Advertisment

BBK11: ಜಗದೀಶ್ ಮನೆಯ ಕ್ಯಾಪ್ಟನ್ ಆಗ್ತಾರಾ? ಬಿದ್ದು ಬಿದ್ದು ನಕ್ಕ ಕಿಚ್ಚ ಸುದೀಪ್!

author-image
admin
Updated On
BBK11: ಜಗದೀಶ್ ಮನೆಯ ಕ್ಯಾಪ್ಟನ್ ಆಗ್ತಾರಾ? ಬಿದ್ದು ಬಿದ್ದು ನಕ್ಕ ಕಿಚ್ಚ ಸುದೀಪ್!
Advertisment
  • ಬಿಗ್ ಬಾಸ್ ಮನೆಗೆ ಜಗದೀಶ್ ಕ್ಟಾಪ್ಟನ್ ಧನರಾಜ್ ಅಡ್ವೈಸ್ ಏನು?
  • ಧನರಾಜ್ ಮಾತಿಗೆ ಬಿದ್ದು, ಬಿದ್ದು ನಕ್ಕ ಬಿಗ್ ಬಾಸ್ ಮನೆಯ ಸದಸ್ಯರು
  • 2 ವಾರದ ಬಳಿಕ 3ನೇ ವಾರಕ್ಕೆ ಕಾಲಿಡುವ ಮುನ್ನ ಕಿಚ್ಚನ ಎಚ್ಚರಿಕೆ

ಬಿಗ್ ಬಾಸ್ ಸೀಸನ್ 11 ರಿಯಾಲಿಟಿ ಶೋ 2 ವಾರಗಳನ್ನ ಯಶಸ್ವಿಯಾಗಿ ಮುಗಿಸಿದೆ. 2 ವಾರದ ಬಳಿಕ 3ನೇ ವಾರಕ್ಕೆ ಕಾಲಿಡುವ ಮುನ್ನ ಸ್ಪರ್ಧಿಗಳಿಗೆ ಕಿಚ್ಚ ಸುದೀಪ್ ಎಚ್ಚರಿಸಿದ್ದಾರೆ. ಸೂಪರ್ ಸಂಡೇ ವಿಥ್ ಸುದೀಪ್ ಎಪಿಸೋಡ್ ಸಾಕಷ್ಟು ಮಜಾವಾಗಿದ್ದು, ಮನೆಯ ಎಲ್ಲಾ ಸದಸ್ಯರು ಬಿಂದಾಸ್ ಆಗಿ ಕಾಲ ಕಳೆದಿದ್ದಾರೆ.

Advertisment

ಬಿಗ್ ಬಾಸ್ ಮನೆಯಲ್ಲಿ ವೀಕೆಂಡ್ ಬಂದ್ರೆ ಎಲಿಮಿನೇಷನ್ ಜೊತೆಗೆ ಕಿಚ್ಚ ಸುದೀಪ್ ಅವರ ಪಂಚಾಯ್ತಿ ಪ್ರಮುಖವಾಗಿದೆ. ಈ ವೀಕೆಂಡ್‌ನಲ್ಲಿ ಪ್ರಾಮಾಣಿಕತೆ ಹಾಗೂ ಬಿಗ್ ಬಾಸ್ ಮನೆಯ ನಿಯಮ ಮುರಿದವರಿಗೆ ಬುದ್ಧಿ ಕಲಿಸಲಾಗಿದೆ. ಇದರ ಜೊತೆಗೆ ಕಳೆದ ವಾರದಲ್ಲಿ ಆದ ತಪ್ಪುಗಳ ಬಗ್ಗೆ ಕಿಚ್ಚನ ಒಂದೊಂದು ಮಾತುಗಳು ಮನೆಯ ಸದಸ್ಯರ ಆಟಕ್ಕೆ ಹೊಸ ಕಿಚ್ಚು ಹಚ್ಚಿದೆ.

publive-image

ಕಳೆದ ವಾರ ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆಗಿದ್ದ ಹಂಸಾ ಅವರ ಬಗ್ಗೆಯೇ ದೊಡ್ಡ ಚರ್ಚೆಯಾಗಿದೆ. ಸೂಪರ್ ಸಂಡೇ ಎಪಿಸೋಡ್‌ನಲ್ಲಿ ಕಿಚ್ಚ ಸುದೀಪ್ ಅವರು ಧನರಾಜ್ ಅವರಿಗೆ ಹಂಸಾ ಕ್ಯಾಪ್ಟೆನ್ಸಿಯ ಒಂದು ರಿವ್ಯೂ ಕೊಡಿ ಎಂದು ಕೇಳಿದ್ದಾರೆ. ಆಗ ಉತ್ತರಿಸಿದ ಧನರಾಜ್, ಯಾವ ತಪ್ಪು ಎಲ್ಲಾ ಮಾಡಬಾರದು. ಎಷ್ಟು ಅಲರ್ಟ್ ಆಗಿರಬೇಕು ಅನ್ನೋದನ್ನ ಹೇಳಲು ಹೋಗುತ್ತಾರೆ.

ಧನರಾಜ್ ಉತ್ತರಿಸುವ ರೀತಿಗೆ ಭಯ ಆಗ್ತಾ ಇದ್ಯಾ ಎಂದು ಸುದೀಪ್ ಅವರು ಕೇಳಿದ್ದಾರೆ. ಆಗ ಧನರಾಜ್ ಸಾರ್ ನೀವು ಹಾಗೆ ನೋಡ ಬೇಡಿ, ಸ್ಮೈಲ್‌ನಲ್ಲಿ ಮಾತನಾಡಿಸಿ ಎಂದಿದ್ದಾರೆ. ಅದಕ್ಕೆ ಸುದೀಪ್ ಅವರು ಭಯ ಆಗ್ತಾ ಇದ್ಯಾ ಇನ್ನೂ ಬೇರೆ ರೀತಿಯಲ್ಲಿ ಕೇಳಲಾ ಎಂದು ವ್ಯಂಗ್ಯವಾಡಿದ್ದಾರೆ.

Advertisment

publive-image

ಕೊನೆಗೆ ಹಂಸಾ ಅವರಿಗೆ ಧನರಾಜ್ ಅಡ್ವೈಸ್ ಏನು ಅನ್ನೋ ಸುದೀಪ್ ಪ್ರಶ್ನೆಗೆ ಸ್ಟ್ರಾಂಗ್ ಆಗಿ ಇರಬೇಕು. ಹೆದರಬಾರದು. ಏನ್ ಡಿಸಿಷನ್ ತಗೊಂಡ್ರು ಅದಕ್ಕೆ ಬದ್ಧರಾಗಿರಬೇಕು ಎಂದು ಧನರಾಜ್ ಉತ್ತರಿಸಿದ್ದಾರೆ.

ಇದನ್ನೂ ಓದಿ: ಬಿಗ್​ಬಾಸ್ ಮನೆಯಲ್ಲಿ ಜಗದೀಶ್- ಹಂಸಾ ಡುಯೆಟ್.. ಹೇಗಿರುತ್ತೆ ಇಂದಿನ ಸೂಪರ್ ಸಂಡೇ! 

ಜಗದೀಶ್ ಕ್ಯಾಪ್ಟನ್ ಆದ್ರೆ ಹೇಗಿರುತ್ತೆ?
ಹಂಸಾ ಅವರ ಕ್ಯಾಪ್ಟನ್ಸಿ ಬಗ್ಗೆ ಮಾತನಾಡುವಾಗ ಹಂಸಾ ಜೊತೆ ಡುಯೆಟ್ ಆಡಿದ ಜಗದೀಶ್ ಅವರ ಬಗ್ಗೆ ಕಿಚ್ಚ ಸುದೀಪ್ ಅವರು ಕೇಳಿದ್ದಾರೆ. ಜಗದೀಶ್ ಕ್ಯಾಪ್ಟನ್ ಆದ್ರೆ ಮನೆ ಹೇಗಿರುತ್ತೆ? ಎಂದಾಗ ಧನರಾಜ್ ಅವರು ಸ್ಮಾರ್ಟ್‌ ಆಗಿ ಉತ್ತರಿಸಿದ್ದಾರೆ. ಧನರಾಜ್ ಅವರ ಮುಗ್ಧವಾದ ಮಾತುಗಳಿಗೆ ಮನೆಯ ಎಲ್ಲಾ ಸದಸ್ಯರು ಬಿದ್ದು, ಬಿದ್ದು ನಕ್ಕಿದ್ದಾರೆ.

Advertisment

publive-image

ಬಿಗ್ ಬಾಸ್‌ ಮನೆಯಲ್ಲಿ ಜಗದೀಶ್ ಅವರು ಕ್ಯಾಪ್ಟನ್ ಆದ್ರೆ ರೂಲ್ಸ್ ಬ್ರೇಕ್ ಮಾಡುವವರೇ ಕ್ಯಾಪ್ಟನ್ ಆದ್ರೆ ಹೇಗೆ ಸಾರ್. ಎಲ್ಲರನ್ನು ಮಲಗಿಸುತ್ತಾರೆ ಸಾರ್ ಎಂದು ಧನರಾಜ್ ಉತ್ತರಿಸಿದ್ದಾರೆ. ಜಗದೀಶ್ ಅವರು ಇನ್ನೂ ಕ್ಯಾಪ್ಟನ್ಸಿ ಟಾಸ್ಕ್‌ಗಳಲ್ಲಿ ಗೆಲ್ಲಬೇಕಿದೆ. ಆದರೆ ಜಗದೀಶ್ ಅವರ ಖಡಕ್ ಮಾತುಗಳು, ಸಮಯ ಸಿಕ್ಕಾಗಲೆಲ್ಲಾ ನಿದ್ದೆ ಮಾಡೋದು ಕಿಚ್ಚನ ಪಂಚಾಯ್ತಿಯಲ್ಲಿ ಚರ್ಚೆಯಾಗಿದೆ. ಜಗದೀಶ್ ಅವರು ಕ್ಯಾಪ್ಟನ್ ಆದ್ರೆ ಹೇಗಿರುತ್ತೆ ಅನ್ನೋ ಊಹೆಗೆ ಮನೆಯ ಸದಸ್ಯರು ನಕ್ಕು, ನಕ್ಕು ಸುಸ್ತಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment