/newsfirstlive-kannada/media/post_attachments/wp-content/uploads/2024/12/BBK-11-Rajat-Dhanaraj-4.jpg)
ಬಿಗ್ ಬಾಸ್ ಸೀಸನ್ 11ರ ಮನೆಯಿಂದ ಒಬ್ಬರು ಎಲಿಮಿನೇಟ್ ಆಗಲು ಕೌಂಟ್‌ಡೌನ್ ಶುರುವಾಗಿದೆ. 11ನೇ ವಾರಕ್ಕೆ ಆಟ ಮುಗಿಸುವ ಸ್ಪರ್ಧಿ ಯಾರು ಅನ್ನೋ ಕುತೂಹಲಕ್ಕೆ ಕೆಲವೇ ಗಂಟೆಗಳಲ್ಲಿ ಉತ್ತರ ಸಿಗಲಿದೆ. 10ನೇ ವಾರದ ಕೊನೆಯಲ್ಲಿ ಐಶ್ವರ್ಯ, ಚೈತ್ರಾ ಕುಂದಾಪುರ ಡೇಂಜರ್ ಝೋನ್‌ಗೆ ಹೋಗಿದ್ದು, ಎಲಿಮಿನೇಷನ್ ಆಗಿರಲಿಲ್ಲ. ಆದರೆ ಈ ವಾರ ಒಬ್ಬರಂತೂ ಬಿಗ್‌ಬಾಸ್ ಮನೆಯಿಂದ ಆಚೆ ಬರೋದು ಪಕ್ಕಾ ಆಗಿದೆ.
ಈ ವಾರದ ಟಾಸ್ಕ್‌ನಲ್ಲಿ ಮತ್ತೆ ಬಿಗ್ ಬಾಸ್ ಮನೆಯ ರೂಲ್ಸ್ ಬ್ರೇಕ್ ಮಾಡಲಾಗಿದೆ. ಕಳಪೆ ಪಟ್ಟ ಕಟ್ಟಿಕೊಂಡಿದ್ದ ತ್ರಿವಿಕ್ರಮ್, ಚೈತ್ರಾ ಕುಂದಾಪುರ ಜೈಲಿನಿಂದ ಹೊರಗೆ ಬಂದಿದ್ದಾರೆ. ಜೊತೆಗೆ ರಜತ್, ಧನರಾಜ್ ಅವರ ಹೊಡಿಬಡಿ ಆಟ ಈ ವಾರದ ಪಂಚಾಯ್ತಿಯ ಹಾಟ್ ಟಾಪಿಕ್ ಆಗಿದೆ.
ಮೊದಲಿಗೆ ಪಂಚಾಯ್ತಿ ಆರಂಭಿಸಿರುವ ಕಿಚ್ಚ ಸುದೀಪ್ ಅವರು ಧನರಾಜ್, ರಜತ್ ಅವರಿಗೆ ಚಾಟಿ ಬೀಸಿದ್ದಾರೆ. ನೀವು ಬಿಗ್ ಬಾಸ್ ಮನೆಗೆ ಹುಲಿ, ಸಿಂಹ ಆಗೋಕೆ ಹೋಗಿದ್ದೀರೋ ಅಥವಾ ಮನುಷ್ಯರಾಗಿ ಇರೋಕೆ ಹೋಗಿದ್ದೀರೋ ಎಂದು ಪ್ರಶ್ನಿಸಿದ್ದಾರೆ. ಈ ಮಾತು ಕೇಳಿದ ಮೇಲೆ ಬಿಗ್ ಬಾಸ್ ಅಸಲಿ ಆಟ ಶುರುವಾಗಿದೆ. ಕಿಚ್ಚ ಸುದೀಪ್ ಕೊಟ್ಟ ಟ್ವಿಸ್ಟ್‌ಗೆ ಮನೆ ಮಂದಿಯೆಲ್ಲಾ ಕಕ್ಕಾಬಿಕ್ಕಿ ಆಗಿದ್ದಾರೆ.
ಇದನ್ನೂ ಓದಿ: ಬಿಗ್‌ಬಾಸ್ ಇತಿಹಾಸದಲ್ಲೇ ಅತೀ ದೊಡ್ಡ ರೂಲ್ಸ್ ಬ್ರೇಕ್.. ನಿಯಮಗಳಿಗೆ ಕಿಮ್ಮತ್ತು ಕೊಡದ ಚೈತ್ರ, ತ್ರಿವಿಕ್ರಂ
ರಜತ್, ಧನರಾಜ್ ಇಬ್ಬರಿಗೂ ಕಿಚ್ಚ ಸುದೀಪ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಧನರಾಜ್ ಅವರೇ ರಜತ್ ಅವರ ಬಳಿ ಹೋಗಿ ಕೆನ್ನೆ ಮುಟ್ಟಿ ಪ್ರವೋಕೆ ಮಾಡಿದ್ದೀರಿ. ಧನರಾಜ್ ಕೆನ್ನೆ ತಟ್ಟಿದ್ದು ರಜತ್ ಅವರನ್ನು ಕೆರಳಿಸಿರೋದು ಜಗಳಕ್ಕೆ ಕಾರಣ ಎನ್ನಲಾಗಿದೆ. ನಿಮಗೆ ಅದರ ಅವಶ್ಯಕತೆ ಏನಿತ್ತು ಎಂದು ಸುದೀಪ್ ಪ್ರಶ್ನಿಸಿದ್ದಾರೆ.
ರಜತ್ ಅವ್ರೇ ನಿಮಗೆ ನಾಲಿಗೆ ಮೇಲೆ ನಿಗಾ ಇರಬೇಕು. ನಿಮ್ಮ ಪ್ರಕಾರ ಕೆಟ್ಟ ಮಾತು ಅಂದ್ರೆ ಏನೇನು ಹೇಳ್ಬಿಡಿ. ನಾವು ಬುಕ್ ಮಾಡಿಕೊಳ್ಳೋಕೆ ಹೇಳ್ತೀನಿ ಎಂದು ರಜತ್ ಮಾತಿನ ಅಬ್ಬರಕ್ಕೆ ಲಗಾಮು ಹಾಕಿದ್ದಾರೆ. ಕೊನೆಗೆ ರಜತ್, ಧನರಾಜ್ ಇಬ್ಬರಿಗೂ 5 ನಿಮಿಷ ಟೈಮ್ ಕೊಡ್ತೀವಿ ನಿಮ್ಮಬ್ಬರಿಗೆ ಫಿಸಕಲಿ ಫೈಟ್ ಮಾಡ್ತೀರಾ ಎಂದು ಸುದೀಪ್ ಪ್ರಶ್ನಿಸಿದ್ದಾರೆ.
ಇಷ್ಟೆಲ್ಲಾ ಆದ ಮೇಲೆ ರಜತ್ ಹಾಗೂ ಧನರಾಜ್ ಅವರಿಗೆ ಒಂದು ಪನೀಷ್‌ಮೆಂಟ್ ನೀಡಲಾಗಿದೆ. ರಜತ್ ಅವರನ್ನ ಬೋನಿಗೆ ಹಾಕುತ್ತೇವೆ. ರಜತ್ ಎಲ್ಲಿಗೆ ಹೋಗಬೇಕಂದ್ರೂ ಧನರಾಜ್ ಅವರೇ ಎಳೆದುಕೊಂಡು ಹೋಗಬೇಕು ಅನ್ನೋ ಶಿಕ್ಷೆ ನೀಡಲಾಗಿದೆ. ಕಿಚ್ಚ ಸುದೀಪ್ ಅವರು ಕೊಟ್ಟ ಈ ಸ್ಪೆಷಲ್ ಟಾಸ್ಕ್‌ಗೆ ರಜತ್ ಅವರ ಆರ್ಭಟ, ಧನರಾಜ್ ಅವರ ಹುಡುಗಾಟಕ್ಕೆ ಬ್ರೇಕ್ ಬಿದ್ದಿದೆ.
ಎಲಿಮಿನೇಟ್ ಯಾರಾಗ್ತಾರೆ?
ಈ ವಾರ ಬಿಗ್‌ಬಾಸ್ ಮನೆಯಿಂದ ಆಚೆ ಹೋಗಲು ಒಟ್ಟು 8 ಮಂದಿ ನಾಮಿನೇಟ್ ಆಗಿದ್ದಾರೆ. ಅದರಲ್ಲಿ ಭವ್ಯಾ ಗೌಡ, ಶಿಶಿರ್, ತ್ರಿವಿಕ್ರಮ್, ರಜತ್, ಧನರಾಜ್ ಆಚಾರ್ಯ, ಹನುಮಂತ ಹಾಗೂ ಚೈತ್ರಾ ಕುಂದಾಪುರ ನಾಮಿನೇಟ್ ಆಗಿದ್ದಾರೆ. ಜೊತೆಗೆ ಕ್ಯಾಪ್ಟನ್ ಗೌತಮಿ ಜಾಧವ್ ನೇರವಾಗಿ ಮೋಕ್ಷಿತಾ ಪೈ ನಾಮಿನೇಟ್ ಆಗಿದ್ದಾರೆ. ಇನ್ನೂ ಈ 8 ಮಂದಿ ಪೈಕಿ ಈ ವಾರ ಬಿಗ್‌ಬಾಸ್ ಮನೆಯಿಂದ ಯಾವ ಸ್ಪರ್ಧಿ ಆಚೆ ಹೋಗಲಿದ್ದಾರೆ ಎಂದು ಕಾದು ನೋಡಬೇಕಿದೆ. ಆದರೆ ಇದರ ಮಧ್ಯೆ ಕಳೆದ ವಾರ ಯಾವ ಸ್ಪರ್ಧಿ ಎಲಿಮಿನೇಟ್ ಆಗಿರಲಿಲ್ಲ. ಆದರೆ ಈ ವಾರ ಡಬಲ್ ಎಲಿಮಿನೇಷನ್ ಇರುತ್ತಾ? ಅಥವಾ ಕೊನೆಯ ಕ್ಷಣದಲ್ಲಿ ಮತ್ತೆ ಬಿಗ್‌ಬಾಸ್ ಟ್ವಿಸ್ಟ್ ಕೊಡಲಿದ್ದಾರಾ ಅಂತ ತಿಳಿದು ಬರಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ