Advertisment

BBK11: ತ್ರಿವಿಕ್ರಮ್‌ ಮೇಲೆ ಬೆಂಕಿಯಾದ ಉಗ್ರಂ ಮಂಜು.. ಬಿಗ್ ಬಾಸ್ ಮನೆಯೊಳಗೆ ಮತ್ತೆ ಕಿಚ್ಚು; ಆಗಿದ್ದೇನು?

author-image
Veena Gangani
Updated On
BBK11: ತ್ರಿವಿಕ್ರಮ್‌ ಮೇಲೆ ಬೆಂಕಿಯಾದ ಉಗ್ರಂ ಮಂಜು.. ಬಿಗ್ ಬಾಸ್ ಮನೆಯೊಳಗೆ ಮತ್ತೆ ಕಿಚ್ಚು; ಆಗಿದ್ದೇನು?
Advertisment
  • ಬಿಗ್​ಬಾಸ್​ ರೂಲ್​ ಬುಕ್​ ಬಗ್ಗೆ ಮಾತನಾಡಿದ ಉಗ್ರಂ ಮಂಜು
  • ನೀವು ಮೊದಲು ಹುಲಿ ಅಂತ ತೋರಿಸಿ ಎಂದು ತ್ರಿವಿಕ್ರಮ್ ಸವಾಲು
  • ಬಿಗ್​ಬಾಸ್​ ಸೀಸನ್​ 11 ಮನೆಯಲ್ಲಿ ಮತ್ತೆ ಜಿದ್ದಿಗೆ ಬಿದ್ದ ಸ್ಪರ್ಧಿಗಳು

ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​ 11 ನಾಲ್ಕನೇ ವಾರಕ್ಕೆ ಕಾಲಿಟ್ಟಿದೆ. ಕಳೆದ ಮೂರು ವಾರದಲ್ಲಿ ಬಿಗ್​ ಮನೆಯಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ಅಚ್ಚರಿಯ ರೀತಿಯಲ್ಲಿ ಲಾಯರ್​ ಜಗದೀಶ್ ಹಾಗೂ ರಂಜಿತ್ ಬಿಗ್​ಬಾಸ್ ಮನೆಯಿಂದ ಔಟ್ ಆಗಿದ್ದಾರೆ.

Advertisment

ಲಾಯರ್​ ಜಗದೀಶ್​ ಅವರು ಬಿಗ್​ಬಾಸ್​ ಮನೆಯಿಂದ ಆಚೆ ಬಂದ ಬೆನ್ನಲ್ಲೇ ಸ್ಪರ್ಧಿಗಳ ಮಧ್ಯೆ ಬೆಂಕಿ ಹೊತ್ತಿಕೊಂಡಿದೆ. ಸದ್ಯ ರಿಲೀಸ್ ಆದ ಹೊಸ ಪ್ರೋಮೋದಲ್ಲಿ ಉಗ್ರಂ ಮಂಜು ಹಾಗೂ ತ್ರಿವಿಕ್ರಮ್ ನಡುವೆ ಜೋರು ಗಲಾಟೆಯಾಗಿದೆ. ತ್ರಿವಿಕ್ರಮ್ ನಾಮಿನೇಷನ್‌ ಪ್ರಕ್ರಿಯೆಯಲ್ಲಿ ಉಗ್ರಂ ಮಂಜು ಅವರ ಬಗ್ಗೆ ಮಾತಾಡಿದ್ದಾರೆ.

ಇದನ್ನೂ ಓದಿ: ಸ್ಮಾರ್ಟ್​ಫೋನ್​ ಪರದೆ ಮೇಲೆ ಗ್ರೀನ್​ ಲೈನ್​​ ಸಮಸ್ಯೆ.. ಕಂಪನಿ ನೀಡಿದೆ ಉಚಿತವಾಗಿ ಸರಿಪಡಿಸುವ ಅವಕಾಶ 

ನನ್ನ ಪ್ರಕಾರ ಮಂಜಣ್ಣ ಒಂದು ಕಡೆ ಕಾರ್ಬನ್ ಆಗಿದ್ದಾರೆ ಅಂತ ಅನಿಸಿತ್ತು. ಇದಕ್ಕೆ ಕೋಪಗೊಂಡ ಮಂಜಣ್ಣ, ನಾನು ಯಾರ ಜೊತೆಗೆ ಕುಳಿತುಕೊಂಡು ಮಾತಾಡಬೇಕು ಅನ್ನೋದು ಬಿಗ್​ಬಾಸ್​ ರೂಲ್​ ಬುಕ್​ನಲ್ಲಿ ಇಲ್ಲ. ಹಾಗಾದ್ರೆ ನಾವು ನಿಮ್ಮ ಹತ್ತಿರ ಬಂದು (ಬಕೆಟ್) ಹಿಡಿಯಬೇಕು ಅಂತ ಮಾತಾಡಿದ್ದಾರೆ. ಆಗ ತ್ರಿವಿಕ್ರಮ್​ ನೀವು ಮೊದಲು ಹುಲಿ ಅಂತ ತೋರಿಸಿ ಆಮೇಲೆ ಬದಲಾಗಿ ಬಿಟ್ಟರೆ ನಾವೇನು ಮಾಡಬೇಕು ಅಂತ ತಿರುಗೇಟು ಕೊಟ್ಟಿದ್ದಾರೆ. ಇದಾದ ಬಳಿಕ ಈ ಇಬ್ಬರ ಮಧ್ಯೆ ಏನೆಲ್ಲಾ ನಡೀತು ಎಂಬು ವಿಚಾರ ಇಂದಿನ ಎಪಿಸೋಡ್​ನಲ್ಲಿ ತಿಳಿದು ಬರಲಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment