/newsfirstlive-kannada/media/post_attachments/wp-content/uploads/2024/12/BBK11_SUDEEP.jpg)
ಕಿಚ್ಚ ಸುದೀಪ್ ಅವರು ನಡೆಸಿಕೊಡುವ ಬಿಗ್ ಬಾಸ್ ಮನೆ ರಣರಂಗವಾಗಿದೆ. ಸ್ಪರ್ಧಿಗಳಲ್ಲಿ ದ್ವೇಷ ಮನೆ ಮಾಡಿದ್ದು ಒಬ್ಬರ ಮೇಲೆ ಒಬ್ಬರು ಕೋಪ- ತಾಪ ತೋರಿಸುತ್ತಿದ್ದಾರೆ. 12ನೇ ವಾರದ ಹೊಸ್ತಿಲಲ್ಲಿ ಇರುವ ಬಿಗ್​ಬಾಸ್ ಈಗ ಹೊಸ ರಂಗು ಪಡೆದುಕೊಂಡಿದೆ. ಸುದೀಪ್ ಅವರ ಮುಂದೆಯೇ ಸ್ಪರ್ಧಿಗಳು ಸಖತ್ ಆಗಿಯೇ ಪಂಚ್, ಕಿಕ್ ಕೊಟ್ಟು ತಮ್ಮ ಸಿಟ್ಟು, ಕೋಪವನ್ನು ಹೊರ ಹಾಕಿದ್ದಾರೆ.
ಮನೆಯಲ್ಲಿ ಮನಸುಗಳು ಹೊಡೆದು ಹೋಗಿರುವುದು ಕಿಚ್ಚ ಕೊಟ್ಟ ಟಾಸ್ಕ್​ನಿಂದ ಗೊತ್ತಾಗಿದೆ. ಸೂಪರ್ ಸಂಡೇ ವಿತ್ ಬಾದ್​ಷಾ ಸುದೀಪ್ ಜೊತೆಯಲ್ಲಿ ಎಲ್ಲರ ಅತಂರಂಗ ಬಟಾಬಯಲು ಆಗಿದೆ. ನನ್ನ ಮೇಲೆ ಇಷ್ಟೊಂದು ಕೋಪ ಇಟ್ಟುಕೊಂಡಿದ್ದರಾ ಇವರು ಎಂದು ಅವರು ಅವರೇ ಮನಸಲ್ಲಿ ಅಂದುಕೊಂಡಿದ್ದಾರೆ. ಏಕೆಂದರೆ ನಿಮಗೆ ಕೋಪ ಇರುವ ಸ್ಪರ್ಧಿಯ ಫೋಟೋಗೆ ಎಷ್ಟು ಬೇಕಾದರೂ ಹೊಡೆಯಬಹುದು, ಗುದ್ದಬಹುದು ಎಂದು ಸುದೀಪ್ ಹೇಳುತ್ತಿದ್ದಂತೆ ವಿರೋಧಿಗಳ ಫೋಟೋಗೆ ಪಂಚ್​ ಮೇಲೆ ಪಂಚ್ ಮಾಡಿದ್ದಾರೆ.
ಇದನ್ನೂ ಓದಿ: BBK11; ಮನೆಯಲ್ಲಿ ದ್ವೇಷ ದ್ವೇಷ.. ಕಿಚ್ಚ ಸುದೀಪ್​ ಮುಂದೆಯೇ ಸ್ಪರ್ಧಿಗಳ ರೋಷ, ಆಕ್ರೋಶ ಹೇಗಿತ್ತು?
/newsfirstlive-kannada/media/post_attachments/wp-content/uploads/2024/12/BBK_11_MOKSHITHA.jpg)
ಉಗ್ರಂ ಮಂಜು ಮೇಲೆ ಮನೆಯಲ್ಲಿ ಮೂವರು ದ್ವೇಷವನ್ನು ಕಾರಿದ್ದಾರೆ. ಶಿಶಿರ್, ಮೋಕ್ಷಿತಾ ಹಾಗೂ ಚೈತ್ರಾ ಇವರೆಲ್ಲಾ ಮಂಜುಗೆ ಫುಲ್ ಶಾಕ್ ಕೊಟ್ಟಿದ್ದಾರೆ. ಅವರು ಏನೇನು ಮಾಡಿದ್ದರು ಎಂದು ಹೇಳಿ ಕಿಕ್ ಮಾಡಿದ್ದಾರೆ. ಮೋಕ್ಷಿತಾ ಅಂತೂ ಮಂಜು ಹೇಳಿದ ಅದೊಂದು ಮಾತಿನಿಂದ ಒಂದು ದಿನ ಫುಲ್ ಹೊರಗೆ ಕುಳಿತುಕೊಂಡು ಅತ್ತಿದ್ದೀನಿ ಎಂದು ದ್ವೇಷ ಹೊರ ಹಾಕಿದ್ದಾರೆ.
ಈ ಮೂವರ ಬಳಿಕ ಅಖಾಡಕ್ಕೆ ಇಳಿದ ಉಗ್ರಂ ಮಂಜು ನೇರಾ ನೇರ ಶಿಶರ್ ಅವರನ್ನು ಟಾರ್ಗೆಟ್ ಮಾಡಿದ್ದಾರೆ. ಮಾತಿನ ಏಟಿನ ಜೊತೆಗೆ ಫೋಟೋಗೆ ಪಂಚ್ ಕೂಡ ಮಾಡಿದ್ದಾರೆ. ಹೆಂಗಬೇಕೋ ಹಂಗೆ ವಿಚಾರ ತಿರುಗಿಸುವ ಬುದ್ಧಿ ಶಿಶಿರ್​ಗಿದೆ ಎಂದಿದ್ದಾರೆ. ಗೇಮ್​ಗಳಲ್ಲಿ ಏನನ್ನು ಕಿಸಿಯದೇ ಅಡಿಗೆ ಮನೆಯಲ್ಲೇ ನಾಲ್ಕೈದು ಮಂದಿ ಮುಂದೆ ಕಿಸಿಯುತ್ತಿರುತ್ತಾರೆ. ಇಲ್ಲಿ ಯಾರು ಚಿಕ್ಕವರಲ್ಲ, ಯಾರೂ ದಡ್ಡರು ಅಲ್ಲ ಎನ್ನುತ್ತಾ ಮಂಜು ಪಂಚ್ ಮಾಡಿದ್ದಾರೆ.
ಇನ್ನು ಇಂದು ರಾತ್ರಿ ಈ ಆಟದ ಘಮ್ಮತ್ತು ಏನು ಎಂಬುದು ಎಲ್ಲ ತಿಳಿದು ಬರಲಿದೆ. ಯಾಕೆ ಅವರೆಲ್ಲ ಸ್ಪರ್ಧಿಗಳ ಫೋಟೋ ಆಯ್ಕೆ ಮಾಡಿಕೊಂಡು ಹೊಡೆದರು ಎನ್ನುವುದಕ್ಕೆ ಸಂಪೂರ್ಣ ಉತ್ತರ ಸಿಗಲಿದೆ. ಇದರ ಜೊತೆಗೆ ಯಾರು ಬಿಗ್ ಬಾಸ್ ಮನೆಯಿಂದ ಈ ವಾರ ಹೊರಕ್ಕೆ ಬರುವುದು ಎನ್ನುವುದು ಬಿಗ್ ಸಸ್ಪೆನ್ಸ್ ಆಗಿದೆ. ಇದಕ್ಕೂ ಸೂಪರ್ ಸಂಡೇ ಎಪಿಸೋಡ್​​ನಲ್ಲಿ ಆನ್ಸರ್ ಸಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us