/newsfirstlive-kannada/media/post_attachments/wp-content/uploads/2025/01/KICCHA-SUDEEP-3.jpg)
ಬಿಗ್​​ಬಾಸ್​ ಫಿನಾಲೆಗೆ ಕೇವಲ ಎರಡು ವಾರ ಮಾತ್ರ ಬಾಕಿ ಇದೆ. ವೀಕ್ಷಕರಲ್ಲಿ ಯಾರು ಬಿಗ್​ಬಾಸ್​ ಟೈಟಲ್ ಗೆಲ್ತಾರೆ ಅನ್ನೋ ಕ್ಯೂರಿಯಾಸಿಟಿ ಹೆಚ್ಚಾಗ್ತಿದೆ. ಈಗಾಗಲೇ ಓರ್ವ ಸ್ಪರ್ಧಿ ಹನುಮಂತ ಅವರು ಫಿನಾಲೆಗೆ ಪ್ರವೇಶ ಮಾಡಿದ್ದಾರೆ.
ಅಂದ್ಹಾಗೆ ಈ ವಾರ ನಡೆದ ಟಿಕೆಟ್ ಟು ಫಿನಾಲೆ ಫೈಟ್​ನಲ್ಲಿ ಗೆದ್ದು, ಫಿನಾಲೆಗೆ ಹನುಮಂತ ಗ್ರ್ಯಾಂಡ್ ಎಂಟ್ರಿ ಕೊಟ್ಟಿದ್ದಾರೆ. ಹೀಗಾಗಿ ಬಿಗ್​ಬಾಸ್​ ಮತ್ತಷ್ಟು ರಂಗು ಪಡೆದುಕೊಂಡಿದೆ. ಇದರ ಮಧ್ಯೆ ವೀಕೆಂಡ್ ಬಂದಿದ್ದು, ವೀಕ್ಷಕರು ಕಿಚ್ಚನ ಪಂಚಾಯ್ತಿಯನ್ನು ಕಣ್ತುಂಬಿಕೊಳ್ಳಲಿದ್ದಾರೆ.
ಇದನ್ನೂ ಓದಿ: ಕ್ಯಾಪ್ಟನ್ ರೋಹಿತ್ ಶರ್ಮಾ ಕರಿಯರ್​​ ಅಂತ್ಯಕ್ಕೆ ಮುಹೂರ್ತ ಫಿಕ್ಸ್..!
/newsfirstlive-kannada/media/post_attachments/wp-content/uploads/2025/01/KICCHA-SUDEEP-2.jpg)
ನೂರು ದಿನಗಳ ಕಾಲ ನಡೆದ ರೋಚಕ ಆಟ, ಕಾದಾಟಗಳಿಗೆ ಟ್ವಿಸ್ಟ್​ ಸಿಗುತ್ತಿದೆ. ಈ ವಾರ ಮನೆಯಿಂದ ಹೊರ ಹೋಗಲು ಒಟ್ಟು ಐವರು ನಾಮಿನೇಟ್ ಆಗಿದ್ದಾರೆ. ಭವ್ಯಗೌಡ, ತ್ರಿವಿಕ್ರಮ್, ಧನರಾಜ್, ಮೋಕ್ಷಿತಾ, ಚೈತ್ರಾ ಕುಂದಾಪುರ ಅವರು ಮನೆಯಿಂದ ಹೋಗಲು ನಾಮಿನೇಟ್ ಆಗಿದ್ದಾರೆ. ಯಾರಿಗೆ ಗೇಟ್​ಪಾಸ್ ಸಿಗಲಿದೆ ಅನ್ನೋದು ಕಿಚ್ಚನ ಪಂಚಾಯ್ತಿಯಲ್ಲಿ ಗೊತ್ತಾಗಲಿದೆ.
ಅಲ್ಲದೇ ಇಂದಿನ ಕಿಚ್ಚನ ಎಪಿಸೋಡ್​​ನಲ್ಲಿ ಯಾವೆಲ್ಲ ವಿಚಾರಗಳ ಬಗ್ಗೆ ಚರ್ಚೆ ಆಗಲಿದೆ ಅನ್ನೋದು ತೀವ್ರ ಕುತೂಹಲ ಮೂಡಿಸಿದೆ. ಇಡೀ ವಾರ ಟಿಕೆಟ್​ ಟು ಫಿನಾಲೆ ಟಾಸ್ಕ್​ ನಡೆದಿದೆ. ಈ ವೇಳೆ ನಡೆದ ಸರಿ ತಪ್ಪುಗಳು ಮತ್ತು ಫಿನಾಲೆಗೆ ಎಂಟ್ರಿ ನೀಡಲು ಸ್ಪರ್ಧಿಗಳನ್ನು ಮತ್ತಷ್ಟು ಹುರಿದುಂಬಿಸುವ ಕೆಲಸವನ್ನು ಮಾಡಲಿದ್ದಾರೆ.
ಇದನ್ನೂ ಓದಿ: ಮೆಲೋಡಿ ವೈರಲ್​ ಮೀಮ್ಸ್​, ಮೊದಲ ಬಾರಿ ಮೌನ ಮುರಿದ ಪ್ರಧಾನಿ.. ಮೋದಿ ಹೇಳಿದ್ದೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us