Advertisment

BBK11: ಇಂದು ಕಿಚ್ಚನ ಬದಲು ಭಟ್ರು! ಬಿಗ್​ ಬಾಸ್​ ಮನೆಯೊಳಕ್ಕೆ ಕಾಲಿಟ್ಟ ವಿಕಟ ಕವಿ

author-image
AS Harshith
Updated On
BBK11: ಇಂದು ಕಿಚ್ಚನ ಬದಲು ಭಟ್ರು! ಬಿಗ್​ ಬಾಸ್​ ಮನೆಯೊಳಕ್ಕೆ ಕಾಲಿಟ್ಟ ವಿಕಟ ಕವಿ
Advertisment
  • ಇಂದು ಮತ್ತು ನಾಳೆ ಕಿಚ್ಚ ಬಿಗ್​ ಬಾಸ್​ ಹೋಸ್ಟ್​ ಮಾಡಲ್ಲ
  • ಕಿಚ್ಚನ ಬದಲಿಗೆ ಬಿಗ್​ ಬಾಸ್​​ ಮನೆಯೊಳಕ್ಕೆ ಡೈರೆಕ್ಟರ್​ ಎಂಟ್ರಿ!
  • ಇಂದು ಯೋಗರಾಜ್​ ಭಟ್ರು.. ನಾಳೆ ಯಾರು ಗೊತ್ತಾ?

ಸ್ಯಾಂಡಲ್​​ವುಡ್​ ನಟ, ಬಿಗ್​ ಬಾಸ್​ ಕನ್ನಡ ನಿರೂಪಕ ಕಿಚ್ಚ ಸುದೀಪ್​ ತನ್ನ ತಾಯಿಯನ್ನು ಕಳೆದುಕೊಂಡಿದ್ದಾರೆ. ಕಳೆದ ಆದಿತ್ಯವಾರದಂದು ಬೆಳಗ್ಗೆ ಕಿಚ್ಚನ ಅಮ್ಮ ಇಹಲೋಕ ತ್ಯಜಿಸಿದ್ದಾರೆ. ಸದ್ಯ ಅಮ್ಮನ ನೆನಪಲ್ಲೇ ಉಳಿದಿರುವ ನಟ ಈ ವಾರದ ಬಿಗ್​ ಬಾಸ್​ ಕಾರ್ಯಕ್ರಮಕ್ಕೆ ಗೈರಾಗಲಿದ್ದಾರೆ.

Advertisment

ಹೌದು. ಕಿಚ್ಚ ಸುದೀಪ್ ವಾರದ ಕೊನೆಯಲ್ಲಿ ಬಂದು ಪಂಚಾಯ್ತಿ ನಡೆಸುತ್ತಿದ್ದರು. ಆದರೆ ತಾಯಿ ಸರೋಜಾ ಅವರನ್ನು ಕಳೆದುಕೊಂಡ ಸುದೀಪ್​ ಈ ವಾರಾಂತ್ಯದಲ್ಲಿ ನಿರೂಪಣೆಗೆ ಗೈರಾಗಲಿದ್ದಾರೆ. ಹಾಗಾಗಿ ಈ ವಾರದ ಬಿಗ್​ ಬಾಸ್​ ಮನೆಯೆ ಇಬ್ಬರು ಹೊಸ ಅತಿಥಿಗಳು ಭೇಟಿ ನೀಡಲಿದ್ದಾರೆ.

ಇದನ್ನೂ ಓದಿ: ಈ ವಾರ ಅತೀ ಹೆಚ್ಚು ವೀಕ್ಷಕರು ನೋಡಿದ ಟಾಪ್​ ಸೀರಿಯಲ್​ ಯಾವುದು..? ಹೇಗಿದೆ TRP ಲಿಸ್ಟ್​?

Advertisment


">October 26, 2024

ಇಂದು ನಿರ್ದೇಶಕ ಯೋಗರಾಜ್​ ಭಟ್ಟರು ಬಿಗ್​​ ಬಾಸ್​​ ಮನೆಯೊಳಕ್ಕೆ ಕಾಲಿಟ್ಟಿದ್ದಾರೆ. ಸ್ಪರ್ಧಿಗಳ ಜೊತೆಗೆ ಮಾತು, ನಗು, ಚರ್ಚೆ ಮಾಡಿದ್ದಾರೆ. ನಾಳೆ ಸೃಜನ್​ ಲೋಕೇಶ್​​ ಬಿಗ್​ ಬಾಸ್​​ ಮನೆಯೊಳಕ್ಕೆ ಎಂಟ್ರಿ ನೀಡಲಿದ್ದಾರೆ. ಆ ಮೂಲಕ ಕಿಚ್ಚನ ವಾರಾಂತ್ಯದ ಜವಾಬ್ದಾರಿಯನ್ನು ಇವರಿಬ್ಬರು ತುಂಬಲಿದ್ದಾರೆ. ಜೊತೆಗೆ ವೀಕ್ಷಕರಿಗೆ ಮನೋರಂಜನೆ ನೀಡಲಿದ್ದಾರೆ.

ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಹಿನ್ನಡೆ, ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವ ದಿನ; ಇಲ್ಲಿದೆ ನಿಮ್ಮ ರಾಶಿ ಭವಿಷ್ಯ

ಸುದೀಪ್​ ಅವರ ತಾಯಿ ಸರೋಜಾ ಸಂಜೀವ್​ರವರು ಕಳೆದ ಅದಿತ್ಯವಾರದಂದು ಬೆಳಗ್ಗಿನ ಜಾವ ನಿಧನರಾದರು. ವಯೋಸಹಜ ಕಾಯಿಲೆಯಿಂದಾಗಿ ನಿಧನರಾದರು. ಸರೋಜಾರವರು ಪತಿ ಸಂಜೀವ್​, ಮತ್ತು ಕಿಚ್ಚ ಸುದೀಪ್​ ಸೇರಿ ಮೂವರು ಮಕ್ಕಳನ್ನು ಅಗಲಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment