/newsfirstlive-kannada/media/post_attachments/wp-content/uploads/2024/12/BBK-11-Eliminated.jpg)
ಕನ್ನಡದ ಬಿಗ್ ಬಾಸ್ ಸೀಸನ್ 11 ಮತ್ತೊಂದು ಗ್ರ್ಯಾಂಡ್ ಫಿನಾಲೆಗೆ ಸಜ್ಜಾಗುತ್ತಿದೆ. ವಾರಗಳು ಕಳೆದಂತೆ ಬಿಗ್ ಬಾಸ್ ಮನೆಯಿಂದ ಸ್ಪರ್ಧಿಗಳು ಒಬ್ಬೊಬ್ಬರಾಗಿ ಔಟ್ ಆಗುತ್ತಿದ್ದಾರೆ. ಉಳಿದ 10 ಮಂದಿ ಸ್ಪರ್ಧಿಗಳಲ್ಲಿ ಮತ್ತೊಂದು ವಿಕೆಟ್ ಪತನವಾಗುವ ಕಾಲ ಸನಿಹವಾಗಿದೆ. ಈ ವಾರ ಬಿಗ್ ಬಾಸ್ ಮನೆಯಿಂದ ಯಾರು ಆಚೆ ಬರ್ತಾರೆ ಅನ್ನೋ ಭವಿಷ್ಯ ಇಂದೇ ಡಿಸೈಡ್ ಆಗುತ್ತಿದೆ.
ಬಿಗ್ ಬಾಸ್ ಮನೆಯಲ್ಲಿ ಈ ವಾರದ ಟಾಸ್ಕ್ ರೆಸಾರ್ಟ್‌ನಿಂದ ಶುರುವಾಗಿ ಕಿರಿಕ್‌ನಿಂದಲೇ ಎಂಡ್ ಆಗಿದೆ. ಬಿಗ್ ಬಾಸ್ ರೆಸಾರ್ಟ್‌ನಲ್ಲಿ ಮೊದಲು ಅತಿಥಿಗಳಾದ ಚೈತ್ರಾ ತಂಡ ರೆಸಾರ್ಟ್ ಸಿಬ್ಬಂದಿಗಳಿಂದ ಸಖತ್ ಸೇವೆ ಮಾಡಿಸಿಕೊಂಡಿತ್ತು. ಇದಾದ ಮೇಲೆ ಅದಲು ಬದಲಾಗಿದ್ದು, ಭವ್ಯ ಅವರ ತಂಡ ಸಿಕ್ಕಾಪಟ್ಟೆ ಕಾಟ ಕೊಟ್ಟಿದೆ. ಅದರಲ್ಲೂ ರಜತ್ ಕೊಟ್ಟ ಹಾವಳಿಗೆ ಚೈತ್ರಾ ತಂಡ ಹೈರಾಣಾಗಿ ಹೋಗಿತ್ತು.
/newsfirstlive-kannada/media/post_attachments/wp-content/uploads/2024/12/BBK-RAJATH.jpg)
ರೆಸಾರ್ಟ್ ಟಾಸ್ಕ್ ಮುಗಿಯುತ್ತಿದ್ದಂತೆ ಬಿಗ್ ಬಾಸ್ ಮನೆಯಲ್ಲಿ ಈ ವಾರದ ಅಸಲಿ ಗೇಮ್ ನಡೆದಿದೆ. ಈ ವಾರದ ಟಾಸ್ಕ್‌ನಲ್ಲಿ ಮಂಜು ಹಾಗೂ ಧನರಾಜ್ ಅವರು ತಲಾ 8 ಸ್ಟಾರ್‌ಗಳನ್ನ ತೆಗೆದುಕೊಂಡು ಮಿಂಚಿದ್ದಾರೆ. ಉಳಿದವರಲ್ಲಿ ಹನುಮಂತುಗೆ ಈ ವಾರದ ಕಳಪೆ ಸ್ಥಾನ ಸಿಕ್ಕಿದೆ.
ಬಿಗ್ ಬಾಸ್ ಮನೆಯಲ್ಲಿ ಈ ವಾರ ಕ್ಯಾಪ್ಟನ್ ಭವ್ಯಾ ಸೇಫ್ ಆದ್ರೆ ರಜತ್ ಅವರನ್ನ ಅಚ್ಚರಿ ಎಂಬಂತೆ ಯಾರೊಬ್ಬರು ನಾಮಿನೇಟ್ ಮಾಡಲೇ ಇಲ್ಲ. ಇನ್ನು 8 ಮಂದಿ ಸದಸ್ಯರು ಈ ವಾರ ಬಿಗ್ ಬಾಸ್ ಮನೆಯಿಂದ ಹೊರ ಹೋಗಲು ನೇರವಾಗಿ ನಾಮಿನೇಟ್ ಆಗಿದ್ದಾರೆ.
/newsfirstlive-kannada/media/post_attachments/wp-content/uploads/2024/12/Bigg-boss-Eliminated.jpg)
ಅಂತಿಮವಾಗಿ ಬಿಗ್ ಬಾಸ್ ಮನೆಯಿಂದ ಈ ವಾರ ಆಚೆ ಹೋಗಲು ಚೈತ್ರಾ, ಗೌತಮಿ, ಮಂಜು, ಧನರಾಜ್, ಹನುಮಂತ, ಮೋಕ್ಷಿತಾ, ತ್ರಿವಿಕ್ರಮ್, ಐಶ್ವರ್ಯಾ ನಾಮಿನೇಟ್ ಆಗಿದ್ದಾರೆ. ಕಳೆದ ವಾರ ತ್ರಿವಿಕ್ರಮ್ ಅವರು ಮನೆಯಿಂದ ಆಚೆ ಬಂದು ವಾಪಸ್ ಬಂದಿದ್ದರು. ಈ ವಾರ ಮನೆಯಿಂದ ಒಬ್ಬರು ಆಚೆ ಬರೋದು ಪಕ್ಕಾ ಎನ್ನಲಾಗಿದೆ.
ಬಿಗ್ ಬಾಸ್ ಪ್ರೇಕ್ಷಕರ ವೋಟಿಂಗ್ ಹಿನ್ನೆಲೆಯಲ್ಲಿ ಈ ವಾರ ವೋಟಿಂಗ್ ಲೈನ್ ತೆರೆಯಲಾಗಿದೆ. ಶುಕ್ರವಾರ ರಾತ್ರಿ 11 ಗಂಟೆ ತನಕ ಅಂದ್ರೆ ಇಂದು ರಾತ್ರಿವರೆಗೆ ವೀಕ್ಷಕರ ವೋಟಿಂಗ್ ಲೈನ್ ತೆರೆದಿರುತ್ತದೆ. ಈ ಹಿನ್ನೆಲೆಯಲ್ಲಿ ಐಶ್ವರ್ಯಾ, ಮಂಜು, ಹನುಮಂತ, ಗೌತಮಿ, ತ್ರಿವಿಕ್ರಮ್, ಮೋಕ್ಷಿತಾ, ಧನರಾಜ್ ಈ 8 ಮಂದಿಯಲ್ಲಿ ಯಾರು ವೀಕ್ಷಕರ ಮನಗೆದ್ದಿದ್ದಾರೆ ಅನ್ನೋದು ಇಂದು ಡಿಸೈಡ್ ಆಗಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us