/newsfirstlive-kannada/media/post_attachments/wp-content/uploads/2024/12/BBK-11-Gold-Suresh-8.jpg)
ಬಿಗ್ ಬಾಸ್ ಸೀಸನ್ 11 ವೀಕ್ಷಕರಿಗೆ ಪ್ರತಿ ದಿನವೂ ಒಂದೊಂದು ಅಚ್ಚರಿ, ರೋಚಕ ತಿರುವು ಸಿಗುತ್ತಾ ಇದೆ. ಕಳೆದ ವಾರದ ನಾಮಿನೇಷನ್‌ನಲ್ಲಿ ಔಟ್ ಆದವರು ಒಬ್ಬರಾದ್ರೆ ಸೇಫ್ ಆದ ಮತ್ತೊಬ್ಬ ಸ್ಪರ್ಧಿ ಬಿಗ್ ಬಾಸ್ ಮನೆಯಿಂದ ಹೊರ ಬಂದು ಎಲ್ಲರಿಗೂ ಶಾಕ್ ಕೊಟ್ಟಿದ್ದರು.
ಬಿಗ್ ಬಾಸ್ ಸೀಸನ್ 11, 12ನೇ ವಾರದಲ್ಲಿ ಗೋಲ್ಡ್ ಸುರೇಶ್ ಅವರು ದಿಢೀರ್ ಆಚೆ ಬಂದಿದ್ದು ಶಾಕಿಂಗ್ ನ್ಯೂಸ್ ಆಗಿತ್ತು. ಕ್ಯಾಪ್ಟನ್ ಆಗಿದ್ದ ಗೋಲ್ಡ್ ಸುರೇಶ್ ಅವರು ಬಿಗ್ ಬಾಸ್ ಆಟವನ್ನ ಕ್ವಿಟ್ ಮಾಡಿದ್ದು ಏಕೆ ಅನ್ನೋದು ನಿಗೂಢವಾಗಿತ್ತು. ಬಿಗ್ ಬಾಸ್ ಮನೆಗೆ ಹೇಗೆ ಹೋದರೋ ಗೋಲ್ಡ್ ಸುರೇಶ್ ಅವರು ಹಾಗೇ ಹೊರಗೆ ಬಂದಿದ್ದರು.
ಬಿಗ್ ಬಾಸ್ ಮನೆಯಿಂದ ಹೊರ ಬಂದ ಮೇಲೆ ಕೆಲ ದಿನಗಳ ಕಾಲ ಗೋಲ್ಡ್ ಸುರೇಶ್ ಅವರು ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ಇದೀಗ ಗೋಲ್ಡ್ ಸುರೇಶ್ ನ್ಯೂಸ್ ಫಸ್ಟ್ ಚಾನೆಲ್‌ಗೆ ವಿಶೇಷ ಸಂದರ್ಶನ ನೀಡಿದ್ದಾರೆ. ಇದರ ಜೊತೆಗೆ ಬಿಗ್ ಬಾಸ್ ಮನೆಗೆ ಮತ್ತೆ ಹೋಗ್ತಿರಾ ಅನ್ನೋ ಪ್ರಶ್ನೆಗೆ ಹೌದು ಅನ್ನೋ ಉತ್ತರ ನೀಡಿದ್ದಾರೆ.
ಇದನ್ನೂ ಓದಿ: ‘ನಾನು ಯಾಕೆ ಬಿಗ್ಬಾಸ್ ಮನೆಯಿಂದ ಆಚೆ ಬಂದೆ..’ ಅಸಲಿ ಕಾರಣ ಬಿಚ್ಚಿಟ್ಟ ಗೋಲ್ಡ್ ಸುರೇಶ್
ಬಿಗ್ ಬಾಸ್ ಅವರು ಏನಂದ್ರೂ ಕರೆದು ನೀವು ಬರಲೇಬೇಕು. ಜನ ನಿಮ್ಮನ್ನ ಇಷ್ಟ ಪಡುತ್ತಾರೆ ಅಂತ ಹೇಳಿದ್ರೆ ನಾನು ಖಂಡಿತ ಹೋಗ್ತೀನಿ ಎಂದು ಗೋಲ್ಡ್ ಸುರೇಶ್ ನ್ಯೂಸ್ ಫಸ್ಟ್‌ಗೆ ತಿಳಿಸಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಡ್ರಮ್ ಟಾಸ್ಕ್ ನಡೆದಾಗ ಮಂಜು, ತ್ರಿವಿಕ್ರಮ್ ನನ್ನ ಕಾಲಿನ ಮೇಲೆ ಬಿದ್ದರು. ಮಂಜು, ತ್ರಿವಿಕ್ರಮ್ ಬಿದ್ದಾಗ ನನ್ನ ಕಾಲು ಫ್ರಾಕ್ಚರ್ ಆಗುತ್ತೆ. ಕಾಲಿನ ಮುಖ್ಯವಾದ ಮೂಳೆ ಡಿಸ್ ಲೊಕೇಟ್ ಆಗಿದೆ. ಅದರ ಮೇಲಿನ ಮೂಳೆ ವೀಕ್ ಆಗಿದೆ ಎಂದು ಡಾಕ್ಟರ್ ಹೇಳಿದ್ದರು. ನನಗೆ 3 ವಾರ ವಿಶ್ರಾಂತಿ ಪಡೆಯಲೇಬೇಕು ಎಂದು ಡಾಕ್ಟರ್ ಹೇಳಿದ್ದರು.
ಕಾಲಿನ ನೋವಿನ ಹಿನ್ನೆಲೆಯಲ್ಲಿ ಬಿಗ್ ಬಾಸ್ ಮನೆಯಲ್ಲಿ ನನ್ನ ಪರ್ಫಾಮೆನ್ಸ್ ಸ್ವಲ್ಪ ಕಮ್ಮಿ ಆಗಿದ್ದು ನಿಜ. ಆಮೇಲೆ ನನಗೆ ಅನ್ನಿಸಿತು. ಈ ಕಾಲು ನೋವು ಇಟ್ಟುಕೊಂಡು ಹೇಗೆ ಆಡೋದು ಅಂತ ಯೋಚ್ನೆ ಮಾಡುತ್ತಿದ್ದೆ. ಆದರೆ ಬಿಗ್ ಬಾಸ್ ತಂಡದವರು ನನಗೆ ಬೆಂಬಲ ಕೊಟ್ಟರು. ಬಿಗ್ ಬಾಸ್ ಮನೆಯಲ್ಲಿದ್ದ ನನ್ನ ಸ್ನೇಹಿತರು ಸಾಥ್ ಕೊಡುತ್ತಿದ್ದರು. ನನಗೆ ಹುಷಾರಿಲ್ಲ ಅಂದಾಗ ಮನೆಯಲ್ಲಿದ್ದ ಎಲ್ಲಾ ನನ್ನ ಸ್ನೇಹಿತರು ತುಂಬಾ ಚೆನ್ನಾಗಿ ನೋಡಿಕೊಂಡಿದ್ದರು. ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟು ದಿನ ಬಹಳ ಒಳ್ಳೆ ಜರ್ನಿ ಎಂದು ಗೋಲ್ಡ್ ಸುರೇಶ್ ತಮ್ಮ ಖುಷಿ ಹಂಚಿಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ