BBK11: ಗ್ಯಾಪ್‌ ಅಲ್ಲಿ ಇದೆಲ್ಲಾ ಆಯ್ತಾ.. ಉಗ್ರಂ ಮಂಜುಗೆ ಜಗದೀಶ್ ಕಿಸ್ ಮಾಡಿದ್ರಾ? ಏನಿದರ ಅಸಲಿಯತ್ತು?

author-image
admin
Updated On
BBK11: ಗ್ಯಾಪ್‌ ಅಲ್ಲಿ ಇದೆಲ್ಲಾ ಆಯ್ತಾ.. ಉಗ್ರಂ ಮಂಜುಗೆ ಜಗದೀಶ್ ಕಿಸ್ ಮಾಡಿದ್ರಾ? ಏನಿದರ ಅಸಲಿಯತ್ತು?
Advertisment
  • ಬಿಗ್ ಬಾಸ್ ಮನೆಯಲ್ಲಿ ದೈಹಿಕವಾಗಿ ಹಲ್ಲೆ ಮಾಡಿದ ಸ್ಪರ್ಧಿಗಳು ಔಟ್!
  • ಮುಖಾಮುಖಿಯಾದ ಜಗದೀಶ್ ಹಾಗೂ ಉಗ್ರಂ ಮಂಜು ದೊಡ್ಡ ಜಗಳ
  • ಉಗ್ರಂ ಮಂಜು, ಜಗದೀಶ್ ಅವರ ಅಸಭ್ಯತೆಯ ವಿಡಿಯೋ ವೈರಲ್‌!

ಬಿಗ್ ಬಾಸ್ ಸೀಸನ್ 11 ವಿವಾದಗಳಿಂದಲೇ ಸುದ್ದಿಯಾಗುತ್ತಿದೆ. ಬಿಗ್ ಬಾಸ್ ರೂಲ್ಸ್ ಬ್ರೇಕ್ ಮಾಡಿದ ಮನೆಯ ಸದಸ್ಯರು ಕೈ, ಕೈ ಮಿಲಾಯಿಸಿದ್ದು ತೀವ್ರ ಸಂಚಲನ ಸೃಷ್ಟಿಯಾಗಿದೆ. ಜಗದೀಶ್ ಹಾಗೂ ರಂಜಿತ್ ಗಲಾಟೆಯಿಂದ ಬಿಗ್ ಬಾಸ್ ಮನೆಯ ಆಟ ರಣರಂಗದ ವಾತಾವರಣವನ್ನು ಸೃಷ್ಟಿಸಿದೆ.

ಇದನ್ನೂ ಓದಿ: Breaking: ಬಿಗ್​​ ಬಾಸ್​ನಲ್ಲಿ ಹೊಡೆದಾಡಿಕೊಂಡ ಸ್ಪರ್ಧಿಗಳು! ಜಗದೀಶ್​ ಮತ್ತು ರಂಜಿತ್​ ಔಟ್​ 

ನಿನ್ನೆಯಿಂದಲೂ ಬಿಗ್ ಬಾಸ್ ಮನೆಯಲ್ಲಿ ಅತಿರೇಕದ ಜಗಳ ನಡೆದಿತ್ತು. ರಂಜಿತ್ ಮತ್ತು ಜಗದೀಶ್ ಅವರು ಕೈ, ಕೈ ಮಿಲಾಯಿಸಿದ್ದಾರೆ ಎನ್ನಲಾಗಿದೆ. ಬಿಗ್ ಬಾಸ್ ಮನೆಯಲ್ಲಿ ದೈಹಿಕವಾಗಿ ಹಲ್ಲೆ ಮಾಡಿದ ತಪ್ಪಿಗೆ ಬಿಗ್‌ಬಾಸ್ ಸ್ಪರ್ಧಿ ಜಗದೀಶ್ ಮತ್ತು ರಂಜಿತ್‌ ಇಬ್ಬರೂ ಔಟ್ ಆಗಿದ್ದಾರೆ ಎನ್ನಲಾಗಿದೆ.

publive-image

ರಂಜಿತ್ ಮತ್ತು ಜಗದೀಶ್ ಅವರ ಮಧ್ಯೆ ಜೋರು ಜಗಳ ನಡೆಯುವುದಕ್ಕೆ ಮುಂಚೆ ಬಿಗ್ ಬಾಸ್ ಮನೆಯಲ್ಲಿ ಹಲವರ ಜೊತೆ ಜಗದೀಶ್ ಅವರು ಕಿತ್ತಾಡಿದ್ದರು. ಅದರಲ್ಲಿ ಉಗ್ರಂ ಮಂಜು ನಡುವೆ ದೊಡ್ಡ ಜಗಳ ನಡೆದಿದ್ದು ಬಿಗ್ ಬಾಸ್ ವೀಕ್ಷಕರು ಇದನ್ನ ನೋಡಿ ಶಾಕ್ ಆಗಿದ್ದಾರೆ.

publive-image

ಜಗದೀಶ್ ಹಾಗೂ ಉಗ್ರಂ ಮಂಜು ಅವರ ಜಗಳಕ್ಕೆ ಕಾರಣವೇನು ಅನ್ನೋದು ಇನ್ನೂ ಚರ್ಚೆಯಲ್ಲಿದೆ. ಈ ಗಲಾಟೆಯ ಮಧ್ಯೆ ಸೋಷಿಯಲ್ ಮೀಡಿಯಾದಲ್ಲಿ ಮತ್ತೊಂದು ವಿಡಿಯೋ ವೈರಲ್ ಆಗಿದೆ.
ಬಿಗ್ ಬಾಸ್ ಮನೆಯಲ್ಲಿ ಮುಖಾಮುಖಿಯಾದ ಜಗದೀಶ್ ಹಾಗೂ ಉಗ್ರಂ ಮಂಜು ಅವರು ವಾಗ್ಯುದ್ಧ ನಡೆಸಿದ್ದಾರೆ. ಆದರೆ ವೈರಲ್ ಆದ ವಿಡಿಯೋದಲ್ಲಿ ಉಗ್ರಂ ಮಂಜು ಅವರಿಗೆ ಜಗದೀಶ್ ಅವರು ಕಿಸ್ ಮಾಡಿರೋ ರೀತಿ ಬಿಂಬಿಸಲಾಗಿದೆ. ಅಸಲಿಗೆ ಈ ವಿಡಿಯೋದ ಮೇಲೆ ವೀಕ್ಷಕರಿಗೆ ಅನುಮಾನ ಮಾಡಿದೆ.

ಜಗದೀಶ್ ಹಾಗೂ ಉಗ್ರಂ ಮಂಜು ಮುಖಾಮುಖಿಯಾದ ದೃಶ್ಯವನ್ನು ಬಿಗ್ ಬಾಸ್ ಶೋನಲ್ಲಿ ಪ್ರಸಾರ ಮಾಡಲಾಗಿದೆ. ಆದರೆ ಇಬ್ಬರು ಕಿಸ್ ಮಾಡಿಕೊಂಡ ದೃಶ್ಯ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಮೂಲಕ ಡೀಪ್‌ ಫೇಕ್ ಮಾಡಿರುವ ಸಾಧ್ಯತೆ ಇದೆ. ಬಿಗ್ ಬಾಸ್ ವಿಡಿಯೋವನ್ನು ಡೀಪ್ ಫೇಕ್ ತಂತ್ರಜ್ಞಾನದ ಮೂಲಕ ವಿರೂಪಗೊಳಿಸಿದ್ದು, ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡಲಾಗಿದೆ. ವೈರಲ್ ಆಗಿರೋ ಈ ವಿಡಿಯೋ ಸದ್ಯ ಹೊಸ ಚರ್ಚೆಗೆ ನಾಂದಿಯಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment