಯರ ಗಲಾಟೆ ಮತ್ತಷ್ಟು ಜೋರಾಗಿದೆ. ವೈಲ್ಡ್ ಕಾರ್ಡ್‌ ಎಂಟ್ರಿಯಾದವರ ಜೊತೆ ಮನೆಯ ಉಳಿದ ಸದಸ್ಯರು ತಮ್ಮ ಫೈಟ್ ಆರಂಭಿಸಿದ್ದಾರೆ.

ಇದನ್ನೂ ಓದಿ: BBK11: ಬಿಗ್​ಬಾಸ್​ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದು ಇವರೇ ನೋಡಿ 

ವೈಲ್ಡ್ ಕಾರ್ಡ್ ಎಂಟ್ರಿಯಾದ ರಜತ್ ಹಾಗೂ ಶೋಭಾ ಅವರ ಪೈಕಿ ಈ ಮನೆಯ ಕ್ಯಾಪ್ಟನ್ ಆಗಲು ಯಾರು ಅನರ್ಹರು ಎಂದು ಹೇಳುವ ಟಾಸ್ಕ್ ಅನ್ನು ಬಿಗ್ ಬಾಸ್ ನೀಡಿದೆ. ಇಂದು ಬಿಗ್ ಬಾಸ್ ಮನೆಯ ಸದಸ್ಯರು ಶೋಭಾ ಹಾಗೂ ರಜತ್ ಅವರ ಪೈಕಿ ತಂಡದ ನಾಯಕರಾಗಲು ಯಾರು ಅನರ್ಹರು ಎಂದು ಆರಿಸಬೇಕು.

publive-image

ಉಗ್ರಂ ಮಂಜು ಅವರು ರೂಲ್ಸ್ ಅಂಡ್ ರೆಗ್ಯೂಲೇಷನ್ ಏನು ಇರುತ್ತೋ ಅದನ್ನ ಎಲ್ಲೋ ಅಲ್ಲಾಡ್ಸಿದ್ದು ಶೋಭಾ ಅವರು ಎಂದಿದ್ದಾರೆ. ಮಂಜು ಅವರ ಅಲ್ಲಾಡ್ಸಿದ್ದು ಅನ್ನೋ ಮಾತಿಗೆ ಶೋಭಾ ಅವರು ಕೆರಳಿ ಕೆಂಡವಾಗಿದ್ದಾರೆ. ಅಲ್ಲಾಡ್ಸೋದು ಗಿಲ್ಲಾಡ್ಸೋದು ಅಂದ್ರೆ ಏನು? ಆ ಯಪ್ಪನಿಗೆ ಕ್ಲಾರಿಟಿಯೇ ಇಲ್ಲ. ನಾನ್ ಸೆನ್ಸ್‌ ರೀಸನ್ ಕೊಡುತ್ತಾ ಇದ್ದೀರಾ. ಕೇಳಿಸಿಕೊಳ್ಳಿ, ಮರ್ಯಾದೆ ಕಳೆದುಕೊಳ್ಳಬೇಡಿ ಎಂದು ಕೂಗಾಡಿದ್ದಾರೆ.
ಶೋಭಾ ಅವರ ಕೂಗಾಟಕ್ಕೆ ಉಗ್ರಂ ಮಂಜು ಕೂಡ ತಕ್ಕ ಉತ್ತರ ನೀಡಿದ್ದಾರೆ. ಕ್ಲಾರಿಟಿನೇ ಹೇಳುತ್ತಾ ಇರೋದು, ಏನ್ ಕ್ಲಾರಿಟಿ ಇಲ್ಲ, ಯಾಕೆ ಕ್ಲಾರಿಟಿ ಇಲ್ಲ. ಕಿರುಚ ಬೇಡ್ರಿ ಹೇಳ್ರಿ ಇಲ್ಲೇ ಇದ್ದೀನಿ ಹೇಳ್ರಿ ಹೇಳಿ ಎಂದು ಎದುರು ನಿಂತಿದ್ದಾರೆ.

ಶೋಭಾ ಹಾಗೂ ಮಂಜು ಅವರ ಈ ಗಲಾಟೆ ಮಧ್ಯೆ ಧನರಾಜ್ ಹಾಗೂ ಹನುಮಂತ ಹೆಂಗ್ ಮಾತಾಡುತ್ತಾಳೋ ಯಪ್ಪಾ ಎಂದು ತಮ್ಮದೇ ರೀತಿಯಲ್ಲಿ ಮಾತನಾಡಿದ್ದಾರೆ. ಇದೇ ಗಲಾಟೆಯಲ್ಲಿ ಬಿಗ್ ಬಾಸ್ ಮನೆಯ ಆಟ ಮತ್ತಷ್ಟು ರೋಚಕವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment