BBK11: ಈ ವಾರ ಬಿಗ್ ಬಾಸ್ ಮನೆಯಿಂದ ಔಟ್ ಆಗಿದ್ದು ಇವರೇ ನೋಡಿ!

author-image
admin
Updated On
BBK11: ಈ ವಾರ ಬಿಗ್ ಬಾಸ್ ಮನೆಯಿಂದ ಔಟ್ ಆಗಿದ್ದು ಇವರೇ ನೋಡಿ!
Advertisment
  • ವಾರದ ಕತೆ ಕಿಚ್ಚನ ಜೊತೆಯಲ್ಲಿ ತ್ರಿವಿಕ್ರಮ್, ಹನುಮಂತ ಸೇಫ್
  • ರಜತ್, ಧನರಾಜ್, ಚೈತ್ರಾ, ಭವ್ಯ ಹಾಗೂ ಶಿಶಿರ್ ಮಧ್ಯೆ ಫೈಟ್
  • 11 ವಾರ ಮುಗಿಸಿ 12ನೇ ವಾರಕ್ಕೆ ಕಾಲಿಡುವ ಸ್ಪರ್ಧಿಗಳು ಯಾರು?

ಬಿಗ್ ಬಾಸ್ ಸೀಸನ್ 11ರ ಮನೆಯಲ್ಲಿ ಇವತ್ತು ಮತ್ತೊಬ್ಬರ ಆಟ ಮುಕ್ತಾಯವಾಗಿದೆ. ಎಲಿಮಿನೇಷನ್ ಟೆನ್ಷನ್ ಮುಕ್ತಾಯವಾಗಿದ್ದು, 12ನೇ ವಾರಕ್ಕೆ ಕಾಲಿಡಲು ಮನೆಯ ಸದಸ್ಯರು ಸಜ್ಜಾಗಿದ್ದಾರೆ. ಸೂಪರ್ ಸಂಡೇ ವಿತ್ ಸುದೀಪ ಎಪಿಸೋಡ್‌ನಲ್ಲಿ ಶಿಶಿರ ಅವರು ಮನೆಯಿಂದ ಹೊರ ಬಂದಿದ್ದಾರೆ.

ಈ ವಾರದ ಟಾಸ್ಕ್‌ಗಳಲ್ಲಿ ಬಿಗ್​ಬಾಸ್​ ಮನೆಯಿಂದ ಆಚೆ ಹೋಗಲು ಒಟ್ಟು 8 ಮಂದಿ ನಾಮಿನೇಟ್ ಆಗಿದ್ದರು. ಭವ್ಯಾ ಗೌಡ, ಶಿಶಿರ್, ತ್ರಿವಿಕ್ರಮ್​, ರಜತ್​, ಧನರಾಜ್​ ಆಚಾರ್ಯ, ಹನುಮಂತ ಹಾಗೂ ಚೈತ್ರಾ ಕುಂದಾಪುರ, ಮೋಕ್ಷಿತಾ ನಾಮಿನೇಟ್​ ಆಗಿದ್ದರು.

publive-image

ವಾರದ ಕತೆ ಕಿಚ್ಚನ ಜೊತೆಯಲ್ಲಿ ತ್ರಿವಿಕ್ರಮ್, ಹನುಮಂತ ಸೇಫ್ ಆಗಿದ್ದರು. ಇದಾದ ಮೇಲೆ ಉಳಿದವರ ಎಲಿಮಿನೇಷನ್ ಪ್ರಕ್ರಿಯೆ ನಡೆದಿತ್ತು. ರಜತ್, ಧನರಾಜ್, ಚೈತ್ರಾ ಕೂಡ ಸೇಫ್ ಆದರು. ಕೊನೆಯದಾಗಿ ಭವ್ಯ ಹಾಗೂ ಶಿಶಿರ್ ಅವರು ಉಳಿದುಕೊಂಡಿದ್ದರು.

ಇದನ್ನೂ ಓದಿ: BREAKING: ಬಿಗ್‌ ಬಾಸ್‌ ಮನೆಯಲ್ಲಿ ಡಬಲ್ ಟ್ವಿಸ್ಟ್‌.. ಗೋಲ್ಡ್‌ ಸುರೇಶ್ ದಿಢೀರ್ ಔಟ್‌! 

ಭವ್ಯ ಹಾಗೂ ಶಿಶಿರ್ ಅವರ ಮಧ್ಯೆ ಈ ವಾರದ ಎಲಿಮಿನೇಷನ್ ರೇಸ್‌ನಲ್ಲಿ ಭವ್ಯ ಬಚಾವ್ ಆಗಿದ್ದಾರೆ. ಅಂತಿಮವಾಗಿ ಶಿಶಿರ್ ಅವರು ಬಿಗ್ ಬಾಸ್ ಮನೆಯಲ್ಲಿ ತಮ್ಮ ಜರ್ನಿಯನ್ನು ಮುಗಿಸಿದ್ದಾರೆ. 11 ವಾರ ಮುಗಿಸಿ 12ನೇ ವಾರಕ್ಕೆ ಕಾಲಿಟ್ಟಿರುವ ಬಿಗ್ ಬಾಸ್ ಮನೆಯಲ್ಲಿ ಸದ್ಯ 11 ಮಂದಿ ಉಳಿದುಕೊಂಡಿದ್ದಾರೆ. ವೈಯಕ್ತಿಕ ಕಾರಣಗಳಿಂದ ಗೋಲ್ಡ್ ಸುರೇಶ್ ಅವರು ಬಿಗ್ ಬಾಸ್ ಮನೆಯಿಂದ ಹೊರ ನಡೆಯಲಿದ್ದಾರೆ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment